ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿದ ಸಂಘ-ಸಂಸ್ಥೆಗಳು ಫಲಾಪೇಕ್ಷೆ ಇಲ್ಲದೇ ನಿಜವಾದ ಕಾಳಜಿ ಮತ್ತು ಉದ್ಧೇಶ ಹೊಂದಿದಾಗ ಸಮಾಜವೇ ಗುರುತಿಸಿ ಪುರಸ್ಕರಿಸುತ್ತದೆ. ಈ ನಿಟ್ಟಿನಲ್ಲಿ ಕಳೆದ 30 ವರ್ಷಗಳಿಂದ ತನ್ನದೇ ಆದ ಸಮಾಜ ಸೇವೆಯಲ್ಲಿ ತೊಡಗಿರುವ ಯುವಜನ ಸಂಘದ ಕಾರ್ಯವೈಖರಿ ಶ್ಲಾಘನೀಯ ಎಂದು ಕನ್ನಡ ಚಲನಚಿತ್ರ ನಟ ನಾಗೇಶ್ವರ ವಿಜಯಪುರ ಹೇಳಿದರು.ತಾಲೂಕಿನ ಕೋಟಿಪುರ ಗ್ರಾಮದ ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಆವರಣದಲ್ಲಿ ತಾಲೂಕು ಯುವಜನ ಸಂಘದ 30ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸಕ್ತ ಸಾಲಿನಲ್ಲಿ ಪರಿಸರ ಜಾಗೃತಿ ಪರಿಕಲ್ಪನೆ ಹೊಂದಿ ಸಸಿಗಳ ವಿತರಣೆಯಾಗಿದೆ. ಅರಣ್ಯವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವುದು ಉತ್ತಮ ಬೆಳವಣಿಗೆಯಾಗಿದೆ. ರೋಟರಿ ಸಿಟಿ ಸೆಂಟರ್ ಬೆಂಗಳೂರಿನಿಂದಲೂ ಸಹ ಯುವಜನ ಸಂಘದ ಹಲವಾರು ಕಾರ್ಯಕ್ರಮಗಳಿಗೆ ಸಹಕಾರ ನೀಡಿದ್ದೇವೆ. ಮುಂದೆಯೂ ಇದೇ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.ಕಲರ್ಸ್ ಕನ್ನಡ ವಾಹಿನಿಯ ಭಾಗ್ಯಲಕ್ಷ್ಮೀ ಧಾರಾವಾಹಿಯ ನಾಯಕ ನಟ ತಾಂಡವ್ ಸುದರ್ಶನ್ ಮಾತನಾಡಿ, ಕರ್ನಾಟಕದ ಹಲವಾರು ಭಾಗಗಳಲ್ಲಿ ಉತ್ತಮವಾಗಿ ಸೇವೆ ಸಲ್ಲಿಸುತ್ತಿರುವ ತಾಲೂಕು ಯುವಜನ ಸಂಘ ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಸಂಘದ ಸಂಸ್ಥಾಪಕ ಅಧ್ಯಕ್ಷ ಎಂ.ಎಸ್. ಕಾರ್ತಿಕ್ ಸಾಹುಕಾರ್ ಮಾತನಾಡಿ, ಕೇವಲ 8 ಜನರಿಂದ ಪ್ರಾರಂಭವಾದ ಸಂಘ ಇಂದು ಸಾವಿರಾರು ಸದಸ್ಯರನ್ನು ಹೊಂದಿದೆ. ಬಹಳಷ್ಟು ಹಳ್ಳಿಗಳಲ್ಲಿ ಶಾಖೆಯನ್ನು ಹೊಂದಿದೆ. ಪ್ರಾರಂಭದಲ್ಲಿ ಹಲವಾರು ಅಡೆತಡೆಗಳು ಬಂದರೂ ಸಹ ಅದನ್ನೆಲ್ಲ ಎದುರಿಸಿ ಇಂದು ಒಂದು ಶಿಲೆಯಾಗಿ ನಿಂತಿದೆ ಎಂದರು.ಕಂಪ್ಯೂಟರ್ ವಿತರಣೆ, ಆಂಬ್ಯುಲೆನ್ಸ್ ಸರ್ವಿಸ್, ವಿದ್ಯಾರ್ಥಿ ಪುರಸ್ಕಾರ, ಉಚಿತ ಸಸ್ಯಗಳ ವಿತರಣೆ, ನೋಟ್ ಪುಸ್ತಕಗಳ ವಿತರಣೆ, ಕುಡಿಯುವ ನೀರಿಗೆ ಅಳವಡಿಕೆ, ಟೈಲರಿಂಗ್ ಮಿಷನ್‌ಗಳ ಉಚಿತ ವಿತರಣೆ, ತೋಟಗಾರಿಕಾ ಸಸ್ಯಗಳ ವಿತರಣೆ ಈ ರೀತಿ ಹಲವಾರು ಕಾರ್ಯಕ್ರಮಗಳನ್ನು ಯುವಜನ ಸಂಘ ಮಾಡಿದೆ ಎಂದು ತಿಳಿಸಿದರು.
