ಕುರುಕಲು ತಿಂಡಿಗಳಿಂದ ಖಾಯಿಲೆಗಳು ಮನೆ ಮಾಡುತ್ತವೆ

| Published : Sep 17 2025, 01:06 AM IST

ಕುರುಕಲು ತಿಂಡಿಗಳಿಂದ ಖಾಯಿಲೆಗಳು ಮನೆ ಮಾಡುತ್ತವೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಯಿ ಚಪಲಕ್ಕೆ ಕುರುಕುಲು ತಿಂಡಿಗಳನ್ನು ತಿನ್ನುವುದರಿಂದ ಖಾಯಿಲೆಗಳು ಮನೆ ಮಾಡುತ್ತವೆ. ಇದರಿಂದ ಮಕ್ಕಳಲ್ಲಿ ಖಾಯಿಲೆಗಳು ಅವರನ್ನು ಹಿಂಬಾಲಿಸುತ್ತವೆ ಎಂದು ಬೆಂಗಳೂರಿನ ಎನ್.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾ.ಲಕ್ಷ್ಮೀನಾರಾಯಣ್ ಎಚ್ಚರಿಕೆಯ ಮಾತುಗಳನ್ನು ಆಡಿದರು.

ಕನ್ನಡಪ್ರಭವಾರ್ತೆ, ತುರುವೇಕೆರೆ

ಬಾಯಿ ಚಪಲಕ್ಕೆ ಕುರುಕುಲು ತಿಂಡಿಗಳನ್ನು ತಿನ್ನುವುದರಿಂದ ಖಾಯಿಲೆಗಳು ಮನೆ ಮಾಡುತ್ತವೆ. ಇದರಿಂದ ಮಕ್ಕಳಲ್ಲಿ ಖಾಯಿಲೆಗಳು ಅವರನ್ನು ಹಿಂಬಾಲಿಸುತ್ತವೆ ಎಂದು ಬೆಂಗಳೂರಿನ ಎನ್.ಎಸ್. ರಾಮಯ್ಯ ಆಸ್ಪತ್ರೆಯ ವೈದ್ಯರಾದ ಡಾ.ಲಕ್ಷ್ಮೀನಾರಾಯಣ್ ಎಚ್ಚರಿಕೆಯ ಮಾತುಗಳನ್ನು ಆಡಿದರು. ತಾಲೂಕಿನ ದಂಡಿನಶಿವರದ ಪಿ.ಎಂ.ಶ್ರೀ ಕೆ.ಪಿ.ಎಸ್. ಮಾಧ್ಯಮಿಕ ವಿಭಾಗ ಹಾಗೂ ಎಂ.ಎಸ್.ರಾಮಯ್ಯ ಆಸ್ಪತ್ರೆ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಉಚಿತ ಬೃಹತ್ ಆರೋಗ್ಯ ತಪಾಸಣಾ ಮತ್ತು ಶಸ್ತ್ರಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರದಿಂದ ಚಿಕ್ಕ ವಯಸ್ಸಿನಲ್ಲೇ ಹಲವಾರು ಖಾಯಿಲೆಗಳು ನಮ್ಮನ್ನು ಹಿಂಬಾಲಿಸುತ್ತವೆ. ಕೇವಲ ಬಿಪಿ-ಶುಗರ್ ಮಾತ್ರವಲ್ಲದೆ ಮೂಳೆ, ಥೈರಾಯ್ಡ್, ಲಿವರ್, ಕಿಡ್ನಿಗೆ ಸಂಬಂಧಿಸಿದ ಖಾಯಿಲೆಗಳು ಸಹಾ ಹೆಚ್ಚುತ್ತಿವೆ. ಬೆಂಗಳೂರಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಸಾಧ್ಯವಾಗದ ಗ್ರಾಮೀಣ ಪ್ರದೇಶದ ವಯೋವೃದ್ದರಾಗಿ ಎಲ್ಲರೂ ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲಿ ಎಂಬ ಉದ್ದೇಶದಿಂದ ಉಚಿತವಾಗಿ ಶಿಬಿರ ಏರ್ಪಡಿಸಲಾಗಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದರು. ಕಾರ್ಯಕ್ರಮದಲ್ಲಿ ಮಾತನಾಡಿದ ಬಿಇಒ ಎನ್.ಸೋಮಶೇಖರ್, ಆರೋಗ್ಯ ಅತ್ಯಮೂಲ್ಯವಾದ ಆಸ್ತಿಯಾಗಿದ್ದು ಅದನ್ನು ಜೋಪಾನವಾಗಿ ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ. ರೋಗಗಳೇ ಬಾರದಂತೆ ಮುನ್ನೆಚ್ಚರಿಕೆ ವಹಿಸುವ ಮೂಲಕ ನಾವುಗಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿದ ಕಾವ್ಯರಾಜ್‌ಕುಮಾರ್, ಪ್ರಭು, ಗ್ರಾಮದ ಮುಖಂಡರಾದ ಸಿದ್ದೇಗೌಡ, ರಾಜ್‌ಕುಮಾರ್, ವೆಂಕಟೇಶ್, ಜಿ.ಬಿ.ಗೌಡ, ಶಿವರಾಜು, ದಯಾನಂದ್, ಎಸ್.ಡಿ.ಎಂ.ಸಿ.ಉಪಾಧ್ಯಕ್ಷ ಶ್ರೀನಿವಾಸ್, ಯದುನಂದನ್, ಸುರೇಶ್, ಯೋಗಾನಂದ್, ರಾಜಶೇಖರ್, ಭವ್ಯ, ಶಮಂತ, ದುಗ್ಗಮ್ಮ, ಫಾತಿಮಾ, ಸುಜಾತ, ವನಿತ, ರೂಪಾ, ಕಂಚೀರಾಯಪ್ಪ ಸೇರಿದಂತೆ ಹಲವಾರು ವೈದ್ಯರು ಪಾಲ್ಗೊಂಡಿದ್ದರು.