ಕೊಪ್ಪ: ಮೇಗುಂದಾ ಹೋಬಳಿ ಜನತೆ ಬಹುದಿನದ ಬೇಡಿಕೆಯಾದ ಆಧಾರ್ ಕೇಂದ್ರಕ್ಕೆ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಮಾರ್ಗದರ್ಶನದಂತೆ ಜಯಪುರದ ಬಿಎಸ್‌ಎನ್‌ಎಲ್ ಕೇಂದ್ರಕ್ಕೆ ಭೇಟಿ ನೀಡಿ ಸ್ಥಳಾವಕಾಶವನ್ನು ಬಿಎಸ್‌ಎನ್‌ಎಲ್‌ನ ಎಜಿಎಂ ಗೋಪಾಲಕೃಷ್ಣ ಅವರೊಂದಿಗೆ ಪರಿಶೀಲಿಸಲಾಯಿತು ಎಂದು ಜಿಲ್ಲಾ ದಿಶಾ ಸಮಿತಿ ಸದಸ್ಯರಾದ ಮಣಿಕಂಠನ್ ಕಂದಸ್ವಾಮಿ ತಿಳಿಸಿದರು .

ಆಧಾರ್ ಕೇಂದ್ರ ಪ್ರಕ್ರಿಯೆ ಟೆಂಡರ್ ಹಂತದಲ್ಲಿದ್ದು ಕನಿಷ್ಠ ಕಾಲಮಿತಿಯೊಳಗೆ ಜಯಪುರದಲ್ಲಿ ಆಧಾರ್ ಕೇಂದ್ರ ಉದ್ಘಾಟನೆ ಯಾಗಿ ಸಾರ್ವಜನಿಕ ಅನುಕೂಲಕ್ಕೆ ಚಾಲನೆ ದೊರೆಯಲಿದೆ ಎಂದರು.

ಪ್ರಧಾನಿ ಮೋದಿ ಕನಸಿನ ಯೋಜನೆಯಾದ ೪ಜಿ ಸಚುರೇಶನ್ ಪ್ರೋಜೆಕ್ಟ್ ಅನುಷ್ಠಾನದ ಜೊತೆಗೆ ಈಗಾಗಲೇ ಸ್ಥಾಪಿತ ಬಿಎಸ್‌ಎನ್‌ಎಲ್ ಟವರ್‌ಗಳ ವ್ಯವಸ್ಥಿತ ಸುಧಾರಿತ ಸಂಪರ್ಕಕ್ಕೆ ನಿರಂತರ ಶ್ರಮಿಸುತ್ತಿರುವ ಸಂಸದರಾದ ಕೋಟ ಶ್ರಿನಿವಾಸ ಪೂಜಾರಿ ಮಾರ್ಗದರ್ಶನದಂತೆ ಸ್ಥಾಪಿತ ಹಾಗೂ ನೂತನ ಟವರ್‌ಗಳ ಸ್ಥಾಪನೆಗೆ ಜಾಗಗಳ ಪರಿಶೀಲನೆ ಮಾಡಲಾಯಿತು ಎಂದರು.

ತಾಲೂಕು ವ್ಯಾಪ್ತಿಯಲ್ಲಿ ಅನೇಕ ನೂತನ ಬಿಎಸ್‌ಎನ್‌ಎಲ್ ಟವರ್‌ಗಳ ಸ್ಥಾಪನೆ ನಿಟ್ಟಿನಲ್ಲಿ ಜಾಗಗಳ ಗುರುತಿಸುವ ಸಲುವಾಗಿ ಜಲದುರ್ಗಾ, ಮೇಗುಂದಾ, ಯಡಗುಂದಾ, ಗುಡ್ಡೇತೋಟ, ಕಲ್ಲುಗುಡ್ಡೆ, ಹುಲುಗರಡಿ, ಹೊಸೂರು, ಕಾಳನಾಯಕಕಟ್ಟೆ ಮತ್ತು ಹಂದಗಾರು ಮುಂತಾದ ಜಾಗಗಳ ಪರಿಶೀಲನೆ ಮಾಡಲಾಗಿದೆ ಎಂದು ಬಿಎಸ್‌ಎನ್‌ಎಲ್ ಎಜಿಎಂ ಗೋಪಾಲಕೃಷ್ಣ ಹೇಳಿದರು.

ಮಾಜಿ ಸದಸ್ಯರಾದ ಪ್ರವೀಣ್ ಕುಮಾರ್, ಜಯಮುರುಗೇಶ್, ಶ್ರೀನಿವಾಸ್ ಕಟ್ಟೇಮನೆ, ಮಂಜುನಾಥ್ ಅಣ್ಣು, ಪಧ್ಮನಾಭ ಮೇಗೂರು, ಶ್ರೀನಾಥ, ಪಬನಜಯ್ಯ, ನವೀನ್ ಕಲ್ಲುಗುಡ್ಡೆ, ಶಿವು ಇತದ್ದರು.