ಸಾರಾಂಶ
ಮಹಾಲಿಂಗಪುರ: ಆದ್ಯ ವಚನಕಾರ ದೇವಾಂಗ ಸಮಾಜದ ಆರಾಧಕ ದೇವರ ದಾಸಿಮಯ್ಯನವರ ಆದರ್ಶ ಮನುಕುಲಕ್ಕೆ ಸಂದೇಶ ನೀಡಿದೆಯಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಸ್ವಾಮಿಗಳು ಹೇಳಿದರು. ಚಿಮ್ಮಡ ಗ್ರಾಮದ ದಾಸಿಮಯ್ಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಾಸಿಮಯ್ಯನವರು ಒಂದೇ ಕುಲಕ್ಕೆ ಸಿಮಿತ ವಾಗಿರದೆ ಇಡೀ ಮನುಕುಲಕ್ಕೇ ಸಂದೇಶ ನೀಡುವ ಮಹಾನ್ ವ್ಯಕ್ತಿಯಾಗಿದ್ದರು. ಅವರ ವಚನ ಸಾಹಿತ್ಯ ನಾಡಿನೆಲ್ಲೆಡೆ ಮನೆಮಾತಾಗಿದ್ದು, ವಚನಗಳ ಮೂಲಕವೇ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಆದ್ಯ ವಚನಕಾರ ದೇವಾಂಗ ಸಮಾಜದ ಆರಾಧಕ ದೇವರ ದಾಸಿಮಯ್ಯನವರ ಆದರ್ಶ ಮನುಕುಲಕ್ಕೆ ಸಂದೇಶ ನೀಡಿದೆಯಂದು ಸ್ಥಳೀಯ ವಿರಕ್ತಮಠದ ಶ್ರೀ ಪ್ರಭು ಸ್ವಾಮಿಗಳು ಹೇಳಿದರು.ಚಿಮ್ಮಡ ಗ್ರಾಮದ ದಾಸಿಮಯ್ಯ ವೃತ್ತದಲ್ಲಿ ಹಮ್ಮಿಕೊಳ್ಳಲಾಗಿದ್ದ ದೇವರ ದಾಸಿಮಯ್ಯನವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ದಾಸಿಮಯ್ಯನವರು ಒಂದೇ ಕುಲಕ್ಕೆ ಸಿಮಿತ ವಾಗಿರದೆ ಇಡೀ ಮನುಕುಲಕ್ಕೇ ಸಂದೇಶ ನೀಡುವ ಮಹಾನ್ ವ್ಯಕ್ತಿಯಾಗಿದ್ದರು. ಅವರ ವಚನ ಸಾಹಿತ್ಯ ನಾಡಿನೆಲ್ಲೆಡೆ ಮನೆಮಾತಾಗಿದ್ದು, ವಚನಗಳ ಮೂಲಕವೇ ಸಾಮಾಜಿಕ ಕ್ರಾಂತಿ ಮಾಡಿದ್ದಾರೆ ಎಂದರು.
ರಘುನಾಥ ಪ್ರಿಯ ಸಾಧು ಮಹಾರಾಜರ ಮಠದ ಶ್ರೀ ಜನಾರ್ಧನ ಮಹಾರಾಜರು ಮಾತನಾಡಿ, 11ನೇ ಶತಮಾನದಲ್ಲಿಯೇ ವಚನಗಳನ್ನು ರಚಿಸುವ ಮೂಲಕ ಸಮಾಜರ ಓರೆ-ಕೋರೆ ತಿದ್ದಿದ ಕೀರ್ತಿ ದೇವರ ದಾಸಿಮಯ್ಯನವರಿಗೆ ಸಲ್ಲುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಾಂಗ ಸಮಾಜದ ಪ್ರಮುಖ ಶ್ರೀಕಾಂತ ಜಾಡಗೌಡರ ವಹಿಸಿದ್ದರು, ಅಶೋಕ ಧಡೂತಿ, ರಾಮಣ್ಣ ಬಗನಾಳ, ಗ್ರಾ.ಪಂ ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಬೀರಪ್ಪಾ ಹಳೆಮನಿ, ಮನೋಜ ಹಟ್ಟಿ, ಚನ್ನಪ್ಪಾ ಬಿಳ್ಳೂರ, ಬಸವರಾಜ ಕುಂಚನೂರ, ದುಂಡಪ್ಪಾ ಪಾಟೀಲ, ಪರಪ್ಪಾ ಬರಗಲ್, ಸುರೇಶ ಅಥಣಿ, ಬಸವರಾಜ ಕರಡಿ ಸೇರಿದಂತೆ ಹಲವಾರು ಪ್ರಮುಖರು ಇದ್ದರು.