ಸಾಣೂರು ಯುವಕ ಮಂಡಲ 72ನೇ ವಾರ್ಷಿಕೋತ್ಸವ ಹಾಗೂ ಶ್ರೀ ವಾಣಿ ಯಕ್ಷಗಾನ ಸಭಾ ಯುವಕ ಮಂಡಲದ 55ನೇ ವಾರ್ಷಿಕೋತ್ಸವ ಶ್ರೀ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ನಡೆಯಿತು.

ಸಾಣೂರು ಯುವಕ, ಶ್ರೀ ವಾಣಿ ಯಕ್ಷಗಾನ ಸಭಾ ಯುವಕ ಮಂಡಲ 55ನೇ ವಾರ್ಷಿಕೋತ್ಸವ ಕಾರ್ಕಳ: ಸಾಣೂರು ಯುವಕ ಮಂಡಲ 72ನೇ ವಾರ್ಷಿಕೋತ್ಸವ ಹಾಗೂ ಶ್ರೀ ವಾಣಿ ಯಕ್ಷಗಾನ ಸಭಾ ಯುವಕ ಮಂಡಲದ 55ನೇ ವಾರ್ಷಿಕೋತ್ಸವ ಶ್ರೀ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ನಡೆಯಿತು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನೀಲ್ ಕುಮಾರ್‌ ಯುವಕ ಮಂಡಲದ ಮಹತ್ವಪೂರ್ಣ ಯೋಜನೆಯಾದ ಶಾಶ್ವತ ಆರೋಗ್ಯ ನಿಧಿ ಯೋಜನೆಗೆ ಚಾಲನೆ ನೀಡಿ, ಸಾಣೂರು ಯುವಕ ಮಂಡಲ ಹೊಸ ಯೋಜನೆಗಳನ್ನು ಹಮ್ಮಿಕೊಂಡು ಸಮಾಜಮುಖಿಯಾಗಿದೆ. ಆರೋಗ್ಯ ನಿಧಿ ಯೋಜನೆಯನ್ನು ಅನುಷ್ಠಾನ ಮಾಡಿ ಸಾಮಾಜಿಕ ಚಟುವಟಿಕೆಗಳಲ್ಲಿ ಕಲಶ ಪ್ರಾಯವಾದ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಜನರ ಕಣ್ಣೀರು ಒರಿಸುವವಂತಾಗಲಿ ಎಂದು ಶುಭ ಹಾರೈಸಿದರು. ಮೂಡುಬಿದಿರೆ ಆಳ್ವಾಸ್ ಕಾಲೇಜು ಆಡಳಿತಧಿಕಾರಿ ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ವಾರ್ಷಿಕೋತ್ಸವದ ಉದ್ಘಾಟನೆಯನ್ನು ಡೊಮಿನಿಕ್ ಪಿಂಟೋ ನೆರವೇರಿಸಿದರು. ಸಾಣೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಯುವರಾಜ್ ಜೈನ್, ಎಸ್ ಕೆ ಎಫ್ ಆಡಳಿತ ನಿರ್ದೇಶಕ ಪ್ರಜ್ವಲ್ ಆಚಾರ್, ಡಾ. ಕಾರ್ತಿಕ್ ರಾವ್, ಮೂಡಬಿದ್ರೆ ವಲಯದ ಅರಣ್ಯಧಿಕಾರಿ ಶ್ರೀಧರ್, ಸಾಣೂರು ನರಸಿಂಹ ಕಾಮತ್, ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀರಾಮ್ ಭಟ್, ಡಾ. ಅಜಿತ್ ಪ್ರಕಾಶ್, ದಯಾನಂದ ಶೆಟ್ಟಿ ಸಾಣೂರು ಗುತ್ತು, ಸಾಣೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಯಶೋಧ ಶೆಟ್ಟಿ, ರಾಜೇಶ್ವರಿ ಎಜುಕೇಶನ್ ಫೌಂಡೇಶನ್ ಕಾರ್ಯದರ್ಶಿ ಶ್ವೇತ ಡಿ. ಶೆಟ್ಟಿ, ಉದ್ಯಮಿ , ಉದಯ ಸಾಲ್ಯಾನ್ ಉಪಸ್ಥಿತರಿದ್ದರು.

ದಿ.ಶ್ರೀಧರ್ ಪಾಂಡಿ ಸ್ಮರಣಾರ್ಥ ನೀಡುವ ಈ ವರ್ಷದ ಯಕ್ಷಶ್ರೀ ಪ್ರಶಸ್ತಿಯನ್ನು ಮುರಳೀಧರ ಭಟ್ ಅವರಿಗೆ ನೀಡಿ ಗೌರವಿಸಲಾಯಿತು. ಅದರೊಂದಿಗೆ ಕರಾಟೆ ಮತ್ತು ಬಾಕ್ಸಿಂಗ್ ನಲ್ಲಿ ಮಿಂಚುತ್ತಿರುವ ಪ್ರಖ್ಯಾತ್ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ವಾರ್ಷಿಕೋತ್ಸವದ ಸಂದರ್ಭದಲ್ಲಿ ಸಾರ್ವಜನಿಕ ಶೌಚಾಲಯವನ್ನು ಲೋಕಾರ್ಪಣೆ ಮಾಡಲಾಯಿತು. ಸುಮಾರು 37 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಶಾಶ್ವತ ಆರೋಗ್ಯ ನಿಧಿ ಯೋಜನೆ ಮೂಲಕ 3 ಮಂದಿಗೆ ಸಹಾಯಧನ ಚೆಕ್ ವಿತರಿಸಲಾಯಿತು. ಯುವಕ ಮಂಡಲ ಅಧ್ಯಕ್ಷ ಗುರುಪ್ರಸಾದ್ ಶೆಟ್ಟಿ ಸ್ವಾಗತಿಸಿದರು. ಮಂಡಲದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಪ್ರಕಾಶ್ ರಾವ್ ನೆರವೇರಿಸಿದರು. ಮೋಹನ್ ಶೆಟ್ಟಿ ನಿರೂಪಿಸಿದರು, ಪ್ರಮಿತ್ ಸುವರ್ಣ ವಂದಿಸಿದರು.