ಏಪ್ರಿಲ್‌ 20ರಿಂದ ಸೀತಾಸತಿ ಡಾಕು ಮಹಾರಾಜರ ಜಾತ್ರಾ ಮಹೋತ್ಸವ

| Published : Apr 13 2024, 01:03 AM IST

ಏಪ್ರಿಲ್‌ 20ರಿಂದ ಸೀತಾಸತಿ ಡಾಕು ಮಹಾರಾಜರ ಜಾತ್ರಾ ಮಹೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ (ಮೂಲಸ್ಥಳ) ಶ್ರೀ ಸೀತಾಸತಿ ಡಾಕು ಮಹಾರಾಜರ 30ನೇ ವರ್ಷದ ಜಾತ್ರಾ ಮಹೋತ್ಸವ ಏ. 20ರಿಂದ 22ರ ವರೆಗೆ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಗದಿಗ್ಯಾನಾಯ್ಕ ತಿಳಿಸಿದರು.

ಬ್ಯಾಡಗಿ: ತಾಲೂಕಿನ ಕಾಟೇನಹಳ್ಳಿ ಗ್ರಾಮದ (ಮೂಲಸ್ಥಳ) ಶ್ರೀ ಸೀತಾಸತಿ ಡಾಕು ಮಹಾರಾಜರ 30ನೇ ವರ್ಷದ ಜಾತ್ರಾ ಮಹೋತ್ಸವ ಏ. 20ರಿಂದ 22ರ ವರೆಗೆ ಜರುಗಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಗದಿಗ್ಯಾನಾಯ್ಕ ತಿಳಿಸಿದರು.

ಈ ಕುರಿತು ಪಟ್ಟಣದ ಕಾನಿಪ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ತಾಲೂಕಿನ ಕಾಟೇನಹಳ್ಳಿ ಗ್ರಾಮದ ಮೂಲದೇವರ ಸ್ಥಳದಲ್ಲಿ ಕ್ಷೇತ್ರ ಸಂಪೂರ್ಣವಾಗಿ ಅಭಿವೃದ್ಧಿ ಹೊಂದುತ್ತಿದೆ. ಆ ಜಾಗೆಯಲ್ಲಿ ಜಾತ್ರೋತ್ಸವ ನೆರವೇರಿಸಲು ಸಮಿತಿ ಹಾಗೂ ಗ್ರಾಮಸ್ಥರು, ರಾಜ್ಯದ ಸಮಾಜ ಬಾಂಧವರು ನಿರ್ಧರಿಸಿದ್ದು, ಮುಂಬರುವ ದಿನಗಳಲ್ಲಿ ಕ್ಷೇತ್ರ ರಾಜ್ಯದ ಗಮನ ಸೆಳೆಯಲಿದೆ, ಇದಕ್ಕಾಗಿ ಹೊಸದಾಗಿ ರಾಜ್ಯಮಟ್ಟದ ಟ್ರಸ್ಟ್ ಕೂಡ ರಚನೆಯಾಗಿದೆ. ಜಾತ್ರೆಗೆ ಆಗಮಿಸುವ ಎಲ್ಲ ಭಕ್ತರಿಗೆ ವಾಹನಗಳ ಪಾರ್ಕಿಂಗ್ ಹಾಗೂ ಕುಡಿಯುವ ನೀರು, ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದರು.

ಏ.20ರಂದು ಶ್ರೀ ಸೀತಾಸತಿ ಹಾಗೂ ಶ್ರೀ ವಿಘ್ನೇಶ್ವರ, ಶ್ರೀಕರಿಯಮ್ಮದೇವಿಗೆ ವಿಶೇಷ ಪೂಜೆಗಳು ಜರುಗಲಿವೆ. 21ರಂದು ಬೆಳಗ್ಗೆ 8 ಗಂಟೆಗೆ ಸೀತಾಸತಿಗೆ ಉಡಿತುಂಬುವುದು, ಶ್ರೀವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯಲಿದೆ.10 ಗಂಟೆಗೆ ಸೀತಾಸತಿ ಡಾಕುಮಹಾರಾಜರ ಉತ್ಸವ ಮೂರ್ತಿ ಪಲ್ಲಕ್ಕಿ ಮಹೋತ್ಸವಜರುಗಲಿದೆ. ಸಂಜೆ ಬೋಗ್‌ ಕಾರ್ಯಕ್ರಮ ಜರುಗಲಿದೆ. ಧಾರ್ಮಿಕ ಕಾರ್ಯಕ್ರಮದ ಸಾನಿಧ್ಯವನ್ನು ಮರಿಯಮ್ಮದೇವಿ ಸಾಲೂರುಮಠದ ಸೈನಾಭಗವತ್ ಸ್ವಾಮೀಜಿ, ಬಂಜಾರ ಶಕ್ತಿಪೀಠ ವಿಜಯನಗರದ ಶಿವಪ್ರಕಾಶ ಮಹಾರಾಜರು, ವಿಜಯಪುರ ದುರ್ಗಾದೇವಿ ದೇವಸ್ಥಾನದ ಡಾ.ಜಗನು ಮಹಾರಾಜರು ವಹಿಸುವರು.

