ಪ್ರಗತಿಗೆ ಕಿರಿ ಹಣಕಾಸು ಸಂಸ್ಥೆ ಪಾತ್ರ ದೊಡ್ಡದು

| Published : Sep 25 2025, 01:03 AM IST

ಪ್ರಗತಿಗೆ ಕಿರಿ ಹಣಕಾಸು ಸಂಸ್ಥೆ ಪಾತ್ರ ದೊಡ್ಡದು
Share this Article
  • FB
  • TW
  • Linkdin
  • Email

ಸಾರಾಂಶ

ದೇಶ ಮತ್ತು ರಾಜ್ಯ ಪ್ರಗತಿಗೆ ಕಿರಿ ಹಣಕಾಸು ಸಂಸ್ಥೆ ಪಾತ್ರ ತುಂಬಾ ದೊಡ್ಡಮಟ್ಟದಲ್ಲಿ ಕೂಡಿದೆ ಎಂದು ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿನವ ಜೈನ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶ ಮತ್ತು ರಾಜ್ಯ ಪ್ರಗತಿಗೆ ಕಿರಿ ಹಣಕಾಸು ಸಂಸ್ಥೆ ಪಾತ್ರ ತುಂಬಾ ದೊಡ್ಡಮಟ್ಟದಲ್ಲಿ ಕೂಡಿದೆ ಎಂದು ಬೆಳಗಾವಿ ಹೆಚ್ಚುವರಿ ಜಿಲ್ಲಾಧಿಕಾರಿ ಅಭಿನವ ಜೈನ ಹೇಳಿದರು.

ನಗರದಲ್ಲಿ ಮಂಗಳವಾರ ನಡೆದ ಕರ್ನಾಟಕ ಕಿರುಹಣಕಾಸು ಸಂಸ್ಥೆಗಳ ಒಕ್ಕೂಟ ಆಶ್ರಯದಲ್ಲಿ ಆಯೋಜಿಸಿದ ಹಣಕಾಸು ನಿರ್ವಹಣೆಯ ತಿಳುವಳಿಕೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ತೆಗೆದುಕೊಂಡ ಸಾಲ ಸರಿಯಾದ ರೀತಿಯಲ್ಲಿ ಬಳಸಿಕೊಂಡು ಮರುಪಾವತಿಸಿ. ಉತ್ತಮ ಆರ್ಥಿಕ ಸಾಕ್ಷರತೆ ಹಾಗೂ ದೇಶದ ಪ್ರಗತಿಗೆ ಸಹಕರಿಸಬೇಕು ಎಂದು ಕೋರಿದರು.ಬೆಳಗಾವಿ ಡಿ.ಡಿ.ಎಂ ನಬಾರ್ಡ್ ಅಭಿನವ ಮಾತನಾಡಿ, ಸರ್ಕಾರ ಅನೇಕ ಸೌಲಭ್ಯಗಳು ಸಾರ್ವಜನಿಕರಿಗೆ ನೀಡಿದೆ ಅದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು. ಫೈನಾನ್ಸ್ ಹಾಗೂ ಬ್ಯಾಂಕುಗಳಲ್ಲಿ ತೆಗೆದುಕೊಂಡ ಸಾಲ ಮರುಪಾವತಿಸಿದರೆ ಭವಿಷ್ಯದಲ್ಲಿ ಯಾವುದೇ ಬ್ಯಾಂಕ್‌ಗಳಲ್ಲಿ ಸುಲಭವಾಗಿ ಸಾಲ ಸಿಗುತ್ತದೆ. ಕಟ್ಟ ಬಾಕಿ ಉಳಿಸಿಕೊಂಡರೆ ಮುಂದಿನ ದಿನಗಳಲ್ಲಿ ಸಾಲ ಸಿಗುವುದಿಲ್ಲ ಎಂದರು.ಬೆಳಗಾವಿ ಲೀಡ್‌ ಬ್ಯಾಂಕ್ ಜಿಲ್ಲಾ ಮುಖ್ಯ ವ್ಯವಸ್ಥಾಪಕ ಪ್ರಶಾಂತ ಗೋಡಕೆ ಮಾತನಾಡಿ, ಸಾಮರ್ಥ್ಯಕ್ಕೆ ಅನುಗುಣವಾಗಿ ಸಾಲ ಪಡೆದುಕೊಳ್ಳಬೇಕು. ಯಾವ ಉದ್ದೇಶಕ್ಕೆ ಸಾಲ ಪಡೆಯುತ್ತೇವೆ. ಆ ವ್ಯವಹಾರಕ್ಕೆ ಹಣ ಬಳಸಿಕೊಳ್ಳಬೇಕು. ಸಾಲ ಸರಿಯಾಗಿ ತುಂಬಬೇಕು ತುಂಬದಿದ್ದರೆ ಕಷ್ಟ ಆಗುತ್ತದೆ. ಇದರಿಂದ ಮುಂದಿನ ವ್ಯವಹಾರಕ್ಕೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವತಿಯಿಂದ ಯುವಕ, ಯುವತಿಯರಿಗೆ ಹಲವು ಅವಕಾಶಗಳು ಕಲ್ಪಿಸಿಕೊಡುತ್ತಿದು, ಅದರಲ್ಲಿ ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್, ಫೋಟೋಗ್ರಾಫಿ ಮತ್ತು ವಿಡಿಯೋಗ್ರಾಫಿ, ಹೈನುಗಾರಿಕೆ ಸೇರಿದಂತೆ ವಿವಿಧ ಯೋಜನೆಯಡಿ ಅವಕಾಶ ಕಲ್ಪಿಸಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ಎಫ್.ಎಲ್.ಸಿ ಅನಿಲ ಚಿನಗುಡಿ ಮಾತನಾಡಿ, ಸ್ವ ಸಹಾಯ ಗುಂಪುಗಳು ವೈಯಕ್ತಿಕ ಸಾಲ ಅಥವಾ ಗುಂಪು ಸಾಲವನ್ನು ಬಳಸಿಕೊಂಡು ಉದ್ಯಮದಲ್ಲಿ ತೊಡಗಿಕೊಂಡು ಅವರ ಜೀವನ ಮಟ್ಟದಲ್ಲಿ ಕೊಂಡುಕೊಳ್ಳುವಂತಹ ವ್ಯವಸ್ಥೆ ಆಗಿದೆ ಎಂದರು.ಈ ವೇಳೆ ಬೆಳಗಾವಿ ರುಡಸೆಟ್ ಬ್ಯಾಂಕ್ ನಿರ್ದೇಶಕ ಪ್ರವೀಣ, ಗ್ರಾಮೀಣ ಕೂಟ ಝಡ್‌ ಎಂ ರವಿ ಎನ್ ಎಸ್, ಅಕ್ಮಿ ಸಿಇಒ ವಿ.ಆರ್.ವಿ ಕುಲಕರ್ಣಿ, ಚನ್ನಪ್ಪ ಯಲಿವಾಲ, ಮಾದೇಗೌಡ.ಸಿ ಇತರರು ಪಾಲ್ಗೊಂಡಿದ್ದರು.