ಸಾರಾಂಶ
ಮಂಗಳೂರು: ಮಂಗಳೂರಿನ ಎಸ್.ಕೆ. ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ವಜ್ರಮಹೋತ್ಸವ ಪ್ರಯುಕ್ತ ಮಂಗಳೂರು, ಕುಳಾಯಿ, ಕೊಟ್ಟಾರಚೌಕಿ, ಮುಡಿಪು. ಮೂಡಬಿದಿರೆ ಶಾಖೆ ಮತ್ತು ಕೈಗಾರಿಕಾ ಶಾಖೆಯ ಸದಸ್ಯ-ಗ್ರಾಹಕರ ಸಮಾವೇಶ ಇತ್ತೀಚೆಗೆ ಶರವು ಶ್ರೀ ರಾಧಕೃಷ್ಣ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮ ಉದ್ಘಾಟಿಸಿದ ಮಂಗಳೂರಿನ ರಾಷ್ಟ್ರೀಯ ವಿಶ್ವಬ್ರಾಹ್ಮಣ ಸಮಾಜೋದ್ಧಾರಕ ಸಭಾ ಅಧ್ಯಕ್ಷ ನಾಗರಾಜ ಪಾಲ್ಕೆ ಮಾತನಾಡಿ, ಈ ಸಹಕಾರ ಸಂಘದ 60ವರ್ಷಗಳ ಸಾಧನೆ ಅತ್ಮಾವಲೋಕನ ಅತಿ ಅಗತ್ಯ ಎಂದರು.ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಯಜ್ಞೇಶ್ವರ ಇವರು ಸಂಘದ ಹುಟ್ಟು, ಬೆಳವಣಿಗೆ ಬಗ್ಗೆ ಪ್ರಾಸ್ತಾವಿಕವಾಗಿ ನುಡಿದರು. ಸಂಘದ ಅಧ್ಯಕ್ಷ ಪಿ. ಉಪೇಂದ್ರ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅಥಿತಿಗಳಾಗಿ ಮಂಗಳೂರು ವಿ.ವಿ.ಯ ನಿವೃತ್ತ ಪ್ರೊಫೆಸರ್ ಡಾ. ಕೆ.ಕೆ ಆಚಾರ್ಯ, ನೀರ್ಕೆರೆ ಸರ್ಕಾರಿ ಹಿ.ಪ್ರಾ.ಶಾಲೆ ಮುಖ್ಯೋಪಾಧ್ಯಾಯಿನಿ ಯಮುನಾ ಯೋಗೀಶ ಆಚಾರ್ಯ ವಿಶ್ವಬ್ರಾಹ್ಮಣ ಮಹಿಳಾ ಸಮಿತಿ ಅಧ್ಯಕ್ಷೆ ಅರುಣಾ ಸುರೇಸ್, ಉದ್ಯಮಿ ನಿಸಾರ್ ಅಹಮ್ಮದ್, ನಿವೃತ್ತ ಎಂಜಿನಿಯರ್ ವಾಸುದೇವ ಮಾರ್ನಾಡು, ಶ್ರೀಧರ ಆಚಾರ್ಯ ಉಪಸ್ಥಿತಿಯಲ್ಲಿ ಸುಮಾರು 17 ಸದಸ್ಯ ಗ್ರಾಹಕರನ್ನು ಗೌರವಿಸಲಾಯಿತು. ಗೌರವ ಅಭಿನಂದನೆ ಸ್ವೀಕರಿಸಿದ ಮನೋಹರಿ ಕಾವೂರು ಅಭಿಮಾನದ ಮಾತುಗಳನ್ನಾಡಿದರು. ಸದಸ್ಯ ಗ್ರಾಹಕ, ವಕೀಲ ಪದ್ಮನಾಭ ಕುಮಾರ್ ಡಿ. ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅದೃಷ್ಟ ಕೂಪನ್ ಮೂಲಕ ಐವರು ಅದೃಷ್ಟ ಗ್ರಾಹಕರಿಗೆ ಉಡುಗೊರೆ ನೀಡಲಾಯಿತು.
ಅಪೇಕ್ಷಾ, ಸಂಧ್ಯಾಶ್ರೀ, ರಶ್ಮಿತಾ ಪ್ರಾರ್ಥಿಸಿದರು. ಮೂಡುಬಿದಿರೆ ಶಾಖಾ ವ್ಯವಸ್ಥಾಪಕಿ ಕಸ್ತೂರಿ ಡಿ. ಆಚಾರ್ ಸ್ವಾಗತಿಸಿದರು. ಮುಡಿಪು ಶಾಖಾ ವ್ಯವಸ್ಥಾಪಕ ಪ್ರಸಾದ್ ಆಚಾರ್ಯ ವಂದಿಸಿದರು. ಮೂಡುಬಿದಿರೆ ಶಾಖೆಯ ಪ್ರಶಾಂತ್ ಕುಮಾರ್ ಟಿ. ಹಾಗೂ ಮುಡಿಪು ಶಾಖೆಯ ಪ್ರಶಾಂತ್ ಆಚಾರ್ಯ ಎಸ್.ಆರ್., ಸೂರಜ್ ನಿರೂಪಿಸಿದರು.;Resize=(128,128))
;Resize=(128,128))