ಜೀವನದ ಪರೀಕ್ಷೆ ಉತ್ತೀರ್ಣತೆಗೆ ಕೌಶಲ್ಯತೆ ಅತ್ಯವಶ್ಯಕ

| Published : Jan 07 2025, 01:33 AM IST

ಸಾರಾಂಶ

ಶಿವಮೊಗ್ಗ: ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಲು ಶಿಕ್ಷಣದ ಜೊತೆಗೆ ಕೌಶಲ್ಯತೆ ಎಂಬುದು ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ ಹೇಳಿದರು.

ಶಿವಮೊಗ್ಗ: ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣತೆ ಹೊಂದಲು ಶಿಕ್ಷಣದ ಜೊತೆಗೆ ಕೌಶಲ್ಯತೆ ಎಂಬುದು ಅತ್ಯವಶ್ಯಕವಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ನಿರ್ದೇಶಕ ಟಿ.ಆರ್.ಅಶ್ವಥನಾರಾಯಣ ಶ್ರೇಷ್ಟಿ ಹೇಳಿದರು.

ನಗರದ ಎಚ್.ಎಸ್.ರುದ್ರಪ್ಪ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಒಂದು ವಿದ್ಯಾಸಂಸ್ಥೆಯ ಉನ್ನತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕೊಡುಗೆ ಅಪಾರ. ಎನ್ಎಸ್ಎಸ್, ಸೇವಾದಳದಂತಹ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗುವುದರಿಂದ ಕ್ರೀಡಾ ಮನೋಭಾವ ಬೆಳೆಸಲು ಸಾಧ್ಯವಾಗಲಿದೆ ಎಂದರು.

ವಿದ್ಯಾರ್ಥಿಗಳು ಇತ್ತಿಚೆಗೆ ದೈಹಿಕ ಸಾಮರ್ಥ್ಯದ ಉನ್ನತಿಕರಣಕ್ಕೆ ಯಾವುದೇ ಪರಿಶ್ರಮ ಪಡುತ್ತಿಲ್ಲ‌. ಆರೋಗ್ಯ ಮುಖ್ಯ ಎಂಬ ಕನಿಷ್ಠ ಜ್ಞಾನವಿಲ್ಲದೆ, ನಾಲ್ಕು ಗೋಡೆಯ ಮಧ್ಯೆ ಪಾಠ, ಓದು, ಮೊಬೈಲ್‌ಗೆ ಸೀಮಿತವಾಗಿದ್ದಾರೆ. ಮೊಬೈಲ್ ಶಾಪವಾಗಿ ಯುವ ಸಮೂಹವನ್ನು ಕಾಡುತ್ತಿದೆ‌. ಅಂತಹ ಆಧುನಿಕತೆಯ ಅಂಧತ್ವದಿಂದ ಹೊರಬಂದು ಕ್ರೀಡೆ, ಸಾಹಿತ್ಯ, ಸಾಂಸ್ಕೃತಿಕ ಕ್ರಿಯಾಶೀಲತೆಯಲ್ಲಿ ತೊಡಗಿಸಿಕೊಳ್ಳಿ ಎಂದರು.

ದುರ್ಗಿಗುಡಿ ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಕ ಡಿ.ಪಿ.ಪ್ರಕಾಶ್‌ ಮಾತನಾಡಿ, ಬಹುಮಾನಕ್ಕಾಗಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಡಿ. ಕ್ರೀಡೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಸಧೃಢತೆ ಕಾಪಾಡಲಿದೆ. ಕ್ರೀಡಾತ್ಮಕ ಮನೋಭಾವ ಬದುಕಿನ ಅತ್ಯವಶ್ಯಕ ಸಾಧನ ಎಂದರು.

ಪ್ರಾಂಶುಪಾಲರಾದ ಎಸ್.ಚನ್ನಪ್ಪ ಅಧ್ಯಕ್ಷತೆ ವಹಿಸಿದ್ದರು.

ಎನ್ಇಎಸ್ ಆಜೀವ ಸದಸ್ಯರಾದ ಗುರುಪ್ರಸಾದ್, ದೈಹಿಕ ಶಿಕ್ಷಣ ವಿಭಾಗದ ಉಪನ್ಯಾಕಿ ಶೀಲಾ, ಉಪನ್ಯಾಸಕರಾದ ಆದಿತ್ಯ, ಫ್ರಾನ್ಸಿಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಾದ ನಿತಿನ್, ಅಮೃತ್ ನಿರೂಪಿಸಿ, ಭರತ್ ಸ್ವಾಗತಿಸಿ, ಕಾವ್ಯ ವಂದಿಸಿದರು.