ಶಿವಪ್ರೇರಣ ಸಾಹಿತ್ಯ ಬಳಗದ ವತಿಯಿಂದ ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಣಿಪಾಲ

ನಮ್ಮ ಸುತ್ತಲಿರುವ ಹಾವುಗಳ ಬಗ್ಗೆ ತುಂಬಾ ತಪ್ಪುಕಲ್ಪನೆಗಳಿವೆ. ಎಲ್ಲಹಾವುಗಳು ವಿಷಕಾರಿ ಅಲ್ಲ. ವಿಷಕಾರಿ ಹಾವುಗಳು ಕೂಡ ನಮ್ಮಿಂದ ನೋವಿಗೊಳಗಾಗದೆ ನಮಗೆ ಹಾನಿ ಮಾಡುವುದಿಲ್ಲ. ಹಾವುಗಳು ಮುಗ್ಧ ಜೀವಿಗಳು. ಅವುಗಳನ್ನು ನಾವು ರಕ್ಷಿಸಬೇಕಾಗಿದೆ ಎಂದು ಉರಗ ತಜ್ಞ ಗುರುರಾಜ್ ಸನಿಲ್ ಹೇಳಿದರು.ಭಾನುವಾರ ಇಲ್ಲಿನ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ಆಶ್ರಯದಲ್ಲಿ ಶಿವಪ್ರೇರಣ ಸಾಹಿತ್ಯ ಬಳಗದ ವತಿಯಿಂದ ರತ್ನ ಸಂಜೀವ ಕಲಾ ಮಂಡಲದಲ್ಲಿ ನಡೆದ ಜೀವನಾನುಭವದಿಂದ ಸಾಹಿತ್ಯದೆಡೆಗೆ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ ಮಾತನಾಡಿದರು.

ಶಿವಪ್ರೇರಣ ಸಾಹಿತ್ಯ ಬಳಗದ ಅಧ್ಯಕ್ಷ ನಿತ್ಯಾನಂದ ಪಡ್ರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಶಿವಪ್ರೇರಣ ಚಾರಿಟೇಬಲ್ ಟ್ರಸ್ಟ್ ನ ಟ್ರಸ್ಟಿ ರಮಾನಂದ ಸಾಮಂತ್, ಶಿವಪ್ರೇರಣ ಸಾಹಿತ್ಯ ಬಳಗದ ಕಾರ್ಯದರ್ಶಿ ಚೇತನಾ ಗಣೇಶ್, ಕೋಶಾಧಿಕಾರಿ ಸುಮಾಕಿರಣ್ ಉಪಸ್ಥಿತರಿದ್ದರು. ವೈಷ್ಣವಿ ಪ್ರಾರ್ಥಿಸಿ, ಮಹೇಶ್ ನಾಯ್ಕ್ ಸ್ವಾಗತಿಸಿ, ದೀಪಿಕಾ ಮಣಿಪಾಲ ನಿರೂಪಿಸಿದರು.