ಧರ್ಮಸ್ಥಳ ಸಂಘದಿಂದ ಸಾಮಾಜಿಕ ಬದಲಾವಣೆ: ಶಾಸಕ ಡಾ. ಚಂದ್ರು ಕೆ. ಲಮಾಣಿ

| Published : Sep 25 2025, 01:02 AM IST

ಧರ್ಮಸ್ಥಳ ಸಂಘದಿಂದ ಸಾಮಾಜಿಕ ಬದಲಾವಣೆ: ಶಾಸಕ ಡಾ. ಚಂದ್ರು ಕೆ. ಲಮಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಗಂಡು- ಹೆಣ್ಣು ಎಂಬ ಭೇದವಿಲ್ಲದೇ ಸಮಾಜದಲ್ಲಿ ಪ್ರತಿ ವ್ಯಕ್ತಿಯೂ ಉದ್ಯೋಗ ಕೈಗೊಳ್ಳಬೇಕು. ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದು ಮಾದರಿಯಾಗಿದೆ.

ಶಿರಹಟ್ಟಿ: ಸಮಾಜದಲ್ಲಿ ಹತ್ತಾರು ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗಿರುವ ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮ್ಯಾಗೇರಿ ಓಣಿ ಕಾರ್ಯಕ್ಷೇತ್ರದ ಹಿಂದೂ ರುದ್ರಭೂಮಿಗೆ ಕ್ಷೇತ್ರದಿಂದ ಬಂದಿದ್ದ ಸಿಲಿಕಾನ್ ಚೆಂಬರ್ ಹಸ್ತಾಂತರಿಸಿ ಮಾತನಾಡಿ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಮಹತ್ತರವಾಗಿದೆ. ಗಂಡು- ಹೆಣ್ಣು ಎಂಬ ಭೇದವಿಲ್ಲದೇ ಸಮಾಜದಲ್ಲಿ ಪ್ರತಿ ವ್ಯಕ್ತಿಯೂ ಉದ್ಯೋಗ ಕೈಗೊಳ್ಳಬೇಕು. ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದು ಮಾದರಿಯಾಗಿದೆ. ಯುವಜನಾಂಗ ನಿರುದ್ಯೋಗಿಗಳಾಗದೇ ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಅವರ ನೇತೃತ್ವದಲ್ಲಿ ಮ್ಯಾಗೇರಿ ಓಣಿ ಎಲ್ಲ ಗಣ್ಯ ವ್ಯಕ್ತಿಗಳಿಗೆ ಸಿಲಿಕಾನ್ ಚೆಂಬರ್ ಹಸ್ತಾಂತರ ಮಾಡಲಾಯಿತು. ನಂತರ ಕೇಶವ ದೇವಾಂಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಫಕ್ಕೀರೇಶ ರಟ್ಟಿಹಳ್ಳಿ ಶ್ರೀ ಕ್ಷೇತ್ರದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಪುನಿತ್ ಓಲೇಕಾರ, ಸಂದೀಪ ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ಮಹಾಂತೇಶ ದಶಮನಿ, ಅಜ್ಜು ಪಾಟೀಲ, ನಂದಾ ಪಲ್ಲೇದ, ಅಶೋಕ ವರವಿ ಸೇರಿದಂತೆ ಅನೇಕರು ಇದ್ದರು.ಗುಂಡಿ ಭಾಗ್ಯ ಕರುಣಿಸಿದ ಸರ್ಕಾರ: ರಾಜೀವ್

ಗದಗ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜನತೆಗೆ ರಸ್ತೆ ಗುಂಡಿಗಳನ್ನು ಕಲ್ಪಿಸಿದ ಸರ್ಕಾರವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಆರೋಪಿಸಿದರು.ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ​ಸಾರ್ವಜನಿಕರು ನೂರಾರು ಬಾರಿ ಮನವಿ ಮಾಡಿದ್ದರೂ ಸರ್ಕಾರ ರಸ್ತೆ ಗುಂಡಿಗಳನ್ನು ಮುಚ್ಚುವ ಯೋಗ್ಯತೆ ಕಳೆದುಕೊಂಡಿದ್ದಾರೆ.ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳಲ್ಲಿ ಜನರು ಗಿಡಗಳನ್ನು ನೆಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಗಮನಿಸುತ್ತಿಲ್ಲ ಎಂದರು.​ಸ್ಥಳೀಯ ಶಾಸಕ ಹಾಗೂ ಸಚಿವ ಎಚ್.ಕೆ. ಪಾಟೀಲ್ ಅವರ ಬಗ್ಗೆಯೂ ರಾಜೀವ್ ಅಸಮಾಧಾನ ವ್ಯಕ್ತಪಡಿಸಿ, ವಾರಕ್ಕೊಮ್ಮೆ ನೀರು ಪೂರೈಸುವುದಾಗಿ ಹೇಳಿದ್ದರೂ, ನವರಾತ್ರಿ ದಿನಗಳಲ್ಲಿ ಗದಗ ಜನರಿಗೆ ಕಳೆದ 15 ದಿನಗಳಿಂದ ಕುಡಿಯುವ ನೀರು ಸಿಕ್ಕಿಲ್ಲ. ರಸ್ತೆಗುಂಡಿಗಳನ್ನು ಮುಚ್ಚುವ ಮತ್ತು ಕುಡಿಯುವ ನೀರು ಒದಗಿಸುವ ಯೋಗ್ಯತೆ ಸರ್ಕಾರಕ್ಕಿಲ್ಲ ಎಂದು ತೀವ್ರ ವಾಗ್ದಾಳಿ ನಡೆಸಿದರು.

​ಡಿಸಿಎಂ ಹೇಳಿಕೆಗೆ ತಿರುಗೇಟು: ​ಪ್ರಧಾನಿ ಮೋದಿ ಅವರ ಮನೆ ಮುಂದೆಯೂ ಗುಂಡಿಗಳಿವೆ ಎಂಬ ಡಿಸಿಎಂ ಹೇಳಿಕೆಗೆ ರಾಜೀವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಡಿಸಿಎಂ ಪಾಪ ಯಾವ ದಾರಿಯಲ್ಲಿ ಹೋಗಬೇಕು ಅಂತಾ ಗೊತ್ತಿಲ್ಲ. ಕಳ್ಳ ದಾರಿಯಲ್ಲಿ ಹೋದವರಿಗೆ ಮಾತ್ರ ಗುಂಡಿಗಳು ಕಾಣಿಸುತ್ತವೆ ಎಂದು ವ್ಯಂಗ್ಯವಾಡಿದರು.