ಪದವಿ ಪೂರ್ವ ಹಂತದಲ್ಲಿ ಕೌಶಲ್ಯದಾರಿತ ಶಿಕ್ಷಣ ಅವಶ್ಯ: ಡಾ.ಜಮೀರ್ ಆಹಮ್ಮದ್

| Published : Aug 15 2025, 01:00 AM IST

ಪದವಿ ಪೂರ್ವ ಹಂತದಲ್ಲಿ ಕೌಶಲ್ಯದಾರಿತ ಶಿಕ್ಷಣ ಅವಶ್ಯ: ಡಾ.ಜಮೀರ್ ಆಹಮ್ಮದ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಇಡೀ ಭವಿಷ್ಯ ಕೌಶಲ್ಯದ ಮೇಲೆ ನಿಂತಿದೆ. ಕೌಶಲ್ಯಾಧಾರಿತ ಶಿಕ್ಷಣವನ್ನು ಪದವಿ ಪೂರ್ವ ಹಂತದಲ್ಲಿ ನೀಡಬೇಕಾಗಿದೆ ಎಂದು ಗಣ್ಯರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ವಿದ್ಯಾರ್ಥಿಗಳ ಇಡೀ ಭವಿಷ್ಯ ಕೌಶಲ್ಯದ ಮೇಲೆ ನಿಂತಿದೆ. ಕೌಶಲ್ಯದಾರಿತ ಶಿಕ್ಷಣವನ್ನು ಪದವಿ ಪೂರ್ವ ಹಂತದಲ್ಲಿ ನೀಡಬೇಕಾಗಿದೆ ಎಂದು ಚಿಕ್ಕ ಅಳುವಾರ ಕೊಡಗು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕರಾದ ಡಾ.ಜಮೀರ್ ಆಹಮ್ಮದ್ ಅಭಿಪ್ರಾಯಿಸಿದರು.ಯುವಜನ ಮತ್ತು ಕ್ರೀಡಾ ಇಲಾಖೆಯ ಮೈಭಾರತ್ ಕೊಡಗು, ಶಾಲಾ ಶಿಕ್ಷಣ ಇಲಾಖೆ(ಪದವಿ ಪೂರ್ವ) ಆಶ್ರಯದಲ್ಲಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ನಡೆದ ವಿಶ್ವ ಕೌಶಲ್ಯ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.ಶಾಲಾ ಪಠ್ಯಕ್ರಮದಲ್ಲಿ ಕೌಶಲ್ಯ ಆಧಾರಿತ ವಿಷಯಗಳನ್ನು ಅಳವಡಿಸಬೇಕು. ವಿದ್ಯಾರ್ಥಿಗಳಿಗೆ ವೃತ್ತಿಪರ ಮಾರ್ಗದರ್ಶನ ನೀಡಬೇಕು. ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಬೇಕು. ಕೌಶಲ್ಯ ಆಧಾರಿತ ಶಿಕ್ಷಣಕ್ಕೆ ಮೂಲಸೌಕರ್ಯಗಳನ್ನು ಓದಗಿಸಬೇಕು ಎಂದು ಹೇಳಿದರು. ಕನ್ನಡದೊಂದಿಗೆ ಇಂಗ್ಲೀಷ್ ಭಾಷೆಯನ್ನು ಕಲಿಯಲೇಬೇಕು. ಕಂಪ್ಯೂಟರ್ ಕಲಿಕೆ ಅವಶ್ಯಕವಾಗಿದೆ. ಚೆನ್ನಾಗಿ ಓದಿ ಉದ್ಯೋಗ ಪಡೆಯಬೇಕು. ಸಾಧ್ಯವಾಗದಿದ್ದರೆ ಉದ್ದಿಮೆ, ಅದು ಆಗದಿದ್ದರೆ ಉತ್ತಮ ಪ್ರಜೆಯಾಗಿ ಬದುಕಬೇಕು ಎಂದು ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಂಶುಪಾಲರಾದ ಬಿ.ಎಂ.ಬೆಳ್ಳಿಯಪ್ಪ ಮಾತನಾಡಿ, ಶಿಕ್ಷಣ ಒಂದು ತಪಸ್ಸು ಇದ್ದಹಾಗೆ. ಶಿಕ್ಷಣದ ಜತೆಗೆ ಕೌಶಲ್ಯ ಅಭಿವೃದ್ಧಿ ಆಗಬೇಕು. ಕೌಶಲ್ಯ ಅಭಿವೃದ್ಧಿಯಿಂದ ನಿರುದ್ಯೋಗ ಸಮಸ್ಯೆಯಿಂದ ಪಾರಾಗಲು ಸಾಧ್ಯ ಎಂದು ಹೇಳಿದರು.ವೇದಿಕೆಯಲ್ಲಿ ಕೊಡಗು ಕನ್ನಡ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಎಂ.ಎ.ರುಬಿನಾ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ಉಪನ್ಯಾಸಕರಾದ ಜಿ.ಎನ್.ಹೇಮಾವತಿ, ಎಚ್.ಪಿ.ಸರಿತಾ, ಎಚ್.ಪಿ.ಶಿವಶಂಕರ್, ಎಚ್.ಬಿ.ಸಮಂತ್, ಬಿ.ಕೆ.ಸುನಿತಾ ಕುಮಾರಿ, ಆರ್.ಎ. ಅಕ್ಷತಾ, ಬಿ.ಆರ್.ಪ್ರದೀಪ್ ಇದ್ದರು. ಕು.ಮುಫಿದ ಕಾರ್ಯಕ್ರಮ ನಿರ್ವಹಿಸಿದರು.