ಸಾರಾಂಶ
ತುಮಕೂರು ದಸರಾ ಮಹೋತ್ಸವದ ನವರಾತ್ರಿ ಜನಪದ ರಂಗ ಉತ್ಸವ ಕಾರ್ಯಕ್ರಮಕ್ಕೆ ತಿಪಟೂರಿನ ಕಲಾವಿದರು ಭಾಗವಹಿಸಿ ಕಲೆ ಪ್ರದರ್ಶನ ನಡೆಸಿದರು.
ತಿಪಟೂರು : ತುಮಕೂರು ದಸರಾ ಮಹೋತ್ಸವದ ನವರಾತ್ರಿ ಜನಪದ ರಂಗ ಉತ್ಸವ ಕಾರ್ಯಕ್ರಮಕ್ಕೆ ತಿಪಟೂರಿನ ಕಲಾವಿದರು ಭಾಗವಹಿಸಿ ಕಲೆ ಪ್ರದರ್ಶನ ನಡೆಸಿದರು.
ತುಮಕೂರು ದಸರಾ ಮಹೋತ್ಸವದಲ್ಲಿ ಮತ್ತಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಬಿದರಾಂಬಿಕ ದೇವಿ ಕೃಪಾಪೋಷಿತ ಚಿಣ್ಣರ ಮೂಡಲಪಾಯ ಯಕ್ಷಗಾನ ಮಂಡಳಿ ವತಿಯಿಂದ ಸೀತಾ ಪರಿತ್ಯಾಗ ನಾಟಕವನ್ನು ಭಾಗವತ್ ಮಂಜಪ್ಪ ನೇತೃತ್ವದಲ್ಲಿ ಹಾಗೂ ಅರಳಗುಪ್ಪೆ ಎ.ಆರ್ ಪುಟ್ಟಸ್ವಾಮಿ ತಂಡದವರಿಂದ ಮೂಡಲಪಾಯ ಯಕ್ಷಗಾನದ ದೇವಿ ಮಹಾತ್ಮೆ ಕಾರ್ಯಕ್ರಮ ಹಾಗೂ ನಟರಾಜ ನೃತ್ಯ ಶಾಲೆ ವತಿಯಿಂದ ಶಾಸ್ತ್ರೀಯ ನೃತ್ಯ ಹಾಗೂ ಜನಪದ ನೃತ್ಯ ಕಾರ್ಯಕ್ರಮ ಜರುಗಿತು.