ಸಾಹಸ ಮೆರೆದ ನೈಪುಣ್ಯ ವಿದ್ಯಾರ್ಥಿಗಳು

| Published : Sep 04 2024, 01:57 AM IST

ಸಾರಾಂಶ

ಮಕ್ಕಳಲ್ಲಿ ಸಾಹಸ ಪ್ರವೃತಿ ಜೊತೆಗೆ ನಾಯಕತ್ವದ ಗುಣವನ್ನು ಬೆಸೆಯುವಲ್ಲಿ ಸಾಹಸ ಕ್ರೀಡಗಳು ಉತ್ತಮ ಪರಿಣಾಮ

ಕನ್ನಡಪ್ರಭ ವಾರ್ತೆ ಮೈಸೂರು

ವಿದ್ಯಾರ್ಥಿಗಳಲ್ಲಿ ಸಾಹಸ ಪೃವೃತ್ತಿ ಮತ್ತು ನಾಯಕತ್ವದ ಗುಣವನ್ನು ಉತ್ತೇಜಿಸಲು ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಕನಕದಾಸನಗರ ಮತ್ತು ಆರ್.ಟಿ. ನಗರ ಕ್ಯಾಂಪಸ್ ನ ವಿದ್ಯಾರ್ಥಿಗಳಿಗೆ ಸಾಹಸ ಚಟುವಟಿಕೆಗಳ ಪ್ರವಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ರೇವಣಸಿದ್ದೇಶರ ಬೆಟ್ಟದಲ್ಲಿ ಟ್ರೆಕಿಂಗ್ ಮತ್ತು ಸನಿಹದಲ್ಲಿಯೇ ಇದ್ದ ಕೆರೆಯಲ್ಲಿ ಕಯಾಕಿಂಗ್, ರಾಪ್ಟಿಂಗ್, ಜಿಪ್ ಲೈನ್ ಸೈಕ್ಲಿಂಗ್, ಜಿಪ್ ಲೈನ್ ಸೇರಿದಂತೆ ಬೆಟ್ಟ ಗುಡ್ಡವನ್ನು ಬಂಡೆಗಳ ಮುಖೇನ ಏರಿದ ಮಕ್ಕಳು ಸಾಹಸ ಸಾಮರ್ಥ್ಯ ತೋರಿದರು.ಮಕ್ಕಳಲ್ಲಿ ಸಾಹಸ ಪ್ರವೃತಿ ಜೊತೆಗೆ ನಾಯಕತ್ವದ ಗುಣವನ್ನು ಬೆಸೆಯುವಲ್ಲಿ ಸಾಹಸ ಕ್ರೀಡಗಳು ಉತ್ತಮ ಪರಿಣಾಮ ಬೀರಲಿದ್ದು, ನೈಪುಣ್ಯ ಸಂಸ್ಥೆಯು ಪಠ್ಯೇತರ ಚಟುವಟಿಕೆಗಳಲ್ಲಿ ಇದನ್ನು ಪುಮುಖ ಭಾಗವಾಗಿ ಅಳವಡಿಸಿಕೊಂಡಿದ್ದು, 3 ತಿಂಗಳಿಗೊಮ್ಮೆ ಈ ಸಾಹಸ ಕ್ರೀಡೆಯನ್ನು ಹಮ್ಮಿಕೊಳ್ಳುವ ಯೋಜನೆ ರೂಪಿಸಿಕೊಂಡಿದೆ.ಸಾಹಸ ಕ್ರೀಡೆಯು ಸಾಹಸ ಚಟುವಟಿಕೆಗಳನ್ನು ಉತ್ತೇಜಿಸುವ ಜೊತೆಗೆ ಮಕ್ಕಳಲ್ಲಿ ಪರಿಸರದ ಕಾಳಜಿ ಮತ್ತು ಪರಿಸರವನ್ನು ಉಳಿಸಬೇಕಾದ ಜವಾಬ್ದಾರಿಯ ಅರಿವನ್ನು ಮೂಡಿಸುತ್ತದೆ ಎಂದು ಕಾರ್ಯಕ್ರಮದ ಸಂಯೋಜಕಿ ರುಕ್ಮಿಣಿ ಚಂದ್ರ ಹೇಳಿದರು.ಈ ಕಾರ್ಯಕ್ರಮದಲ್ಲಿ ಕ್ರೀಡಾ ಮಾರ್ಗದರ್ಶಕರಾದ ನವೀನ್, ಸೋಮಶೇಖರ್ ಅವರು ಮಕ್ಕಳಿಗೆ ಸಾಹಸ ಚಟುವಟಿಕೆಗಳಲ್ಲಿ ತರಬೇತಿ ನೀಡಿದರು.