ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಒಬ್ಬ ಗಂಡಸು ವಕೀಲನಾಗಿ ಯಶಸ್ವಿಯಾಗಲು ಕುಟುಂಬದ ಸಹಕಾರ ಬೇಕಾಗುತ್ತದೆ. ಆದರೆ, ಒಬ್ಬ ಮಹಿಳೆ ಯಶಸ್ವಿ ವಕೀಲೆಯಾಗಲು ಸಮಾಜದ ಸಹಕಾರ ಅಗತ್ಯ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಂ.ಶ್ಯಾಂಪ್ರಸಾದ್ ಅಭಿಪ್ರಾಯಪಟ್ಟರು.ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಮಿತಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತ ನಾಡಿದ ಅವರು, ಒಬ್ಬ ಮಹಿಳೆ ಕುಟುಂಬ ಮತ್ತು ವೃತ್ತಿಯನ್ನು ಬ್ಯಾಲೆನ್ಸ್ ಮಾಡಿ ನಡೆಸಬೇಕಾಗುತ್ತದೆ. ಎರಡರ ಬಗ್ಗೆಯೂ ಯೋಚನೆ ಮಾಡಿ ನಿರ್ಧಾರ ವನ್ನು ಆಯ್ಕೆ ಮಾಡಬೇಕಾಗುತ್ತದೆ ಎಂದರು.
ಒಬ್ಬ ಗಂಡಸು ವಕೀಲನಾಗಿ ಯಶಸ್ವಿಯಾಗಲು ಕುಟುಂಬದ ಸಹಕಾರ ಸಾಕಾಗುತ್ತದೆ. ಆದರೆ ಒಬ್ಬ ಮಹಿಳೆ ಯಶಸ್ವಿ ವಕೀಲೆಯಾಗಲು ಸಮಾಜದ ಸಹಕಾರ ಅತ್ಯಂತ ಅನಿವಾರ್ಯ ಮತ್ತು ಅಗತ್ಯ ಕೂಡ ಆಗಿರುತ್ತದೆ ಎಂದರಲ್ಲದೆ, ಸಮಾನತೆಯ ಕಡೆಗೆ ನಮ್ಮ ನಾಡಿಗೆ ಎನ್ನುವ ಹಾಗೆ. ಸೆಪ್ಟೆಂಬರ್ 28, 29 ರಂದು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲದೇ ಜಿಲ್ಲಾ ಮಟ್ಟದಲ್ಲೂ ಚರ್ಚೆ ಆಗುತ್ತಿದೆ ಎನ್ನುವ ರೀತಿಯಲ್ಲಿ ಕೊಂಡೊಯ್ಯಬೇಕು ಎಂದರು.ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಉಮಾ ಮಾತನಾಡಿ, ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಈ ಸಮ್ಮೇಳನಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಸಮ್ಮೇಳನದ ಘೋಷವಾಕ್ಯ ಸಮಾನತೆಯ ಕಡೆಗೆ ನಮ್ಮ ನಡಿಗೆ ಎನ್ನುವಂತಹದಾಗಿದೆ. ಇನ್ನು, ಸ್ವಲ್ಪ ನಾಚಿಕೆ ಸ್ವಭಾವ ಮಹಿಳೆಯಲ್ಲಿರುತ್ತದೆ. ಆದರೆ ಅದನ್ನು ಸ್ವಲ್ಪ ಬದಿಗಿಟ್ಟು ನಾನು ಮಾಡುವುದು ಸರಿ ಎಂದು ಆತ್ಮವಿಶ್ವಾಸ ಬೆಳೆಸಿಕೊಂಡರೆ ನಾವು ಪರಿಣಿತಿಯನ್ನು ಹೊಂದ ಬಹುದು. ವೃತ್ತಿ ಎಂದು ನೋಡಿದರೆ ಎಲ್ಲ ಫ್ರೋಫೆಷನ್ ವೃತ್ತಿಗೂ ನೈಪುಣ್ಯತೆ ಅಗತ್ಯ. ಅದನ್ನು ಎಲ್ಲರೂ ಮೈಗೂಡಿಕೊಳ್ಳಿ ಎಂದರು.
ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಂಘದ ಅಧ್ಯಕ್ಷೆ ಸರೋಜ ಪಿ.ಸಂಗೋಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 20 ಜಿಲ್ಲೆಗಳಿಂದ ಈ ದಕ್ಷಿಣ ಪ್ರಾಂತೀಯ ಮಹಿಳಾ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಇದೊಂದು ದಾಖಲೆಯಾಗಿ ಉಳಿಯುತ್ತದೆ. 2005ರಲ್ಲಿ ಹಿರಿಯ ವಕೀಲರಾದ ದಿ.ಮಂಜುಳಾ ದೇವಿ ನೇತೃತ್ವದಲ್ಲಿ ಸಮ್ಮೇಳನ ಆಯೋಜಿಸಿದ್ದೆವು. ಅವರ ನೆನಪಿಗಾಗಿ ವೇದಿಕೆಗೆ ಅವರ ಹೆಸರನ್ನೇ ಇಟ್ಟಿದ್ದೇವೆ. ಮಹಿಳಾ ವಕೀಲರ ಸಮಸ್ಯೆಗಳನ್ನು ಹೇಳಲು ಒಂದು ವೇದಿಕೆಯ ಅವಶ್ಯಕತೆ ಇದೆ. ಈ ವೇದಿಕೆಯನ್ನು ಬಳಸಿಕೊಂಡು ನಮ್ಮ ಸಮಸ್ಯೆಗಳನ್ನು ಗಮನಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.ಈ ಸಂದರ್ಭದಲ್ಲಿ ಅಖಿಲ ಭಾರತ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಹೇಮಲತಾ ಮಹಿಷಿ, ಮಾಜಿ ಅಧ್ಯಕ ಶೀಲ ಅನೀಶ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಆರ್.ರಾಘವೇಂದ್ರ ಸ್ವಾಮಿ, ಕರ್ನಾಟಕ ರಾಜ್ಯ ಮಹಿಳಾ ನ್ಯಾಯವಾದಿಗಳ ಒಕ್ಕೂಟದ ಅಧ್ಯಕ್ಷೆ ಸಂಧ್ಯಾ ಬಸವರೆಡ್ಡಿ ಮದಿನೂರು, ಕಾರ್ಯದರ್ಶಿ ಎಚ್.ಎಂ.ರೇಣುಕಮ್ಮ , ನ್ಯಾ. ಮರುಳಸಿದ್ಧರಾಧ್ಯ, ಸಂಪನ್ಮೂಲ ವ್ಯಕ್ತಿ ಎಚ್.ಡಿ.ಆನಂದ್‍ಕುಮಾರ್, ಹಿರಿಯ ವಕೀಲರಾದ ಬಸಪ್ಪಗೌಡ, ಶಿವಮೂರ್ತಿ, ಮಾಜಿ ಶಾಸಕ ಎಚ್.ಎಂ. ಚಂದ್ರಶೇಖರಪ್ಪ, ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮತ್ತಿತರರು ಇದ್ದರು.
---------------------------ಪೋಟೋ: 10ಎಸ್‌ಎಂಜಿಕೆಪಿ03
ಶಿವಮೊಗ್ಗ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ರ್ನಾಟಕ ಮಹಿಳಾ ನ್ಯಾಯವಾದಿಗಳ ಒಕ್ಕೂಟ, ಶಿವಮೊಗ್ಗ ಜಿಲ್ಲಾ ಮಹಿಳಾ ನ್ಯಾಯವಾದಿಗಳ ಸಮಿತಿ ಮತ್ತು ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘ ಸಹಯೋಗದಲ್ಲಿ ಆಯೋಜಿಸಿದ್ದ ದಕ್ಷಿಣ ಕರ್ನಾಟಕ ಮಹಿಳಾ ನ್ಯಾಯವಾದಿಗಳ ಸಮ್ಮೇಳನವನ್ನು ಕರ್ನಾಟಕ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಬಿ.ಎಂ.ಶ್ಯಾಂ ಪ್ರಸಾದ್ ಉದ್ಘಾಟಿಸಿದರು.