ಅನಂತರ ಜ್ಯೂ.ಅಂಬರೀಶ್, ಜ್ಯೂ.ವಿಷ್ಣುವರ್ಧನ್ ಅವರಿಂದ ಮನರಂಜನೆ, ಎವರಾನ್ ಇಂಟರ್ ನ್ಯಾಷನಲ್ ರೆಸಿಡೆನ್ಷಿಯಲ್ ಸ್ಕೂಲ್ ಮಕ್ಕಳಿಂದ ನೃತ್ಯ, ಕಲಾಕಾರ್ ನೃತ್ಯ ತಂಡದಿಂದ ನೃತ್ಯ ನಡೆಯಿತು.ಸಂಘದ ಅಧ್ಯಕ್ಷ ಎಚ್.ಸಿ. ಸಂಪತ್‌ಕುಮಾರ್ ಮಾತನಾಡಿದರು. ಹಿರಿಯ ಸದಸ್ಯ ಬಸವನಗೌಡ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಚಿತ್ರನಟಿ ಸಂಗೀತ ಭಟ್, ತಾಪಂ ಇಒ ಪ್ರದೀಪ್‌ಕುಮಾರ್, ಮಲ್ಲಿಕಾರ್ಜುನ್ ದ್ವಾರಳ್ಳಿ, ಜನಪದ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಖಲಂದರ ಸಾಬ್, ರುದ್ರಗೌಡ ಸಿ. ಪಾಟೀಲ್, ಶಂಕರ್ ಶೇಟ್, ನಾಗರಾಜ್ ಗುತ್ತಿ, ಶಶಿಧರ್ ಸಕ್ರಿ, ಚರಿತ ಕಾರ್ತಿಕ್, ಸುಷ್ಮ ವಿಜಯಪುರ, ಉಮೇಶ್ ಉಡುಗಣಿ, ರಾಮಚಂದ್ರ, ಮಂಜುನಾಥ್, ರಾಮ ನಾಯಕ್, ಪ್ರಕಾಶ್ ಕೋಟಿಪುರ, ಕೇಶವ ನಾಯಕ್, ರಮೇಶ್ ಆಗಸನಹಳ್ಳಿ, ಮಹಾಂತೇಶ್ ಕಳ್ಳಿಕೋನಿ ಮೊದಲಾದವರು ಉಪಸ್ಥಿತರಿದ್ದರು.
- - - -29ಕೆಪಿಸೊರಬ01:ಕೋಟಿಪುರದಲ್ಲಿ ಯುವ ಸಂಭ್ರಮ ಕಾರ್ಯಕ್ರಮವನ್ನು ನಟ ನಾಗೇಶ್ವರ ವಿಜಯಪುರ ಉದ್ಘಾಟಿಸಿದರು.