ಕಾತರ ಹೆಚ್ಚಿಸಿದ ಸೊಸೈಟಿ ಚುನಾವಣೆ ಫಲಿತಾಂಶ

| Published : Oct 09 2025, 02:01 AM IST

ಕಾತರ ಹೆಚ್ಚಿಸಿದ ಸೊಸೈಟಿ ಚುನಾವಣೆ ಫಲಿತಾಂಶ
Share this Article
  • FB
  • TW
  • Linkdin
  • Email

ಸಾರಾಂಶ

ಕೋರ್ಟಎಲ್ಲ ಷೇರುದಾರರಿಗೂ ಮತದಾನದ ಅವಕಾಶ ನೀಡಿ ಎಂದು ಕೋರ್ಟನಿಂದ ಅರ್ಹತೆ ಪಡೆದ ಮತದಾರರು ಸಹ ಮತದಾನ ಮಾಡಬಹುದು ಎಂದು ಅವಕಾಶ ನೀಡಿತ್ತು

ಕುಕನೂರು: ಪಟ್ಟಣದ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ ಜರುಗಿ ಬರೋಬ್ಬರಿ 9 ತಿಂಗಳ ನಂತರ ಮತ ಎಣಿಕೆ ಕಾರ್ಯ ಆಗುತ್ತಿದ್ದು, ಮತ ಎಣಿಕೆ ಜನರಲ್ಲಿ ಕಾತರ ಹೆಚ್ಚಿಸಿದೆ.

ಕಳೆದ ಡಿ.29 ರಂದು ಸೊಸೈಟಿಯ ಚುನಾವಣೆ ಜರುಗಿತ್ತು. ಅಂದೇ ಮತ ಎಣಿಕೆ ಆಗಬೇಕಿತ್ತು. ಆದರೆ ಮತ ಎಣಿಕೆ ಆಗದೆ ಉಳಿದು ಬಿಟ್ಟಿತು. ಸೊಸೈಟಿ ಚುನಾವಣೆಯಲ್ಲಿ ಕೆಲವರಿಗೆ ಮಾತ್ರ ಮತದಾನದ ಹಕ್ಕು ನೀಡಿದ್ದಾರೆ. ಎಲ್ಲ ಷೇರುದಾರರಿಗೆ ನೀಡಿಲ್ಲ ಎಂದು ಸೊಸೈಟಿ ಚುನಾವಣೆಯ ಮತದಾರರ ಪಟ್ಟಿ ಪ್ರಶ್ನಿಸಿ ಕೆಲವರು ಕೋರ್ಟಿನಿಂದ ತಮಗೂ ಮತದಾನದ ಅವಕಾಶ ನೀಡಬೇಕು ಎಂದು ಮೋರೆ ಹೋಗಿದ್ದರು. ಕೋರ್ಟ ಸಹ ಎಲ್ಲ ಷೇರುದಾರರಿಗೂ ಮತದಾನದ ಅವಕಾಶ ನೀಡಿ ಎಂದು ಕೋರ್ಟನಿಂದ ಅರ್ಹತೆ ಪಡೆದ ಮತದಾರರು ಸಹ ಮತದಾನ ಮಾಡಬಹುದು ಎಂದು ಅವಕಾಶ ನೀಡಿತ್ತು. ಅವರಿಗಾಗಿ ಪ್ರತ್ಯೇಕ ಮತದಾನದ ಪೆಟ್ಟಿಗೆ ಸಹ ತೆರಲಾಗಿತ್ತು. ಹಾಗೇ ಸೊಸೈಟಿಯ ಅರ್ಹತೆಯಲ್ಲಿರುವ ಮತದಾರರಿಗೂ ಇನ್ನೊಂದು ಮತದಾನದ ಪೆಟ್ಟಿಗೆ ಇಡಲಾಗಿತ್ತು.ಚುನಾವಣೆ ನಂತರ ಮತ ಎಣಿಕೆ ಎರಡು ಪೆಟ್ಟಿಗೆಯಿಂದ ಮಾಡಬೇಕು ಎಂದು ಹಲವರು ಪಟ್ಟು ಹಿಡಿದರು, ಇನ್ನೂ ಕೆಲವು ಸೊಸೈಟಿ ನೀಡಿದ ಮತದಾರರ ಪಟ್ಟಿಯ ಮತದಾನ ಮಾತ್ರ ಎಣಿಕೆ ಮಾಡಲಿ ಎಂದು ಪಟ್ಟು ಹಿಡಿದರು. ಹಾಗಾಗಿ ಎರಡು ತಂಡಗಳ ನಡುವೆ ಜಿದ್ದು ಬಿದ್ದಿದ್ದರಿಂದ ಮತ ಎಣಿಕೆ ಆಗಿರಲಿಲ್ಲ. ಅಲ್ಲದೆ ಇದನ್ನು ಪ್ರಶ್ನಿಸಿ ಬಿಜೆಪಿಯವರು ಸಹ ಅಹೋರಾತ್ರಿ ಧರಣಿ ಮಾಡಿದ್ದು ಸಹ ಉಂಟು.

ಸಹಕಾರ ಸಂಘದ ಸಾಲಗಾರ ಮೀಸಲು ಕ್ಷೇತ್ರದಿಂದ 11 ಹಾಗೂ ಸಾಲಗಾರ ಅಲ್ಲದ 1 ಕ್ಷೇತ್ರದಿಂದ ಒಂದು ಒಟ್ಟು 12 ಸದಸ್ಯರಿಗೆ ಚುನಾವಣೆಯಾಗಿದ್ದು, ಸುಮಾರು 24 ಸ್ಪರ್ಧಿಗಳು ಅಖಾಡದಲ್ಲಿ ಇದ್ದು ಚುನಾವಣೆಯನ್ನು ಎದುರಿಸಿದ್ದಾರೆ. ಈಗ ಕೋರ್ಟ್ ರೈತರ ಹಿತ ದೃಷ್ಟಿಯಿಂದ ಆಡಳಿತ ಮಂಡಳಿಯ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟಿಸಲು ಆದೇಶ ನೀಡಿದೆ. ಆದರೆ 24 ಅಭ್ಯರ್ಥಿಗಳ ಫಲಿತಾಂಶವು ಇಂದು ಹೊರ ಬರಲಿದ್ದು ಕಾತರ ಹೆಚ್ಚಿದೆ.