ವಿಜಯಪುರ ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಂಪ್ರದಾಯ, ಅನ್ನಪ್ರಸಾದ ಶಿಕ್ಷಣದ ಮಹತ್ವ ಮೂಲಕ ಸಮಾಜದ ಜನರಿಗೆ ಹಿತ ಬಯಸುವ ನಮ್ಮ ವೀರಶೈವ ಲಿಂಗಾಯತರು ಒಂದಾಗಬೇಕು. ಒಗ್ಗೂಡಬೇಕು ಅಂದಾಗ ಮಾತ್ರ ಸಮಾಜ ಸಮೃದ್ಧಿಯಾಗಲು ಸಾಧ್ಯ. ನೈತಿಕ ಮೌಲ್ಯಗಳು, ಸಂಸ್ಕೃತಿಯ ಅರಿವು ಪ್ರತಿಯೊಬ್ಬರ ಕರ್ತವ್ಯವಾಗಿದ್ದು, ಯುವಕರು ಸಮಾಜ ಸೇವೆ ಮಾಡಲು ಮುಂದಾಗಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಕರೆ ನೀಡಿದರು.ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ವಿಜಯಪುರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಸಾನ್ನಿಧ್ಯ ವಹಿಸಿದ್ದ ಸದ್ಗುರು ಅಭಿನವ ಸಿದ್ದಾರೂಢ ಸ್ವಾಮಿಗಳು ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗೂಡುವ ಕಾರ್ಯವಾಗಬೇಕು. ಮತ್ತೊಬ್ಬರ ಮನ್ಸನ್ನು ಮುರಿಯುವಂತಹ ಕೆಲಸವಾಗಬಾರದು. ಅಭಿಯಾನ, ಸ್ವಾಭಿಮಾನ ದೊಡ್ಡದು, ಸದೃಢ ಸಮಾಜವಾಗಬೇಕು ವೀರಶೈವ ತತ್ವ ಸಿದ್ಧಾಂತದಂತೆ ಎಲ್ಲರೂ ಕೂಡಿ ನಡೆಯಬೇಕು ಎಂದು ಸಲಹೆ ನೀಡಿದರು.ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ನಾಲ್ಕನೇ ಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ. ರೇಣುಕಾಪ್ರಸನ್ನ ಮಹಾಸಭೆಯ ಸಂವಿಧಾನ ಮತ್ತು ಸಂಘಟನೆ ಕುರಿತು ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಯುವ ಅಧ್ಯಕ್ಷ ಮನೋಹರ ಅಬ್ಬಿಗೆರೆ, ಎಂ.ಜಿ. ಯಾದವಾಡ, ಆರ್.ಎಂ. ತೋಟದ, ಕಮಲಾ ಗೆಜ್ಜಿ, ವಿಜಯಕುಮಾರ ಹುಂಡೇಕಾರ, ಸಹದೇವ ನಾಡಗೌಡರ, ಡಾ.ಸಂಗಮೇಶ ಮೇತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಐದನೇ ಗೋಷ್ಠಿಯಲ್ಲಿ ಪ್ರಸ್ತುತ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಜಿ.ಎಸ್.ಟಿ. ಸವಾಲುಗಳು ಕುರಿತು ಬಿ.ಎನ್. ಬಿರಾದಾರ, ಉಪನ್ಯಾಸ ನೀಡಿದರು. ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಹಾಗೂ ಇತರ ವಿಭಾಗಗಳ ಪದಾಧಿಕಾರಿಗಳು ಸಂಯುಕ್ತ ಸಭೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ರಾಜ್ಯ ಘಟಕದ ಅಧ್ಯಕ್ಷರಿಂದ ಸಮಾರೋಪ ನುಡಿ ಸಲ್ಲಿಸಿದರು.ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಸಾಹುಕಾರ, ಎನ್.ಕುಮಸಗಿ, ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಜಿಲ್ಲಾಧ್ಯಕ್ಷ ವಿ.ಸಿ.ನಾಗಠಾಣ, ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಸವರಾಜ ಇಟ್ಟಂಗಿ, ಬಸವರಾಜ ಒಂಟಿಗೂಡಿ, ಡಾ. ವಿ.ಡಿ.ಐಹೊಳ್ಳಿ, ಮಲ್ಲಿಕಾರ್ಜುನ ಅಮರಣ್ಣವರ, ಮಹಾದೇವ ಹಾಲಳ್ಳಿ, ಸುಬಾಸ ಬೆಟಗೇರಿ, ಈರಣ್ಣ ತೊಂಡಿಕಟ್ಟಿ, ಜಗದೀಶ ಮೋಟಗಿ, ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ಅಗಮಿಸಿದ್ದ ವೀರಶೈವ ಸಮಾಜದ ಮುಖಂಡರು ಮಹಿಳಾ ಪ್ರತಿನಿಧಿಗಳು, ಯುವಕರು ಪಾಲ್ಗೊಂಡಿದ್ದರು. ಸಂಗಮೇಶ ಬದಾಮಿ, ಸುಭಾಸ ಕನ್ನೂರ ನಿರೂಪಿಸಿದರು. ವಿ.ಎಸ್. ತೇಲಿ ವಂದಿಸಿದರು.