ಕನಕ ಪೀಠದಿಂದ ಸಾಮಾಜಿಕ ನ್ಯಾಯ ಪ್ರತಿಪಾದನೆ

| Published : Nov 08 2025, 01:03 AM IST

ಕನಕ ಪೀಠದಿಂದ ಸಾಮಾಜಿಕ ನ್ಯಾಯ ಪ್ರತಿಪಾದನೆ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ ತಾಲೂಕಿನ ಕೆಲ್ಲೋಡು ಕನಕ ಗುರು ಪೀಠದಲ್ಲಿ ಶುಕ್ರವಾರ ಕನಕ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಟಗರು ಕಾಳಗಕ್ಕೆ ಶಾಸಕ ಬಿ.ಜಿ.ಗೋವಿಂದಪ್ಪ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಶೋಷಿತ ವರ್ಗಗಳ ಸಮಾಜದ ಅಭ್ಯುದಯಕ್ಕೆ ಕಾಗಿನೆಲೆ ಮಹಾ ಸಂಸ್ಥಾನ ಬೆನ್ನಲುಬಾಗಿ ನಿಂತಿದೆ ಎಂದು ಚಿತ್ರದುರ್ಗ ಮಾದಾರ ಪೀಠದ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕೆಲ್ಲೋಡು ಕನಕ ಗುರು ಪೀಠದಲ್ಲಿ ಶುಕ್ರವಾರ ಕನಕ ಜಯಂತ್ಯುತ್ಸವ ಅಂಗವಾಗಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಟಗರು ಕಾಳಗಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠವು ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಮೂಲಕ ಎಲ್ಲ ವರ್ಗದ ಪರವಾಗಿ ಮಠ ಕಾರ್ಯ ನಿರ್ವಹಿಸುತ್ತಿದ್ದು, ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ವೇದಾವತಿ ನದಿ ತಟದಲ್ಲಿ ಕನಕ ಮಹೋತ್ಸವವನ್ನು ವಿಶೇಷವಾಗಿ ಅರ್ಥ ಪೂರ್ಣವಾಗಿ ಆಚರಿಸುತ್ತಿದೆ ಎಂದರು.

ಕೆಲ್ಲೋಡು ಕನಕ ಗುರುಪೀಠದ ಈಶ್ವರಾನಂದಪುರಿ ಸ್ವಾಮೀಜಿ ಮಾತನಾಡಿ, ಕನಕ ಜಯಂತ್ಯುತ್ಸವ ಅಂಗವಾಗಿ ಪ್ರತಿ ಗ್ರಾಮದ ಮನೆ ಮನೆಯಲ್ಲೂ ಕನಕದಾಸರ ಜಯಂತಿಯನ್ನು ಹಬ್ಬದ ರೀತಿಯಲ್ಲಿ ಕಲಾ ಮೇಳಗಳೊಂದಿಗೆ ಕನಕದಾಸರ ಕೀರ್ತನೆಗಳನ್ನು ಭಜಿಸುವ ಮೂಲಕ ಕನಕದಾಸರ ಆದರ್ಶಗಳನ್ನು ಇಂದಿನ ಯುವ ಪೀಳಿಗೆಯು ಪಾಲಿಸುವಂತಾಗಬೇಕು ಎಂದರು.

ಕರ್ನಾಟಕ ರಾಜ್ಯ ಆಹಾರ ನಿಗಮದ ಅಧ್ಯಕ್ಷ ಶಾಸಕ ಬಿ.ಜಿ.ಗೋವಿಂದಪ್ಪ ಮಾತನಾಡಿ, ಗ್ರಾಮೀಣ ಜನರು ಟಗರು ಕಾಳಗವನ್ನು ಬಹಳಷ್ಟು ಜನಮನ ಸೂರೆಗೊಂಡಿದೆ ಕನಕದಾಸರ ತತ್ವಾದರ್ಶಗಳನ್ನು ಲಕ್ಷ ದೀಪೋತ್ಸವ ಆಚರಿಸುವ ಮೂಲಕ ಭಕ್ತರಲ್ಲಿ ಜಾಗೃತಿ ಮೂಡಿಸುವ ಉದ್ದೇಶವಾಗಿದೆ. ಕನಕ ಗುರು ಪೀಠದ ಅಭಿವೃದ್ಧಿಗೆ ಸರ್ಕಾರ ಅನುದಾನ ಬಿಡುಗಡೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಕನಕ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ.ಎಚ್.ಹನುಮಂತಪ್ಪ, ಟಿಎಪಿಎಂಸಿ ಮಾಜಿ ಅಧ್ಯಕ್ಷ ಕಾರೇಹಳ್ಳಿ ಬಸವರಾಜ್, ಅರುಣ್ ಗೋವಿಂದಪ್ಪ, ತಾಲೂಕು ಸೇವಾದಳದ ಅಧ್ಯಕ್ಷ ಎಂ.ಆರ್.ಸಿ ಮೂರ್ತಿ, ಕೆ.ಟಿ.ಮಂಜುನಾಥ್, ಜಿಪಂ ಮಾಜಿ ಉಪಾಧ್ಯಕ್ಷ ಗಂಗಾಧರ್, ಬನಸೀಹಳ್ಳಿ ಅಜ್ಜಪ್ಪ, ಗುತ್ತಗೆದಾರ ಬಾಗೂರು ರಮೇಶ್, ಕನಕ ನೌಕರರ ಸಂಘದ ಗೌರವಾಧ್ಯಕ್ಷರು ಶಾಂತಮೂರ್ತಿ, ಕೆ.ಟಿ. ಮಂಜುನಾಥ್, ಕಾರೇಹಳ್ಳಿ ರಂಗನಾಥ್, ವೆಂಕಟೇಶ್, ಫಯಾಜ್, ರೇವಣ ಸಿದ್ದೇಶ್ವರ ಮಠದ ಅಧ್ಯಕ್ಷ ಮಂಜಣ್ಣ, ಮಂಜುನಾಥ್ ಒಡೆಯರ್, ಲೋಹಿತ್, ವೆಂಕಟೇಶ್, ಶೃಂಗೇಶ್ವರ, ಮಂಜು ಡೖರು ಮಾರ್ಟ್ ರಾಘವೇಂದ್ರ, ಅಶೋಕ್, ಗೋವಿಂದರಾಜು ಮತ್ತಿತರರು ಉಪಸ್ಥಿತರಿದ್ದರು.

ಟಗರು ಕಾಳಗದಲ್ಲಿ ದಾವಣಗೆರೆ, ಹಾವೇರಿ, ತುಮಕೂರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಿಂದ ಟಗರುಗಳು ತರಲಾಗಿತ್ತು.