ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ಕಾವ್ಯಶಾಸ್ತ್ರ ವಿಚಾರಪರಿಷತ್ ನ ವತಿಯಿಂದ ದಿ.ಕುತ್ತೆತ್ತೂರು ಹಯಗ್ರೀವಾಚಾರ್ಯರ ಸಂಸ್ಮರಣಾರ್ಥ ಕುತ್ತೆತ್ತೂರು ಗೋವಿಂದದಾಸರ ದತ್ತಿನಿಧಿಯ ಪ್ರಾಯೋಜಕತ್ತ್ವದಲ್ಲಿ ಶಾಬ್ದಬೋಧ ವಿಷಯ ಉಪನ್ಯಾಸ ನಡೆಯಿತು.

ಉಡುಪಿ: ಇಲ್ಲಿನ ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಿನೀ ಸಂಸ್ಕೃತ ಮಹಾಪಾಠ ಶಾಲೆಯಲ್ಲಿ ಕಾವ್ಯಶಾಸ್ತ್ರ ವಿಚಾರಪರಿಷತ್ ನ ವತಿಯಿಂದ ದಿ.ಕುತ್ತೆತ್ತೂರು ಹಯಗ್ರೀವಾಚಾರ್ಯರ ಸಂಸ್ಮರಣಾರ್ಥ ಕುತ್ತೆತ್ತೂರು ಗೋವಿಂದದಾಸರ ದತ್ತಿನಿಧಿಯ ಪ್ರಾಯೋಜಕತ್ತ್ವದಲ್ಲಿ ಶಾಬ್ದಬೋಧ ವಿಷಯ ಉಪನ್ಯಾಸ ನಡೆಯಿತು.

ಪಲಿಮಾರು ಯೋಗದೀಪಿಕಾ ವಿದ್ಯಾಪೀಠದ ಉಪಪ್ರಾಂಶುಪಾಲ ಡಾ.ಸುದರ್ಶನ ಸಾಮಗ ಶಬ್ದದಿಂದ ಉಂಟಾಗುವ ಜ್ಞಾನವೇ ಶಾಬ್ದಬೋಧ. ಶ್ರವಣದ ಬಳಿಕ ವೃತ್ತಿಜ್ಞಾನವು ಸರಿಯಾಗಿರದಿದ್ದಲ್ಲಿ ಅನರ್ಥವಾಗಲಿದೆ. ಶಾಬ್ದಬೋಧದ ಜ್ಞಾನ ಎಲ್ಲರಿಗೂ ಅವಶ್ಯ. ಪ್ರತಿಯೊಂದು ವಿಚಾರಗಳನ್ನು ಶ್ರವಣಮಾಡುವ ಅಭ್ಯಾಸ ಪ್ರತಿ ವಿದ್ಯಾರ್ಥಿಯ ಕರ್ತವ್ಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಕೃತ ಮಹಾಪಾಠ ಶಾಲೆ ಪ್ರಾಚಾರ್ಯ ಪ್ರೊ.ಅಮೃತೇಶಾಚಾರ್ಯ ಡಿ.ಎಸ್. ಶಾಬ್ದಬೋಧ ಎಲ್ಲರಲ್ಲೂ ಇರುತ್ತದೆ. ಪ್ರತಿಯೊಂದು ಪದಗಳ ಅರ್ಥಜ್ಞಾನವಿದ್ದರೂ ಕಾಲವನ್ನು ಆಶ್ರಯಿಸಿ ಬಳಸುವ ಪ್ರಯೋಗ ಅರ್ಥೈಸಿದರೆ ಅನರ್ಥಗಳು ಉಂಟಾಗಲಾರದು ಎಂದರು.

ಎಸ್ ಎಂಎಸ್‌ಪಿ ಸಭೆ ಕಾರ್ಯದರ್ಶಿ ವಿ. ಗೋಪಾಲಕೃಷ್ಣ ಜೋಯಿಸ ಉಪನ್ಯಾಸಕರನ್ನು ಗೌರವಿಸಿದರು. ಕಾವ್ಯಶಾಸ್ತ್ರ ವಿಚಾರ ಪರಿಷತ್ ಪ್ರಮುಖರಾದ ಡಾ. ಅಜಿತಕುಮಾರ ಪಿ. ಸ್ವಾಗತಿಸಿದರು. ವಿ. ಸತ್ಯಮೂರ್ತಿ ಅಡಿಗ ವಂದಿಸಿದರು. ಸುದೀಕ್ಷಾ ಗೀತೆಯ ಮೂಲಕ ಪ್ರಾರ್ಥಿಸಿದರು. ಸುಮುಖ ಅಡಿಗ ನಿರೂಪಿಸಿದರು.