ವಾಲ್ಮೀಕಿ ರಾಮಾಯಣದಿಂದ ಸಮಾಜ ನಿರ್ಮಾಣ

| Published : Oct 18 2024, 01:16 AM IST

ಸಾರಾಂಶ

ಮಹರ್ಷಿ ವಾಲ್ಮಿಕಿ ಜಯಂತಿಯಲ್ಲಿ ಸಂಸದ ಸಾಗರ ಖಂಡ್ರೆ ಅಭಿಮತ

ಕನ್ನಡಪ್ರಭ ವಾರ್ತೆ ಭಾಲ್ಕಿ

ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಮೂಲಕ ಆದರ್ಶ ಕುಟುಂಬ ಹಾಗೂ ಸಮಾಜ ನಿರ್ಮಾಣ ಮಾಡಬಹುದು ಎಂದು ಬಿಂಬಿಸಲಾಗಿರುವುದರಿಂದ ರಾಮಾಯಣ ಸರ್ವ ಸಮಸ್ಯೆಗಳಿಗೆ ದಿವ್ಯ ಔಷಧಿಯಾಗಿದೆ ಎಂದು ಸಂಸದ ಸಾಗರ ಖಂಡ್ರೆ ನುಡಿದರು.

ಪಟ್ಟಣದ ಪುರಭವನದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕುಟುಂಬದ ಸದಸ್ಯರಲ್ಲಿ ವೈಮನಸ್ಸು ಉಂಟಾಗಲು ನಮ್ಮಲ್ಲಿನ ಸಂಕುಚಿತ ಭಾವನೆಗಳೇ ಕಾರಣ. ಮನುಷ್ಯ ಜೀವನದ ಮುಖ್ಯ ಉದ್ದೇಶ ಆನಂದ ಮತ್ತು ಸಮಾಧಾನದ ಬದುಕು ಸಾಗಿಸುವುದಾಗಿದೆ ಎಂದರು.

ಸಂಸದನಾಗಿ ಆಯ್ಕೆಯಾಗಲು ನಿಮ್ಮ ಅಭಿಮಾನವೇ ಕಾರಣ. ಅಜ್ಜ ಡಾ.ಭೀಮಣ್ಣ ಖಂಡ್ರೆ ಮತ್ತು ತಂದೆ ಸಚಿವ ಈಶ್ವರ ಖಂಡ್ರೆ ಅವರ ಮಾರ್ಗದರ್ಶನದಲ್ಲಿ ಜನರ ಆಶೋತ್ತರಗಳನ್ನು ಈಡೇರಿಸಲು ಪ್ರಯತ್ನ ಮಾಡುತ್ತೇನೆ. ವಾಲ್ಮೀಕಿ ಸಮಾಜದ ಬಹು ದಿವಸದ ಬೇಡಿಕೆಯಾದ ಸಮುದಾಯ ಭವನ ನಿರ್ಮಿಸಲಾಗುವುದು ಎಂದು ಭರವೆ ನೀಡಿದರು.

ವಾಲ್ಮೀಕಿ ಸಮಾಜದ ಮುಖಂಡರಾದ ಅರ್ಜುನ ಜಮಾದಾರ ಮತ್ತು ವಿಶ್ವನಾಥ ಬಳಕಟ್ಟೆ ಅವರು, ವಾಲ್ಮೀಕಿ ಸಮಾಜದವರಿಗೆ ಸಮುದಾಯ ಭವನ ನಿರ್ಮಿಸಿ ಕೊಡಬೇಕು ಎಂದು ಸಂಸದರಲ್ಲಿ ಮನವಿ ಮಾಡಿದರು.

ಜಿಲ್ಲಾ ಪ್ರಾಂಶುಪಾಲರ ಸಂಘದ ಉಪಾಧ್ಯಕ್ಷ ಅಶೋಕ ರಾಜೋಳೆ ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಅಧ್ಯಕ್ಷ ಹಣಮಂತರಾವ ಚವ್ಹಾಣ, ತಹಸೀಲ್ದಾರ ಮಲ್ಲಿಕಾರ್ಜುನ ವಡ್ಡನಕೇರಿ, ತಾಪಂ ಅಧಿಕಾರಿ ಸೂರ್ಯಕಾಂತ ಬಿರಾದಾರ, ಪುರಸಭೆ ಅಧ್ಯಕ್ಷೆ ಶಶೀಕಲಾ ಅಶೋಕ, ಉಪಾಧ್ಯಕ್ಷ ವಿಜಯಕುಮಾರ ರಾಜಭವನ, ಮುಖಂಡ ಸೋಮನಾಥಪ್ಪ ಅಷ್ಠೂರೆ, ಪುರಸಭೆ ಸದಸ್ಯರಾದ ಲಕ್ಮೀಬಾಯಿ ಶಿವರಾಜ, ಮಹಬೂಬ, ನಗರ ಠಾಣೆ ಸಿಪಿಐ ಅಂಬ್ರೀಶ ಬಿ.,ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಕಾರಬಾರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ, ತೋಟಗಾರಿಕೆ ಎಡಿ ಮಾರುತಿ, ಸಿಡಿಪಿಒ ಶ್ರೀನಿವಾಸ, ಬಿಸಿಎಂ ಎಡಿ ವಿಜಯಲಕ್ಷ್ಮೀ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸತೀಶಕುಮಾರ ಸಂಗನ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರೆ ಮನೋಹರ ಹೋಳ್ಕರ್ ವಂದಿಸಿದರು. ಭಾಲ್ಕಿಯ ಪುರಭವನದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ಮಹರ್ಷಿ ವಾಲ್ಮೀಕಿ ಜಯಂತೋತ್ಸವದಲ್ಲಿ ಸಂಸದ ಸಾಗರ ಖಂಡ್ರೆ ಮಾತನಾಡಿದರು.