ಭಾರಿ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿದ ಸ್ನೇಕ್ ಮಹೇಶ್

| N/A | Published : Jul 09 2025, 12:25 AM IST / Updated: Jul 09 2025, 10:21 AM IST

ಭಾರಿ ಗಾತ್ರದ ಹೆಬ್ಬಾವು ರಕ್ಷಣೆ ಮಾಡಿದ ಸ್ನೇಕ್ ಮಹೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಮೀಪದ ಕಾಗಲವಾಡಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಇದ್ದ ಭಾರಿ ಗಾತ್ರದ ಹೆಬ್ಬಾವನ್ನು ಸಂತೆಮರಹಳ್ಳಿಯ ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.

ಯಳಂದೂರು: ಸಮೀಪದ ಕಾಗಲವಾಡಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಇದ್ದ ಭಾರಿ ಗಾತ್ರದ ಹೆಬ್ಬಾವನ್ನು ಸಂತೆಮರಹಳ್ಳಿಯ ಉರಗ ತಜ್ಞ ಸ್ನೇಕ್ ಮಹೇಶ್ ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯಕ್ಕೆ ಬಿಟ್ಟಿದ್ದಾರೆ.

ಕಾಗಲವಾಡಿ ಗ್ರಾಮದ ಗುರು ಎಂಬುವರು ತಮ್ಮ ಜಮೀನಿನಲ್ಲಿ ಹೆಬ್ಬಾವು ಇದೆ ಎಂದು ಇವರಿಗೆ ದೂರವಾಣಿ ಮೂಲಕ ಕರೆ ಮಾಡಿದ್ದಾರೆ. ಆದರೆ ಹೆಬ್ಬಾವು ಸಾಮಾನ್ಯವಾಗಿ ದಟ್ಟ ಕಾಡಿನಲ್ಲಿ ಇಲ್ಲವೆ ಕಾಡಂಚಿನ ಜಮೀನುಗಳಲ್ಲಿ ಆಹಾರ ಅರಸಿ ಬರುತ್ತದೆ. ಆದರೆ ಈ ಭಾಗದಲ್ಲಿ ಕಾಡು ಇಲ್ಲ. ಆದರೂ ಇದು ಹೇಗೆ ಬಂತು ಎಂದು ಇವರು ಅನುಮಾನಗೊಂಡು ಅದರ ವಿಡಿಯೋಗಳನ್ನು ಕಳುಹಿಸಿದ ಮೇಲೆ ಇಲ್ಲಿಗೆ ತೆರಳಿದ್ದಾರೆ. 

ಆಗ ಇದು ಹೆಬ್ಬಾವೇ ಎಂದು ಖಚಿತಪಡಿಸಿಕೊಂಡು ಇದನ್ನು ಸುರಕ್ಷಿತವಾಗಿ ಹಿಡಿದು ಅರಣ್ಯ ಇಲಾಖೆಯ ಸಿಬ್ಬಂಧಿಯ ನೆರವಿನೊಂದಿಗೆ ಬಿಆರ್‌ಟಿ ಹುಲಿ ರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಇವರು, ಇದು ದಟ್ಟ ಅರಣ್ಯದಲ್ಲಿ ಇರುತ್ತದೆ. ಆದರೆ ಕಾಲುವೆಗಳಲ್ಲಿ ನೀರು ಬಿಟ್ಟ ಸಂದರ್ಭದಲ್ಲಿ ಇದರ ಮರಿಗಳು ನೀರಿನ ಮೂಲಕ ಹೊಲಗದ್ದೆಗಳಿಗೆ ಬಂದಿರುವ ಶಂಕೆ ಇದ್ದು ಇದು ಇಲ್ಲಿ ಪತ್ತೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಇದು ಪರಿಸರ ಸ್ನೇಹಿ ಜೀವಿಯಾಗಿದೆ. ಇದನ್ನು ಕೊಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Read more Articles on