ಸಾರಾಂಶ
ಕನ್ನಡಪ್ರಭ ವಾರ್ತೆ ಹುನಗುಂದ
ವೀರಶೈವ ಲಿಂಗಾಯತ ಸಮಾಜ ಇವತ್ತು ಕರ್ನಾಟಕ, ಮಹಾರಾಷ್ಟ್ರ ಆಂಧ್ರದಲ್ಲಿ ಬೆಳೆದಿದ್ದರೆ ವಿಶ್ವಗುರು ಬಸವಣ್ಣನವರ ಪುಣ್ಯದಿಂದ ಎಂದು ಸಕ್ಕರೆ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್.ಪಾಟೀಲ ಹೇಳಿದರು.ತಾಲೂಕಿನ ಕೂಡಲ ಸಂಗಮದ ಸಭಾಮಂಟಪದಲ್ಲಿದಲ್ಲಿ ಭಾನುವಾರ ನಡೆದ ಅಖಿಲ ಕರ್ನಾಟಕ ಹೆಂಡೆವಜೀರ ಸಮಾಜ, ಚಾಲುಕ್ಯ ಸಂಸ್ಕೃತಿ ಅಧ್ಯಯನ ಪೀಠ, ಕಲಬುರ್ಗಿ ಸಹಯೋಗದಲ್ಲಿ ರಾಜ್ಯಮಟ್ಟದ 3ನೇ ಬೃಹತ್ ಸಮಾವೇಶ-2025, ವಿಚಾರ ಸಂಕಿರಣ, ಗ್ರಂಥಗಳ ಲೋಕಾರ್ಪಣೆ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರ ಸನ್ಮಾನ, ಹಂಡೆಸಿರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಸವಣ್ಣನವರು ಯಾವುದೇ ಜಾತಿ, ಉಪಜಾತಿಯನ್ನು ಲೆಕ್ಕಿಸದೇ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ನಮ್ಮ ಸಮಾಜದಲ್ಲಿ ಬೆರಗಿಸುವ ಕೆಲಸ ಮಾಡಿದರು. ಆದರೂ ನಮ್ಮ ವೀರಶೈವ ಸಮಾಜದವರು ಒಗ್ಗಟ್ಟು ಆಗದೆ ಇರುವುದು ದುರ್ದೈವದ ಸಂಗತಿ ಎಂದರು.
ಆಕಸ್ಮಾತ ಎಲ್ಲ ವೀರಶೈವ ಲಿಂಗಾಯತರು ಎಲ್ಲರೂ ಒಗ್ಗಟಿನಿಂದ ಕೂಡಿ ಬೆಳೆದರೆ ಕರ್ನಾಟಕ ವಲ್ಲದೆ ದೇಶವನ್ನು ಆಳುವು ಶಕ್ತಿಯನ್ನು ಸಮಾಜ ಹೊಂದುತ್ತದೆ. ರಾಜರಿಂದ ಹಿಡಿದು ಪ್ರಜೆಗಳ ಇರುವ ಸಮಾಜ ಹಂಡೆವಜೀರ ಸಮಾಜವಾಗಿದೆ. ಸರ್ಕಾರದಿಂದ ವಿಶೇಷವಾಗಿ ವೀರಶೈವ ಸಮಾಜಕ್ಕೆ ಸೌಲಭ್ಯ ಸಿಗಬೇಕಾದರೆ ನಮ್ಮಲ್ಲಿ ಒಗ್ಗಟ್ಟು ಇರಬೇಕು. ಅದರ ಜೊತೆಗೆ ಹೋರಾಟದ ಆಶಾ ಭಾವನೆ ಇರಬೇಕು. ಆ ಹೋರಾಟದ ಆಶಾ ಭಾವನೆಯನ್ನು ಮೊದಲ ತೋರಿಸಿದ ಸಮಾಜ ಹಂಡೆವಜೀರ ಸಮಾಜವಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ನಾವೆಲ್ಲ ಜನಪ್ರತಿನಿಧಿಗಳು ಎಲ್ಲರೂ ಸಮಾಜದ ಧ್ವನಿಯಾಗಿರುತ್ತಾರೆ. ಹಂಡೆವಜೀರ ಸಮಾವೇಶದಲ್ಲಿ ನಡೆಯುವ ಎಲ್ಲ ನಿರ್ಣಯಕ್ಕೆ ಸರ್ಕಾರ ತಲೆಬಾಗಿ ನಡೆಯುವ ಕೆಲಸವನ್ನು ಸರ್ಕಾರದ ಪ್ರತಿನಿಧಿಯಾಗಿ ಮಾಡುತ್ತೇನೆ ಎಂದರು.ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ವಿಜಯನಗರ ರಕ್ಷಣೆಯಲ್ಲಿ ಹಂಡೆ ಹನಮಪ್ಪನಾಯಕ ಅರಸನ ಪಾತ್ರ ಗಮನಾರ್ಹವಾಗಿದೆ. ವಿರಶೈವ ಲಿಂಗಾಯತ ಪರಂಪರೆಯಲ್ಲಿ ವೀರಶೈವ ಹಂಡೆವಜೀರ ಸಮುದಾಯದವರು ಶಿವಭಕ್ತರಾಗಿ ಧರ್ಮ ಆಚರಣೆಯಲ್ಲಿ ಇದುವರೆಗೂ ಸಕ್ರಿಯವಾಗಿದ್ದಾರೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸಲಾಗುವುದು. ಸಮಾಜದೊಂದಿಗೆ ನಿಮ್ಮ ಬೆನ್ನೆಲು ಆಗಿರುವೆ ಎಂದು ಹೇಳಿದರು.
