ದೇವರು ಕೊಟ್ಟ ಸಂಪತ್ತನ್ನು ಸಮಾಜದ ಸೇವೆಗೆ ಬಳಸಬೇಕು ಎಂಬ ತತ್ವದಂತೆ, ಬೆಂಗಳೂರಿನ ಆರ್.ಕೆ. ಫೌಂಡೇಶನ್ ಮತ್ತು ಅಲೆಜಾನ್ ಕಂಪನಿ ಹಮ್ಮಿಕೊಂಡಿರುವ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಹೇಳಿದ್ದಾರೆ.

- ನೋಟ್‌ಬುಕ್- ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮ

- - -

ಹರಿಹರ: ದೇವರು ಕೊಟ್ಟ ಸಂಪತ್ತನ್ನು ಸಮಾಜದ ಸೇವೆಗೆ ಬಳಸಬೇಕು ಎಂಬ ತತ್ವದಂತೆ, ಬೆಂಗಳೂರಿನ ಆರ್.ಕೆ. ಫೌಂಡೇಶನ್ ಮತ್ತು ಅಲೆಜಾನ್ ಕಂಪನಿ ಹಮ್ಮಿಕೊಂಡಿರುವ ತಾಲೂಕಿನ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯ ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ದುರುಗಪ್ಪ ಹೇಳಿದರು.

ನಗರದ ಬಿಇಒ ಕಚೇರಿ ಆವರಣದಲ್ಲಿರುವ ನಿವೃತ್ತ ಶಿಕ್ಷಕರ ಸಭಾಂಗಣದಲ್ಲಿ ನಡೆದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

25 ಗ್ರಾಮೀಣ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಣದಲ್ಲಿ ಉತ್ಸಾಹ ವರ್ಧನೆ ಹಾಗೂ ಅಗತ್ಯ ಸಹಾಯವಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ನಲಿ-ಕಲಿ ಯೋಜನೆಗೆ ಸಂಬಂಧಪಟ್ಟಂತೆ 81 ಟೇಬಲ್‌ಗಳು, ಚಾಪೆಗಳೊಂದಿಗೆ 22 ಸರ್ಕಾರಿ ಶಾಲೆಗಳ ಮಕ್ಕಳಿಗೆ ಸುಮಾರು13,000ಕ್ಕೂ ಅಧಿಕ ನೋಟ್‌ ಬುಕ್‌ಗಳು ವಿತರಣೆ ಮಾಡುತ್ತಿದ್ದಾರೆ. ಈ ವಿತರಣಾ ಸಂದರ್ಭವನ್ನು ಅಧ್ಯಯನ ಪ್ರವೃತ್ತಿಗೆ ಉತ್ತೇಜನ ನೀಡುವ ಮಹತ್ವದ ಹೆಜ್ಜೆ ಎಂದರು.

ಫೌಂಡೇಶನ್ ಸಂಸ್ಥಾಪಕಿ ಸುಮತಿ ರಂಗಾಚಾರ್ ಹಾಗೂ ಅಲೆಜಾನ್ ಕಂಪನಿಯ ಪ್ರತಿನಿಧಿ ನಾರಾಯಣ್ ಮಾತನಾಡಿ, ಸಮಾಜ ನಮಗೆ ಬಹಳಷ್ಟು ನೀಡಿದೆ. ಶಿಕ್ಷಣ ಪ್ರಗತಿಗೆ ಪೂರಕವಾಗಿ ಈ ರೀತಿ ಹಿಂದಿರುಗಿಸುವ ಹೊಣೆಗಾರಿಕೆಯಿಂದ ಪ್ರೇರಿತವಾಗಿ ಸೇವೆ ಆರಂಭಿಸಿದ್ದೇವೆ ಎಂದರು.

ಶಾಲಾ ಶಿಕ್ಷಕರಿಗೆ ವಿತರಣಾ ಸಾಮಗ್ರಿಗಳನ್ನು ಹಸ್ತಾಂತರಿಸಿದರು. ಅನುದಾನಿತ ಶಿಕ್ಷಕರ ಒಕ್ಕೂಟದ ಅಧ್ಯಕ್ಷ ಆರ್.ಆರ್. ಮಠ, ಶಾಲೆಯ ಮುಖ್ಯ ಶಿಕ್ಷಕ ಭೀಮಪ್ಪ ಕೆ., ಶಿಕ್ಷಕರಾದ ಮಾರುತಿ ಪರಮೇಶ್ವರಪ್ಪ, ರಾಘವೇಂದ್ರ, ಪೀರು ನಾಯಕ, ಗಿರೀಶ, ಪ್ರವೀಣ, ತಿರುಮಲ, ಆರ್.ಬಿ. ಮಲ್ಲಿಕಾರ್ಜುನ, ರುದ್ರಣ್ಣ, ಮುಸ್ತಾಕ್, ವೀರಣ್ಣ, ಚನ್ನಬಸಣ್ಣ, ಮಂಜಪ್ಪ ಬಿದರಿ, ಸರ್ವಮಂಗಳ, ಪರಶುರಾಮ, ಶ್ರೀಕಾಂತ, ಹನುಮಗೌಡ, ಚಂದ್ರಪ್ಪ, ಆನಂದ್, ಬೂತರೆಡ್ಡಿ, ಶಿವಕುಮಾರ, ಶರಣಕುಮಾರ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

- - -

-20HRR01.ಜೆಪಿಜಿ:

ಪಾಠೋಪಕರಣಗಳ ವಿತರಣೆ ಕಾರ್ಯಕ್ರಮದಲ್ಲಿ ಬಿಇಒ ದುರುಗಪ್ಪ ಮಾತನಾಡಿದರು.