ಸಾರಾಂಶ
ಮಾಗಡಿ: ಕೌಶಲ್ಯ ತರಬೇತಿಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಇಂತಹ ತರಬೇತಿಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ರೋಟರಿ ಪಾಲಕ ಉದಯಕುಮಾರ್ ಭಾಸ್ಕರ್ ತಿಳಿಸಿದರು.
ಮಾಗಡಿ: ಕೌಶಲ್ಯ ತರಬೇತಿಗಳ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗಲು ಇಂತಹ ತರಬೇತಿಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ಜಿಲ್ಲಾ ರೋಟರಿ ಪಾಲಕ ಉದಯಕುಮಾರ್ ಭಾಸ್ಕರ್ ತಿಳಿಸಿದರು.
ಪಟ್ಟಣದಲ್ಲಿ ವಿದ್ಯಾ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ಹಾಗೂ ರೋಟರಿ ಸಹಯೋಗದಲ್ಲಿ ಕೌಶಲ್ಯ ತರಬೇತಿ ಪ್ರಮಾಣ ಪತ್ರ ಹಾಗೂ ಸಮರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆ ಮೂಲಕ ಸಮಾಜಮುಖಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಮಾಗಡಿ ರೋಟರಿ ಸಂಸ್ಥೆ ಬಡವರನ್ನು ಗುರುತಿಸಿ ಇಂತಹ ತರಬೇತಿ ಮೂಲಕ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಿದರು.ತಾಲೂಕು ರೋಟರಿ ಸಂಸ್ಥೆ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಮಾಗಡಿಯಲ್ಲಿ ಯಾವುದೇ ಕೈಗಾರಿಕೆಗಳು ಇಲ್ಲದಿರುವ ಕಾರಣ, ಬಡ ಮಹಿಳೆಯರಿಗೆ ಸ್ವಯಂ ಉದ್ಯೋಗ ಕಲ್ಪಿಸಲು ಕೌಶಲ್ಯ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ವಿದ್ಯಾ ಸರಸ್ವತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜು ಮಾತನಾಡಿ, ಮಾಗಡಿ ರೋಟರಿ ಸಂಸ್ಥೆಯವರ ಸಹಕಾರದೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನೇರವೇರಿಸಲಾಯಿತು. ಕರ್ನಾಟಕಾದ್ಯಂತ ರೋಟರಿ ಸಹಯೋಗದೊಂದಿಗೆ ಹೆಚ್ಚು ಕೌಶಲ್ಯ ತರಬೇತಿ ಕಾರ್ಯಾಗಾರ ಮಾಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ತಿಳಿಸಿದರು.ಇದೆ ಸಂದರ್ಭದಲ್ಲಿ 120 ಮಹಿಳೆಯರಿಗೆ ತರಬೇತಿಯ ಪ್ರಮಾಣ ಪತ್ರ, ಉಚಿತ ಹೊಲಿಗೆ ಯಂತ್ರ ವಿತರಿಸಲಾಯಿತು.
ರೋಟರಿ ಕಾರ್ಯದರ್ಶಿ ಶಂಕರಮೂರ್ತಿ, ರೋಟರಿ ಸದಸ್ಯರಾದ ಪ್ರಸಾದ್, ಎಂಎನ್ಎಲ್ಎನ್ಆರ್ ಮೂರ್ತಿ, ಮೋಹನ್, ಮನು, ಲ್ಯಾಬ್ ಲೋಕೇಶ್, ಕಾವ್ಯ ಲಕ್ಷ್ಮೀಪ್ರಸಾದ್, ವಿನೋದ್, ಡಾ,ಮಲ್ಲಿನಾಥ್, ಗಣೇಶ್, ದಕ್ಷಿಣ ಮೂತರ್ಿ, ತರಬೇತುದಾರರಾದ ಶಿವರಾಮು, ಅರುಣ್, ಶಶಿಕಲಾ, ಬಿಂದುಶ್ರೀ ಜಿ, ಮತ್ತು ಪ್ರಸನ್ನ ಲಕ್ಷ್ಮಿ ಇತರರು ಭಾಗವಹಿಸಿದ್ದರು. ಫೋಟೋ 14ಮಾಗಡಿ2 :ಮಾಗಡಿಯಲ್ಲಿ ವಿದ್ಯಾ ಸರಸ್ವತಿ ಚಾರಿಟಬಲ್ ಟ್ರಸ್ಟ್ ಹಾಗೂ ರೋಟರಿ ಸಹಯೋಗದಲ್ಲಿ ಕೌಶಲ್ಯ ತರಬೇತಿ ಪಡೆದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು.