ಹ್ಯಾಕಥಾನ್ ತಂತ್ರಜ್ಞಾನದ ಸ್ವರೂಪ ಬದಲಿಸುತ್ತದೆ

| Published : Dec 13 2024, 12:46 AM IST

ಸಾರಾಂಶ

ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವುದಲ್ಲದೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ

ಕನ್ನಡಪ್ರಭ ವಾರ್ತೆ ಮೈಸೂರುಹ್ಯಾಕಥಾನ್ ಗಳು ಭಾರತದ ತಂತ್ರಜ್ಞಾನ ಸ್ವರೂಪವನ್ನೇ ಬದಲಿಸುತ್ತವೆ ಎಂದು ಲೆನೆವೊ ಇಂಡಿಯಾ ಕಂಪನಿಯ ಅಭಿವೃದ್ಧಿ ನಿರ್ದೇಶಕ ಸತೀಶ್ ಪ್ರತಾಪ್ ನೇನಿ ಹೇಳಿದರು.ನಗರದ ಮಾನಂದವಾಡಿ ರಸ್ತೆ ಎನ್ಐಇ ಕಾಲೇಜಿನ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ - 2024ಗೆ ಚಾಲನೆ ನೀಡಿ ಅವರು ಮಾತನಾಡಿದರು.ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸುವುದಲ್ಲದೆ, ಸ್ಪರ್ಧಾತ್ಮಕ ಮನೋಭಾವ ಬೆಳೆಸುತ್ತದೆ. ಇದು ಭವಿಷ್ಯದ ತಂತ್ರಜ್ಞಾನದ ಮುನ್ನೋಟ ನೀಡುತ್ತದೆ ಎಂದರು.ಪ್ರಾಂಶುಪಾಲೆ ಪ್ರೊ. ರೋಹಿಣಿ ನಾಗಪದ್ಮ ಮಾತನಾಡಿ, ತಂತ್ರಜ್ಞಾನದ ಆವಿ,್ಕಾರಗಳು ಹೊಸ ಬಾಗಿಲನ್ನ ವಿದ್ಯಾರ್ಥಿಗಳಿಗೆ ತೆರೆಯುತ್ತದೆ. ಜಾಗತಿಕವಾಗಿ ಜನರು ಎದುರಿಸುತ್ತಿರುವ ಸವಾಲನ್ನು ಸೃಜನಶೀಲತೆಯ ಮೂಲಕ ಪರಿಹರಿಸಬಹುದು ಎಂದು ಹೇಳಿದರು.ವಿದ್ಯಾರ್ಥಿಗಳು ತಮಗೆ ದೊರಕಿರುವ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು. ನುರಿತ ತಜ್ಞರ ಜೊತೆಗೆ ಉತ್ತಮ ಆವಿಷ್ಕಾರಗಳು ರೂಪುಗೊಳ್ಳಬೇಕು ಎಂದರು.ಕೇಂದ್ರ ಶಿಕ್ಷಣ ಸಚಿವಾಲಯದ ನವೋದ್ಯಮ ವಿಭಾಗದ ಗೋಪಾಲ್ ಶರ್ಮ, ಅಟೋಓಡೆಸ್ಕ್ ಸಂಸ್ಥೆಯ ಸಂಗೀತಾ ಗಾರ್ಗ್, ಐಟಿಬಿಪಿಯ ಡಿಐಜಿ ಆರ್.ಎಸ್. ಚಂದೇಲ್, ಎನ್ಐಇ ಸಂಸ್ಥೆ ಖಜಾಂಚಿ ಸತ್ಯಕುಮಾರ್ ಪಾಲ್ಗೊಂಡಿದ್ದರು.