ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಡಾ. ಬಿ.ಆರ್. ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸುವ ಸಲುವಾಗಿ ಸರ್ಕಾರ ವಿದ್ಯಾರ್ಥಿನಿಲಯಗಳನ್ನು ಆರಂಭಿಸಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.ಪಟ್ಟಣದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 3.83 ಕೋಟಿ ರು.ಗಳಲ್ಲಿ ನಿರ್ಮಿಸಿರುವ ಡಾ.ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ಹೆಣ್ಣು ಶಿಕ್ಷಕಿತರಾಗಬೇಕೆಂಬ ಉದ್ದೇಶದಿಂದ ಇಂತಹ ನಿಲಯಗಳನ್ನು ಕಟ್ಟಲಾಗಿದೆ. ನಿಲಯದಲ್ಲಿ ಎಲ್ಲ ರೀತಿಯ ಮೂಲಭೂತ ಸೌಕರ್ಯದ ಜತೆಗೆ ಉತ್ತಮ ಮತ್ತು ಗುಣಮಟ್ಟದ ಊಟ ತಿಂಡಿ ನೀಡಲಾಗುತ್ತದೆ, ಇದನ್ನು ಹೆಣ್ಣು ಮಕ್ಕಳು ಸದ್ಬಳಕೆ ಮಾಡಿಕೊಂಡು ಉನ್ನತ ಶಿಕ್ಷಣ ಪಡೆದು ದೇಶದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಬೇಕೆಂದು ಕೋರಿದರು.ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರ್ ಮೂರ್ತಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಸಿದ್ದಪ್ಪ, ಕಾಂಗ್ರೆಸ್ ವಕ್ತಾರ ಸೈಯದ್ ಜಾಬೀರ್, ದಲಿತ ಮುಖಂಡರಾದ ಡಿ.ವಿ. ಗುಡಿನಂದೀಶ್, ಪುಟ್ಟಣಯ್ಯ, ನಂಜಯ್ಯ, ಗವಿಯಪ್ಪ, ಎಚ್.ಎಸ್. ಸ್ವಾಮಿ, ಭೀಮ್ ಆರ್ಮಿ ಗುರು, ಕೃಷ್ಣಯ್ಯ, ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಮಹೇಶ್‌ಕುಮಾರ್, ಎಇಇ ಜೀವನ್, ಎಂಜಿನಿಯರ್ ಚೇತನ್, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಉಮೇಶ್, ನಿಲಯ ಪಾಲಕರಾದ ಸಿದ್ದರಾಜು, ರೇಖಾ ಇದ್ದರು.
---------------