ಖಾಸಗಿ ಶಾಲೆಗಳ ಮೇಲೆ ದೌರ್ಜನ್ಯ: ದೇವರಾಜ್‌

| Published : Aug 11 2024, 01:36 AM IST

ಖಾಸಗಿ ಶಾಲೆಗಳ ಮೇಲೆ ದೌರ್ಜನ್ಯ: ದೇವರಾಜ್‌
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರ ಖಾಸಗಿ ಶಾಲೆಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿ ಖಾಸಗಿ ಶಾಲೆಗಳ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ತಾಲೂಕು ಉಪಾಧ್ಯಕ್ಷ ದೇವರಾಜ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಹೊಸಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

-ಸರ್ಕಾರದ್ದು ಖಾಸಗಿ ಶಾಲೆಗಳು ಮುಚ್ಚಿಸುವ ಹುನ್ನಾರ; ಆರೋಪಹೊಸಕೋಟೆ: ಸರ್ಕಾರ ಖಾಸಗಿ ಶಾಲೆಗಳಿಗೆ ಹೊಸ ನಿಯಮಗಳನ್ನು ಜಾರಿಗೊಳಿಸಿ ಖಾಸಗಿ ಶಾಲೆಗಳ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಸಂಘದ ತಾಲೂಕು ಉಪಾಧ್ಯಕ್ಷ ದೇವರಾಜ್ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಣ ಇಲಾಖೆ ಸಾಕ್ಷರತೆಯ ಪ್ರಮಾಣ ಹೆಚ್ಚಿಸುವುದು ಬಿಟ್ಟು ಖಾಸಗಿ ಶಾಲೆಗಳಿಗೆ ಹೊಸ ನಿಯಮ ಜಾರಿ ಮಾಡಿ ಖಾಸಗಿ ಶಾಲೆಗಳನ್ನು ಮುಚ್ಚಿಸುವ ಹುನ್ನಾರ ನಡೆಸಿದೆ. ಖಾಸಗಿ ಶಾಲೆಗಳು ಸಂಕಷ್ಟದಲ್ಲೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು ಶ್ರಮಿಸುತ್ತಿವೆ. ಖಾಸಗಿ ಶಾಲೆಗಳಿಗೆ ದಿನಕ್ಕೊಂದು ನಿಯಮ ಜಾರಿ ಮಾಡಿ ಅದರ ಅನುಷ್ಠಾನಕ್ಕೆ ಮಾಲೀಕರ ಕುತ್ತಿಗೆ ಮೇಲೆ ಕೂರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಸರ್ಕಾರಿ ಶಾಲೆಗಳಲ್ಲಿ ಸಿಸಿ ಕ್ಯಾಮೆರಾ, ಫೈರ್ ಸೇಫ್ಟಿ, ಕಟ್ಟಡಕ್ಕೆ ಗುಣಮಟ್ಟದ ಪ್ರಮಾಣ ಪತ್ರ ಇಲ್ಲ. ಆದರೆ, ಸರ್ಕಾರಿ ಶಾಲೆಗಳಿಗೆ ಇಲ್ಲದ ಕಾನೂನು, ಖಾಸಗಿ ಶಾಲೆಗಳಿಗೇಕೆ ಮಾಡುತ್ತೀರಿ. ಎಲ್ಲಾ ಸರ್ಕಾರಿ ಶಾಲೆಗಳಿಗೂ ಇದೇ ನಿಯಮಗಳನ್ನು ಜಾರಿ ಮಾಡಿದರೆ ಖಾಸಗಿ ಶಾಲೆಗಳೂ ಈ ನಿಯಮಗಳನ್ನು ಒಪ್ಪಿಕೊಳ್ಳುತ್ತೇವೆ ಎಂದರು.

ಕರಾಳ ಸ್ವಾತಂತ್ರ್ಯ ದಿನಾಚರಣೆ:

ಆ.15ರಂದು ಸ್ವಾತಂತ್ರ್ಯ ದಿನಾಚರಣೆ ಜೊತೆ ಕಪ್ಪುಪಟ್ಟಿ ಧರಿಸಿ ಮೌನ ಪ್ರತಿಭಟನೆ ಮೂಲಕ ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಖಾಸಗಿ ಶಾಲಾ ಶಿಕ್ಷಣ ಸಂಸ್ಥೆ(ಹುಸ್ಮಾ) ಅಧ್ಯಕ್ಷ ನಾಗರಾಜ್ ಗುಪ್ತಾ, ಗೌರವಾಧ್ಯಕ್ಷ ಮುನಿಶಾಮೇಗೌಡ, ಕಾರ್ಯದರ್ಶಿ ಭರತ್ ಚಂದ್ರ, ಖಜಾಂಚಿ ಕೃಷ್ಣಮೂರ್ತಿ, ಪದಾಧಿಕಾರಿಗಳಾದ ಪ್ರಕಾಶ್, ಫಣೀಂದ್ರ, ಜಲಜಾಕ್ಷಿ, ಶ್ರೀಧರ್ ಹಾಜರಿದ್ದರು.