ಸಾರಾಂಶ
ಕಲಿಕೆಯಲ್ಲಿ ಅಕ್ಷರ ಅಭ್ಯಾಸದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅಧ್ಯಯನ ಜತೆಗೆ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯಬೇಕು.
ಲಿಂಗಸುಗೂರು: ಕಲಿಕೆಯಲ್ಲಿ ಅಕ್ಷರ ಅಭ್ಯಾಸದಷ್ಟೇ ಪಠ್ಯೇತರ ಚಟುವಟಿಕೆಗಳು ಮುಖ್ಯ. ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಅಧ್ಯಯನ ಜತೆಗೆ ಕೌಶಲ್ಯ ಹೆಚ್ಚಿಸುವ ಕಾರ್ಯಕ್ರಮಗಳು ನಡೆಯಬೇಕೆಂದು ಉಪನ್ಯಾಸಕ ಬಲಭೀಮ ರಾವ್ ಕುಲಕರ್ಣಿ ಹೇಳಿದರು.
ತಾಲೂಕಿನ ಹಟ್ಟಿಚಿನ್ನದಗಣಿ ಪಟ್ಟಣದ ಯುರೋಕಿಡ್ಸ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ವಿದ್ಯಾರ್ಥಿಗಳಿಗೆ ಕೌನ್ ಬನೇಗಾ ಕೋಟ್ಯಾಧಿಪತಿ ಮಾದರಿಯ ಕೌನ್ ಬನೇಗಾ ವಿದ್ಯಾಪತಿ ಕ್ವೀಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಚಿಕ್ಕ ವಯಸ್ಸಿನಲ್ಲಿ ಶಿಕ್ಷಣ, ಶಿಸ್ತು ಜತೆಗೆ ಸಂಸ್ಕಾರ ಮೈಗೂಡಿಸಿಕೊಳ್ಳುವಂತೆ ವಿದ್ಯಾರ್ಥಿಗಳನ್ನು ಶಿಕ್ಷಕರು-ಪಾಲಕರು ನಿಗಾವಹಿಸಬೇಕು. ಪಠ್ಯೇತರ ವಿಷಯಗಳಿಗೂ ಹೆಚ್ಚಿನ ಒತ್ತು ನೀಡಬೇಕೆಂದರು.ಸಂಸ್ಥೆ ನಿರ್ದೇಶಕ ಗುರುರಾಜ್ ಕುಲಕರ್ಣಿ ಮಾತನಾಡಿದರು.
ಈ ವೇಳೆ ಗಣಿ ಕಂಪನಿ ಅಧಿಕಾರಿ ಪ್ರಶಾಂತ್ ಪೌಲ್, ಗಣಿ ಕಂಪನಿ ಕಾರ್ಮಿಕ ಸಂಘದ ಚುನಾಯಿತ ಪ್ರತಿನಿಧಿ ಹನುಮಂತಗೌಡ ಗುರೀಕಾರ್ ಹಾಗೂ ಪ್ರಮುಖರಾದ ಅಮರೇಶ್ ಮೇದಾರ್ ಜೇಗರಕಲ್, ಗವಿಸಿದ್ಧಪ್ಪ ಭಜಂತ್ರಿ, ವಿಷ್ಣು ಕುಮಾರ್, ಸತ್ತರ್ಪಾಷಾ, ಸಂಸ್ಥೆ ಮುಖ್ಯಸ್ಥೆ ವಿದ್ಯಾ ಗುರುರಾಜ್ ಕುಲಕರ್ಣಿ ಸಿಬ್ಬಂದಿ ಪಲ್ಲವಿ, ಸೀಮಾ, ಸ್ವಪ್ನಾ, ಸನಾ, ಫಾತೀಮಾ, ಪಿಂಕಿ ವಿದ್ಯಾರ್ಥಿ-ಪಾಲಕರು ಇದ್ದರು.