ಸದಸ್ಯರಿಗೆ ಶೇ.25 ಲಾಭಾಂಶ ನೀಡುವ ಸೊಸೈಟಿ

| Published : Sep 25 2024, 12:59 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಚಡಚಣ ಹೊರ್ತಿಯ ರೇವಣಸಿದ್ಧೇಶ್ವರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯು 29 ವರ್ಷಗಳಿಂದ ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ನೀಡುವ ವಿಜಯಪುರ ಜಿಲ್ಲೆ ಮತ್ತು ರಾಜ್ಯದಲ್ಲೇ ಮೊದಲ ಸೊಸೈಟಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರಾಮಾಣಿಕ ಸೇವೆ ಹಾಗೂ ನಿರ್ದೇಶಕ ಮಂಡಳಿ ಮತ್ತು ಗ್ರಾಹಕರ ಸಹಕಾರದಿಂದ ಅತ್ಯುತ್ತಮ ಬೆಳವಣಿಗೆ ಹೊಂದಲು ಕಾರಣವಾಗಿದೆ ಎಂದು ಸೊಸೈಟಿ ಸಂಸ್ಥಾಪಕ-ಅಧ್ಯಕ್ಷ ಅಣ್ಣಪ್ಪ ಖೈನೂರ ಹೇಳಿದರು.

ಕನ್ನಡಪ್ರಭ ವಾರ್ತೆ ಚಡಚಣ

ಹೊರ್ತಿಯ ರೇವಣಸಿದ್ಧೇಶ್ವರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯು 29 ವರ್ಷಗಳಿಂದ ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ನೀಡುವ ವಿಜಯಪುರ ಜಿಲ್ಲೆ ಮತ್ತು ರಾಜ್ಯದಲ್ಲೇ ಮೊದಲ ಸೊಸೈಟಿ ಎಂಬ ಖ್ಯಾತಿಗೆ ಪಾತ್ರವಾಗಿದೆ. ಪ್ರಾಮಾಣಿಕ ಸೇವೆ ಹಾಗೂ ನಿರ್ದೇಶಕ ಮಂಡಳಿ ಮತ್ತು ಗ್ರಾಹಕರ ಸಹಕಾರದಿಂದ ಅತ್ಯುತ್ತಮ ಬೆಳವಣಿಗೆ ಹೊಂದಲು ಕಾರಣವಾಗಿದೆ ಎಂದು ಸೊಸೈಟಿ ಸಂಸ್ಥಾಪಕ-ಅಧ್ಯಕ್ಷ ಅಣ್ಣಪ್ಪ ಖೈನೂರ ಹೇಳಿದರು.ಹೊರ್ತಿ ಗ್ರಾಮದ ಶ್ರೀ ರೇವಣಸಿದ್ಧೇಶ್ವರ ಕೋ-ಆಪ್‌ ಕ್ರೆಡಿಟ್ ಸೊಸೈಟಿಯ 30ನೇ ವರ್ಷದ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಆಯವ್ಯಯ ಮಂಡಿಸಿ ಅವರು ಮಾತನಾಡಿದರು. ಸೊಸೈಟಿಯು ಪ್ರಸಕ್ತ ವರ್ಷ ಒಟ್ಟು 5935 ಸದಸ್ಯರನ್ನು ಹೊಂದಿ, 2023-24ನೇ ಸಾಲಿನಲ್ಲಿ ಶೇರು ಬಂಡವಾಳ ₹1.4 ಕೋಟಿ, ಠೇವಣಿ ₹ 44.68 ಕೋಟಿ, ನಿಧಿಗಳು ₹15.47 ಕೋಟಿ, ದುಡಿಯುವ ಬಂಡವಾಳ ₹80.12 ಕೋಟಿ, ಸದಸ್ಯರಿಗೆ ಸಾಲ ನೀಡಿಕೆ ₹36.74 ಕೋಟಿ, ನಿವ್ವಳ ಲಾಭ ₹ 1.58 ಕೋಟಿ ಗಳಿಸಿದೆ. ಈ ಸೊಸೈಟಿಯು ಶೇ.25 ರಷ್ಟು ಲಾಭಾಂಶ ನೀಡಲಾಗುವುದು ಎಂದ ಅವರು, ಆಡಿಟ್ ಎ ವರ್ಗೀಕರಣ ಪಡೆದಿದ್ದು, ₹2.25 ಕೋಟಿ ಧಮಾರ್ಥ ನಿಧಿ ನೀಡಲಾಗಿದೆ. ಎಂದರು.