22ರಂದು ಜರುಗುವ ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಚಲನಚಿತ್ರ ನಟ ಹಾಗೂ ಬಂಜಾರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಗೋವಿಂದಸ್ವಾಮಿ ಎ.ಆರ್. ನೇರವೇರಿಸುವರು. ಧಾರ್ಮಿಕ ಉಪನ್ಯಾಸವನ್ನು ಭೋಜರಾಜ ನಾಯ್ಕ ನೀಡುವರು. ಮುಖ್ಯ ಅತಿಥಿಗಳಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಆರ್.ಬಿ. ನಾಯ್ಕ, ಸೂರಗೊಂಡನಕೊಪ್ಪ ಸೇವಾಲಾಲ್ ಮಠದ ಹನುಮಂತನಾಯ್ಕ, ವಿವಿಧ ಸಾಧಕರಾದ ರಾಜನಾಯ್ಕ, ಭರತ್ ನಾಯ್ಕ, ಗೋಪಾಲನಾಯ್ಕ, ಮಲ್ಲಿಕಾರ್ಜುನ ಕಾರ್ಗಿ, ನೇಮಿರಾಜ್‌ ಕವಿರಾಜ, ರಾಜು ಭಂಡ್ರಿ, ಹನುಮಂತ ನಾಯ್ಕ, ಪ್ರಧಾನ ಅರ್ಚಕ ದೇವಲೆಪ್ಪ ಲಮಾಣಿ, ಶಿಕ್ಷಕ ರಮೇಶ ನಾಯ್ಕ, ಶೇಖಪ್ಪ ಉಳ್ಳಾಗಡ್ಡಿ, ಗದಿಗೆಯ್ಯ ಎಚ್.ಶಿವರುದ್ರಪ್ಪ ಬಣಕಾರ, ಜಯಪ್ಪ ಮೋಟೆಬೆನ್ನೂರು, ಹನುಮಂತಪ್ಪ ಬಾರ್ಕಿ ಪಾಲ್ಗೊಳ್ಳಲಿದ್ದಾರೆ. ಅದೇದಿನ ರಾತ್ರಿ 8 ಗಂಟೆಗೆ ರಮೇಶ ಲಮಾಣಿ ಸರಿಗಮಪ ಸೀಜನ್ 20 ರನ್ನರ ಅಪ್‌ ಇವರಿಂದ ವಿಶೇಷ ಸಂಗೀತ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟನ ಗೌರವಾಧ್ಯಕ್ಷ ಲಿಂಗಪ್ಪ ದೊಡ್ಡಮನಿ, ಪದಾಧಿಕಾರಿಗಳಾದ ಚನ್ನಬಸಪ್ಪ ಲಮಾಣಿ, ಬೈರಪ್ಪ ಲಮಾಣಿ, ಸೋಮಶೇಖರಪ್ಪ ಲಮಾಣಿ, ಶಂಕರ ಲಮಾಣಿ, ಮಂಜ್ಯಾ ನಾಯ್ಕ, ರಮೇಶ ನಾಯ್ಕ, ರುದ್ರಪ್ಪ ಲಮಾಣಿ, ಮೂಕಪ್ಪ ನಾಯ್ಕ, ಸತೀಶ ನಾಯ್ಕ ಬಿ.ಆರ್. ಹಿರಾನಾಯ್ಕ, ಹನುಮಂತ ನಾಯ್ಕ, ಶಂಕ್ರಪ್ಪ ಲಮಾಣಿ, ಟೋಪ್ಯಾ ನಾಯ್ಕ, ಭದ್ರಪ್ಪ ಲಮಾಣಿ, ಜಗದೀಶ ಲಮಾಣಿ, ಶಂಕ್ರಪ್ಪ ಲಮಾಣಿ, ಮಹೇಶ ಎಸ್.ಶಾಂತಪ್ಪ ಲಮಾಣಿಇದ್ದರು.