ಬಾಗಲಕೋಟೆ ಲೋಕಸಭೆಯ ಸದಸ್ಯ ಪಿ.ಸಿ.ಗದ್ದಿಗೌಡರ ಮಾತನಾಡಿ, ಸಮಾಜವು ಮುಂದೆ ಬರಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ಕೊಡಬೇಕು. ಅದರ ಜೊತೆಗೆ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ನೀಡಬೇಕು. ನಮ್ಮ ಜೀವನದಲ್ಲಿ ಎಷ್ಟು ಹಣ ಗಳಿಸುತ್ತೇವೆ ಮುಖ್ಯ ಅಲ್ಲ ನಾವು ಹೇಗೆ ನಡೆದುಕೊಂಡು ಹೋಗುತ್ತೇವೆ ಎಂಬುವುದು ಮುಖ್ಯ. ಸಮಾಜದಲ್ಲಿ ಉತ್ತಮವಾದ ಸಮಾಜ ಹಂಡೆವಜೀರ ಸಮಾಜವಾಗಿದೆ ಎಂದರು.ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ ಮಾತನಾಡಿ, ಹಂಡೆವಜೀರ ಸಮಾಜವು ರಾಜ್ಯಮಟ್ಟದ 3ನೇ ಉತ್ತಮ ಕಾರ್ಯಕ್ರಮವಾಗಿದೆ. ಹಂಡೆವಜೀರ ಸಮಾಜವು ರಾಜ ಮಹಾರಾಜರ ಸಮಾಜವಾಗಿದ್ದು ಗೌರವ, ಸ್ವಾಭಿಮಾನ, ನಿಷ್ಠೆ, ಪ್ರಾಮಾಣಿಕವಾದ ಸಮಾಜವಾಗಿದೆ. ಯಾರು ತಲೆತಗ್ಗಿಸದ ಉತ್ತಮ ಚರಿತ್ರ್ಯೆಯ ಸಮಾಜವಾಗಿದೆ. ಈ ಸಮಾಜವು ಬೇಡುವ ಸಮಾಜ ಅಲ್ಲ ಕೊಡುವ ದಾನಶೂರ ಸಮಾಜವಾಗಿದೆ ಎಂದರು. ದೇವರ ಹಿಪ್ಪರಗಿಯ ಶಾಸಕ ರಾಜುಗೌಡ ಪಾಟೀಲ ಮಾತನಾಡಿದರು.
ಗೂಳೂರು ಮಹಾಸಂಸ್ಥಾನಮಠದ ಧರ್ಮಗುರು ವೀರಭದ್ರ ಚನ್ನಮಲ್ಲ ದೇಶಿಕೇಂದ್ರ ಮಹಾಸ್ವಾಮೀಜಿ, ಕೊಟ್ಟೂರಸ್ವಾಮೀಜಿ ಸಂಸ್ಥಾನಮಠದ ಜಗದ್ಗುರು ಕೊಟ್ಟೂರ ಬಸವಲಿಂಗ ಸ್ವಾಮೀಜಿ, ಗದಗ ತೋಂಟದಾರ್ಯ ಸಂಸ್ಥಾನಮಠದ ಡಾ.ಸಿದ್ದರಾಮ ಮಹಾಸ್ವಾಮೀಜಿ, ಮುತ್ತಗಿ ವೀರರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ, ಬಿಲ್ ಕೆರೂರ ಸಿದ್ದಲಿಂಗ ಶಿವಾಚಾರ್ಯ, ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಕರಿಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಪರಕಾಶ ಶಿವಾಚಾರ್ಯ ಮಹಾಸ್ವಾಮೀಜಿ, ಗುರುಚನ್ನವೀರ ಶಿವಾಚಾರ್ಯಸ್ವಾಮೀಜಿ, ಶಿವಕುಮಾರ ಸ್ವಾಮೀಜಿ, ಸಿದ್ದರಾಮ ಮಹಾಸ್ವಾಮೀಜಿ, ಬಸವರಾಜ ಗೂರೂಜಿ, ಬಿಲ್ಯಾಳ ಅವವಪ್ಪಮುತ್ಯಾ, ಹಂಡೆವಜೀರ ಕ್ಷೇಮಾವೃದ್ಧಿ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ, ಬಾಗಲಕೋಟೆ ಜಿಲ್ಲಾಧ್ಯಕ್ಷ ವಿ.ಕೆ.ಪಾಟೀಲ, ರಾಜ್ಯ ಕಾರ್ಯಕಾರಿ ಸದಸ್ಯ ಜಿ.ಎನ್.ಪಾಟೀಲ ಹುನಗುಂದ ತಾಲೂಕಾಧ್ಯಕ್ಷ ಮಲಕಾಜಪ್ಪಗೌಡ ಪಾಟೀಲ, ವಕೀಲ ಗುರನಗೌಡ ಪಾಟೀಲ ಇತರರು ಇದ್ದರು. ವಿವಿಧ ಕೇತ್ರದಲ್ಲಿ ಸಾಧನೆಗೈದ ಸಮಾಜದ ಗಣ್ಯರನ್ನು ಸನ್ಮಾನಿಸಿದರು.