ಪ್ರೊ.ಎಸ್.ಎಸ್.ಪೂಜಾರಿ, ಪ್ರಾಚಾರ್ಯ ಬಸವರಾಜ ಸಾವಕಾರ ಮಾತನಾಡಿ, ಸಹಕಾರ ಸಂಘಗಳು ಹುಟ್ಟು ಬೆಳವಣಿಗೆ ಕುರಿತು ವಿವರಿಸಿದರು. ಸಹಕಾರ ಸಂಘಗಳು ರೈತರ ಬೆನ್ನೆಲುಬುವಾಗಿ ಆರ್ಥಿಕ ಸಹಾಯ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಹೇಳಿದರು.

ಕನ್ನೂರು ಗುರುಮಠದ ಸೋಮಲಿಂಗ ಶಿವಾಚಾರ್ಯರು ಆಶೀರ್ವಚನ ನೀಡಿ, ಶ್ರೀ ರೇವಣಸಿದ್ಧೇಶ್ವರ ಸೊಸೈಟಿ ಮತ್ತು ಸಹಕಾರ ಸಂಘಗಳು ಬೆಳವಣಿಗೆ ಹೊಂದಲು ಪರಸ್ಪರ ಸಹಕಾರ ಮುಖ್ಯವಾಗಿದೆ. ಆದ್ದರಿಂದ ಸದಸ್ಯ ಮತ್ತು ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿಸಿದಾಗ ಸಂಘಗಳು ಪ್ರಗತಿ ಪಥ ಕಂಡು, ಸಾಲ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಮುಖಂಡರಾದ ಗೋಪಾಲಗೌಡ, ಶ್ರೀಮಂತ ಇಂಡಿ ಮಾತನಾಡಿ, ಗ್ರಾಮಾಭಿವೃದ್ಧಿಯಲ್ಲಿ ಸಹಕಾರ ಸಂಘಗಳು ಮಹತ್ವದ ಪಾತ್ರವಹಿಸಿವೆ. ಸಹಕಾರ ಸಂಘಗಳಿಗೆ ಸದಸ್ಯ ಮತ್ತು ಗ್ರಾಹಕರು ಸಂಘದ ಜೀವಾಳವಿದ್ದಂತೆ ಎಂದರು.

ವಿಜಯಪೂರದ ವಿ.ಎಂ.ಬಾಗಾಯತ ಮಾತನಾಡಿ, ಹೊರ್ತಿಯ ಶ್ರೀ ರೇವಣಸಿದ್ಧೇಶ್ವರ ಸೊಸೈಟಿ ಅಧ್ಯಕ್ಷ ಅಣ್ಣಪ್ಪ ಖೈನೂರ ಅವರು, ಈ ಭಾಗದ ಕೆರೆಗಳಿಗೆ ನೀರು ಹರಿಸುವ ಹೋರಾಟಗಾರರಾಗಿ ಶಿಕ್ಷಣ, ಸಾಮಾಜಿಕ ಹೋರಾಟಗಾರರಾಗಿ ನೇತೃತ್ವ ವಹಿಸಿದ್ದಾರೆ ಎಂದರು.

ಸಭೆಯಲ್ಲಿ ತಾಂಬಾದ ಚಂದ್ರಶೇಖರ ಗೌಡ, ರಮೇಶಗೌಡ ಬಿರಾದಾರ, ಶ್ರೀಶೈಲ ಶಿವೂರ, ಎಂ.ಎಂ.ಸೋಫೇಘರ, ಮಲ್ಲಿಕಾರ್ಜುನ ಮೆಡೆಗಾರ, ಶಿವಲಿಂಗಪ್ಪ ಜಂಗಮಶೆಟ್ಟಿ, ಬುದ್ದಪ್ಪ ಭೋಸಗಿ, ರೇವಪ್ಪ ಖೈನೂರ, ಜನಗೊಂಡ ಪೂಜಾರಿ, ಬಸವರಾಜ ಜಂಬಗಿ, ಮಲ್ಲು ಬಬಲಾದ, ಸೊಸೈಟಿ ನಿರ್ದೇಶಕರು ಹಾಗೂ ಸದಸ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ಮಲ್ಲು ಬಬಲಾದ ಸ್ವಾಗತಿಸಿದರು, ಬಸವರಾಜ ಜಂಬಗಿ ನಿರೂಪಿಸಿದರು, ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಬಿ.ಎಸ್.ತೇಲಿ ವಂದಿಸಿದರು.