ಸಾಮಾಜಿಕ, ಶೈಕ್ಷಣಿಕ ಗಣತಿ: ಬಂಟ ನಾಡವ ನಮೂದಿಸಲು ಬಂಟರ ಸಂಘ ಮನವಿ

| Published : Sep 22 2025, 01:02 AM IST

ಸಾರಾಂಶ

ಗಣತಿ ಸಂದರ್ಭದಲ್ಲಿ ಬಂಟ ಸಮುದಾಯ ಜಾತಿ ಕಾಲಂನಲ್ಲಿ ಬಂಟ ನಾಡವ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಬಂಟರ ಸಂಘ ಮನವಿ ಮಾಡಿದೆ.

ಮಡಿಕೇರಿ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಸೆ.22ರಿಂದ ಆರಂಭವಾಗಲಿದೆ. ಗಣತಿ ಸಂದರ್ಭದಲ್ಲಿ ಬಂಟ ಸಮುದಾಯದವರು ಜಾತಿ ಕಾಲಂನಲ್ಲಿ ʼಬಂಟ ನಾಡವʼ ಎಂದು ನಮೂದಿಸುವಂತೆ ಕೊಡಗು ಜಿಲ್ಲಾ ಬಂಟರ ಸಂಘ ಮನವಿ ಮಾಡಿದೆ.

ಗಣತಿದಾರರು ಮನೆಗೆ ಆಗಮಿಸಿದ ಸಂದರ್ಭ ಧರ್ಮದ ಕಾಲಂನಲ್ಲಿ ಹಿಂದು, ಜಾತಿ ಕಾಲಂನಲ್ಲಿ ಬಂಟ ನಾಡವ ಎಂದು ನಮೂದಿಸಬೇಕು. ಉಪಜಾತಿಯ ಕಾಲಂನಲ್ಲಿ ಏನನ್ನೂ ನಮೂದಿಸಬಾರದು ಎಂದು ಸಂಘದ ಜಿಲ್ಲಾಧ್ಯಕ್ಷ ಬಿ.ಡಿ. ಜಗದೀಶ್‌ ರೈ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾತೃ ಸಂಘದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಯಾವುದೇ ಅನುಮಾನವಿದ್ದಲ್ಲಿ ಮಾಹಿತಿಗಾಗಿ 9449613364 ಸಂಖ್ಯೆಯನ್ನು ಸಂಪರ್ಕಿಸುವಂತೆ ಅವರು ಕೋರಿದ್ದಾರೆ.