ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಮಾಜಿಕ ಅರಿವು: ಕೆ.ಜಿ.ಬೋಪಯ್ಯ

| Published : Sep 19 2024, 01:54 AM IST

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಾಮಾಜಿಕ ಅರಿವು: ಕೆ.ಜಿ.ಬೋಪಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಕಾರುಗುಂದದ ಗೌಡ ಸಮಾಜದಲ್ಲಿ ಮಂಗಳವಾರ ನಡೆದ 1855ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಸಮುದಾಯದ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ, ಶೈಕ್ಷಣಿಕ ಕಾರ್ಯಕ್ರಮ, ಧಾರ್ಮಿಕ ಕಾರ್ಯಕ್ರಮ ಮತ್ತು ಜನತೆಯಲ್ಲಿ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನೀಯ ಎಂದು ಮಾಜಿ ಸ್ಪೀಕರ್‌ ಕೆ.ಜಿ.ಬೋಪಯ್ಯ ಹೇಳಿದ್ದಾರೆ.ಮಡಿಕೇರಿ ತಾಲೂಕು ಬೆಟ್ಟಗೇರಿ ವಲಯ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಆಶ್ರಯದಲ್ಲಿ ಕಾರುಗುಂದದ ಗೌಡ ಸಮಾಜದಲ್ಲಿ ಮಂಗಳವಾರ ನಡೆದ 1855ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಮಾತನಾಡಿ, ಮದ್ಯಪಾನ ಸಮಾಜವನ್ನು ಬಾಧಿಸುವ ಮತ್ತು ಜಾಗ್ರತೆ ತಪ್ಪಿದರೆ ಯಾರನ್ನೂ ಬಿಡದ ಕಾಯಿಲೆ. ಮದ್ಯಪಾನಕ್ಕೆ ಜಾತಿ, ಧರ್ಮ, ಪಕ್ಷ, ಭೇದ ಯಾವುದೂ ಇರುವುದಿಲ್ಲ. ಹಾಗಾಗಿ ಇದೊಂದು ಸರ್ವಧರ್ಮ ಕಾರ್ಯಕ್ರಮ ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್‌ ಅಧ್ಯಕ್ಷತೆ ವಹಿಸಿದ್ದರು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ ಪ್ರಾದೇಶಿಕ ಕಚೇರಿ ಶಿಬಿರಾದಿಕಾರಿ ನಂದಕುಮಾರ್‌ ಪಿ.ಪಿ.ಪ್ರಾಸ್ತಾವಿಕ ಮಾತನಾಡಿದರು.

ಚೇರಂಬಾಣೆ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಣಪತಿ ಕಾರ್ಯಕ್ರಮ ಉದ್ಘಾಟಿಸಿದರು.

1855ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಗೌರವಾಧ್ಯಕ್ಷ ಟಿ.ಎಂ ಅಯ್ಯಪ್ಪ, ಬೆಳ್ಯನ ಚಂದ್ರಪ್ರಕಾಶ್ ಅಧ್ಯಕ್ಷರು 1855ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಮಾತನಾಡಿದರು.

ಧನಂಜಯ್ ಅಗೋಳಿಕಜೆ, ಉಪಾಧ್ಯಕ್ಷ ಜಿಲ್ಲಾ ಜನಜಾಗೃತಿ ವೇದಿಕೆ ಕೊಡಗು, ಪುರುಷೋತ್ತಮ್ ಎನ್ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಮಡಿಕೇರಿ ತಾಲೂಕು, ಕಮಲ ಉತ್ತಯ್ಯ ಅಧ್ಯಕ್ಷ ಗ್ರಾಮ ಪಂಚಾಯಿತಿ ಬೆಟ್ಟಗೇರಿ, ಮಿಲನ್ ಮುತ್ತಣ್ಣ ಅಧ್ಯಕ್ಷ ಗ್ರಾಮ ಪಂಚಾಯಿತಿ ಬೇಂಗೂರು - ಚೇರಂಬಾಣೆ, ಕುಟ್ಟೇಟ್ಟಿರ ಕುಞಪ್ಪ ಮಾಜಿ ಅಧ್ಯಕ್ಷ ಕೊಡವ ಸಮಾಜ ಚೇರಂಬಾಣೆ, ಜಯಂತಿ ಅಧ್ಯಕ್ಷ, ಕಾರುಗುಂದ ಒಕ್ಕೂಟ, ತೇಜಕುಮಾರ್ ಸದಸ್ಯ ಗ್ರಾಮ ಪಂಚಾಯಿತಿ ಮದೆ, ಪೂವಯ್ಯ ಕೆ.ಪಿ ಉಪಾಧ್ಯಕ್ಷರು 1855ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಅಯ್ಯಣ್ಣ ಮಾಜಿ ಸದಸ್ಯ ಗ್ರಾಮ ಪಂಚಾಯಿತಿ ಮದೆ, ರಾಣಿ ಮಾಚಯ್ಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು, ಕೊಡಗನ ತೀರ್ಥಪ್ರಸಾದ್ ನಿರ್ದೇಶಕ ಗೌಡ ಸಮಾಜ ಚೇರಂಬಾಣೆ, ವಸಂತ ಉಪಾಧ್ಯಕ್ಷ 1855ನೇ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ , ಕಾರ್ಯಪ್ಪ ಎಂ.ಕೆ ಮಾಜಿ ಅಧ್ಯಕ್ಷರು ಶ್ರೀ ವಿನಾಯಕ ದೇವಸ್ಥಾನ ತೊಂಬತ್ತುಮನೆ, ಮುಕ್ಕಾಟಿ ನಾಣಯ್ಯ ನಿರ್ದೇಶಕರು ಗೌಡ ಸಮಾಜ ಚೇರಂಬಾಣೆ ಮತ್ತಿತರಿದ್ದರು.ಬೆಟ್ಟಗೇರಿ ವಲಯದ ಸೇವಾಪ್ರತಿನಿಧಿಗಳು ಪ್ರಾರ್ಥಿಸಿದರು. ಪುರುಷೋತ್ತಮ್ ಎನ್ ಕ್ಷೇತ್ರ ಯೋಜನಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸ್ವಾಗತಿಸಿದರು. ಮಾಲಿನಿ ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಿರ್ವಹಿಸಿದರು. ವಿದ್ಯಾ ಬಿ.ಎಚ್. ಮೇಲ್ವಿಚಾರಕರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಟ್ಟಗೇರಿ ವಲಯ ವಂದಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ಮಡಿಕೇರಿ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್ ಕೊಡಗು ಜಿಲ್ಲೆ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ಲಾಯಿಲ ಉಜಿರೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಮಾರ್ಗದರ್ಶನದೊಂದಿಗೆ ಗೌಡ ಸಮಾಜ ಚೇರಂಬಾಣೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಬೆಟ್ಟಗೇರಿ ವಲಯ, ಗ್ರಾಮ ಪಂಚಾಯತ್ ಬೆಟ್ಟಗೇರಿ, ಗ್ರಾಮ ಪಂಚಾಯತ್ ಬೇಂಗೂರು - ಚೇರಂಬಾಣೆ, ಪ್ರಾಥಮಿಕ ಆರೋಗ್ಯ ಕೇಂದ್ರ ಚೇರಂಬಾಣೆ, ಆರಕ್ಷಕ ಇಲಾಖೆ ಭಾಗಮಂಡಲ, ನವಜೀವನ ಸಮಿತಿ ಮಡಿಕೇರಿ ತಾಲೂಕು, ಶ್ರೀ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ ಮಡಿಕೇರಿ ತಾಲೂಕು ಮತ್ತಿತರ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಿತು.