ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಪ್ರಸ್ತುತ ಸಮಾಜದಲ್ಲಿ ಒಳ್ಳೆಯ ಗೆಳೆತ ಸಂಪಾದಿಸುವುದು ತುಂಬಾ ಕಷ್ಟ. ಅಂತಹದರಲ್ಲಿ ಉದ್ಯಮಿ ಎಸ್.ಡಿ.ಶಿವಕುಮಾರ್ ಅವರು ತಮ್ಮ ಸೇವಾ ಕಾರ್ಯದ ಮೂಲಕ ಅಪಾರ ಸ್ನೇಹಿತರನ್ನು ಸಂಪಾದಿಸಿ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮೆಚ್ಚುಗೆ ವ್ಯಕ್ತಪಡಿಸಿದರು.ತಾಲೂಕಿನ ಚಿಕ್ಕಾಡೆ ಹೊರವಲಯದಲ್ಲಿ ನಡೆದ ಉದ್ಯಮಿ, ಸಮಾಜ ಸೇವಕ ಸುಂಕಾತೊಣ್ಣೂರು ಎಸ್.ಡಿ.ಶಿವಕುಮಾರ್ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿ ಮಾತನಾಡಿ, ಶಿವಕುಮಾರ್ ಅವರು ಸದಾ ನಗುಮುಖದೊಂದಿಗೆ ಜನರ ಜತೆ ಬೆರೆಯುತ್ತಾರೆ. ಸಮಾಜದಲ್ಲಿ ಹಲವು ಸಮಾಜಮುಖಿ ಕೆಲಸ ಮಾಡುವ ಮೂಲಕ ಜನರ ಮನಸ್ಸು ಗೆದ್ದಿದ್ದಾರೆ ಎಂದರು.
ಕಿರುತೆರೆ ನಟ ಮಿಮಿಕ್ರಿ ಗೋಪಿ ಮಾತನಾಡಿ, ಉದ್ಯಮಿ ಶಿವಕುಮಾರ್ ಅವರು ಜೆಡಿಎಸ್ ಪಕ್ಷದ ಮುಖಂಡರಾಗಿ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಅವರ ಮಾರ್ಗದರ್ಶನದಲ್ಲಿ ಹಲವಾರ ಸಮಾಜಮುಖಿ ಕೆಲಸ ಕಾರ್ಯಮಾಡುತ್ತಿದ್ದಾರೆ. ಅದೇ ರೀತಿ ಸಿಎಸ್ಪಿ ಅವರು ಉತ್ತಮ ಜನಸೇವಕರು, ಶಾಸಕರು, ಸಂಸದ ಹಾಗೂ ಮಾಜಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿ ನಿತ್ಯ ಶಾಸಕ ಎಂಬ ಬಿರುದು ಪಡೆದುಕೊಂಡಿದ್ದಾರೆ ಎಂದರು ಬಣ್ಣಿಸಿದರು.ಉದ್ಯಮಿ ಶಿವಕುಮಾರ್ ಪತ್ನಿ ರಂಜಿತ ಅವರು ಅವರ ರಕ್ತದಲ್ಲಿ ಚಿತ್ರಬಿಡಿಸಿವಿಶೇಷ ಉಡುಗೊರೆ ನೀಡುವ ಮೂಲಕ ಶುಭಕೋರಿದರು.
ಇದೇ ವೇಳೆ ಕನಗನಮರಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಗ್ಗಡಹಳ್ಳಿ ರಾಮಕೃಷ್ಣ, ಸುಂಕಾತೊಣ್ಣೂರು ಗ್ರಾಪಂ ಮಾಜಿ ಅಧ್ಯಕ್ಷ ಜೆ.ದೇವೇಗೌಡ, ಮಾಜಿ ಉಪಾಧ್ಯಕ್ಷ ಹೇಮಂತ್ ಕುಮಾರ್, ಉದ್ಯಮಿ ಸತೀಶ, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ಕನಗನಮರಡಿ ಕೆ.ಪುಟ್ಟೇಗೌಡ, ಚಂದ್ರಶೇಖರಯ್ಯ ಸೇರಿದಂತೆ ಶಿವಕುಮಾರ್ ಹಾಗೂ ಸಿಎಸ್ಪಿ ಅಭಿಮಾನಿ ಬಳಗದ ಸದಸ್ಯರು ಇದ್ದರು.ನಾಳೆ ಕೇಂದ್ರ ಸಚಿವರ ಅಧ್ಯಕ್ಷತೆಯಲ್ಲಿ ದಿಶಾ ಸಮಿತಿ ಸಭೆ
ಮಂಡ್ಯ: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಹಾಗೂ ಸಂಸದ ಎಚ್.ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಜಿಲ್ಲಾ ನ.6ರಂದು ಬೆಳಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಕಾವೇರಿ ಸಭಾಂಗಣದಲ್ಲಿ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ (ದಿಶಾ) ಸಭೆ ಆಯೋಜಿಸಲಾಗಿದೆ. ಸಭೆಗೆ ಅಧಿಕಾರಿಗಳು ಅಗತ್ಯ ಮಾಹಿತಿಯೊಂದಿಗೆ ಇತರೆ ಸಿಬ್ಬಂದಿಯನ್ನು ನಿಯೋಜಿಸದೆ ತಪ್ಪದೇ ಹಾಜರಾಬೇಕೆಂದು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ತಿಳಿಸಿದ್ದಾರೆ.ನ.7 ರಿಂದ ಉದರ ದರ್ಶಕ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಮಂಡ್ಯ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನವೆಂಬರ್ ಮಾಹೆಯ ಉದರ ದರ್ಶಕ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಯು ನವೆಂಬರ್ 7ರಂದು ನಾಗಮಂಗಲ ಸಾರ್ವಜನಿಕ ಆಸ್ಪತ್ರೆ, ನ.11 ರಂದು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ, ನ.12 ರಂದು ಕೆ.ಆರ್.ಪೇಟೆ ತಾಲೂಕು ಆಸ್ಪತ್ರೆ, ನ.13 ರಂದು ಮದ್ದೂರು ತಾಲೂಕು ಆಸ್ಪತ್ರೆ, ನ.14 ರಂದು ನಾಗಮಂಗಲ ಸಾರ್ವಜನಿಕ ಆಸ್ಪತ್ರೆ, ನ.15 ರಂದು ಮಂಡ್ಯ ಮೀಮ್ಸ್ ಆಸ್ಪತ್ರೆ, ನ.18 ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆ, ನ.19 ರಂದು ನಾಗಮಂಗಲ ಸಾರ್ವಜನಿಕ ಆಸ್ಪತ್ರೆ, ನ.20 ರಂದು ಮದ್ದೂರು ತಾಲೂಕು ಆಸ್ಪತ್ರೆ, ನ.21 ಕೆ.ಆರ್ ಪೇಟೆ ತಾಲೂಕು ಆಸ್ಪತ್ರೆ, ನ.25 ರಂದು ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ ಮತ್ತು ನ.26 ರಂದು ಪಾಂಡವಪುರ ಉಪ ವಿಭಾಗ ಆಸ್ಪತ್ರೆಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯಲಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆಬುದ್ಧಿಮಾಂದ್ಯ ಹೆಣ್ಣು ಮಗುವಿನ ಪೋಷಕರ ಪತ್ತೆಗೆ ಮನವಿ
ಮಂಡ್ಯ: ಸುಮಾರು 7 ವರ್ಷದ ಪ್ರಿಯಾ ಎಂಬ ಬುದ್ಧಿಮಾಂದ್ಯ ಹೆಣ್ಣು ಮಗು ನಾಗಮಂಗಲದ ಆದಿಚುಂಚನಗಿರಿ ದೇವಸ್ಥಾನದಲ್ಲಿ ಪತ್ತೆಯಾಗಿದೆ. ಮಗುವನ್ನು ರಕ್ಷಿಸಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಿ ಮಗುವಿನ ಪೋಷಣೆ ಮತ್ತು ರಕ್ಷಣೆಗಾಗಿ ಸರ್ಕಾರಿ ಬಾಲಕಿಯರ ಬಾಲಮಂದಿರದಲ್ಲಿ ದಾಖಲು ಮಾಡಲಾಗಿದೆ.ಸದರಿ ಬಾಲಕಿಯ ಪೋಷಕರು ಇದ್ದಲ್ಲಿ ಪತ್ರಿಕೆಯಲ್ಲಿ ಪ್ರಕಟಣೆಯಾದ 60 ದಿನಗಳೊಳಗೆ ಮಗುವಿಗೆ ಸಂಬಂಧಿಸಿದ ದಾಖಲಾತಿಗಳೊಂದಿಗೆ ಮಕ್ಕಳ ಕಲ್ಯಾಣ ಸಮಿತಿ, ಯೋಗನರಸಿಂಹ ಕಾಂಪ್ಲೆಕ್ಸ್, 2ನೇ ಮಹಡಿ, 6ನೇ ಕ್ರಾಸ್, ಸುಭಾಷ್‌ನಗರ, ಮಂಡ್ಯ ವಿಳಾಸಕ್ಕೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08232-223222 ಅನ್ನು ಸಂಪರ್ಕಿಸಲು ಸರ್ಕಾರಿ ಬಾಲಮಂದಿರದ ಅಧೀಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
;Resize=(128,128))
;Resize=(128,128))
;Resize=(128,128))
;Resize=(128,128))