ಸಮಾಜದ ಪರಿವರ್ತನೆ-ಸುಧಾರಣೆಗೆ ಯುವ ಸಮುದಾಯ ಶ್ರಮಿಸಲಿ

| Published : Oct 16 2025, 02:00 AM IST

ಸಾರಾಂಶ

ಚಿಂತನೆ, ಮನಸ್ಸುಗಳಿಗೆ ಬಡತನ ಅಥವಾ ಮುಪ್ಪು ಇಲ್ಲ. ಆದ್ದರಿಂದ ಯುವ ಜನತೆಯು ನಾಯಕರಾಗಿ ಬೆಳೆಯಬೇಕು. ದೇಶದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಾ ಹೆಜ್ಜೆ ಹಾಕಬೇಕು.

ಧಾರವಾಡ:

ಯುವ ಸಮುದಾಯಗಳು ಈ ದೇಶದ ಬೆನ್ನೆಲುಬು. ಸಮಾಜದ ಪರಿವರ್ತನೆ ಮತ್ತು ಸುಧಾರಣೆಗಳಿಗೆ ಅವರು ಶ್ರಮಿಸಬೇಕು. ಅಂತಹ ಕಾರ್ಯವನ್ನು ಕಲಾ ಪ್ರತಿಷ್ಠಾನವು ಯುವ ಚಿಂತನಾ ಸಮಾವೇಶದ ಮೂಲಕ ಮಾಡುತಿರುವುದು ಶ್ಲಾಘನೀಯ ಕಾರ್ಯ ಎಂದು ಡಾ. ಶಶೀಧರ ನರೇಂದ್ರ ಹೇಳಿದರು.

ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ರಾಣಿಚೆನ್ನಮ್ಮನಗರದ ಬಾಗೇವಾಡಿ ನಿವಾಸದಲ್ಲಿ ಹಮ್ಮಿಕೊಂಡ ಯುವಚಿಂತನಾ ಸಮಾವೇಶ-೨ಕ್ಕೆ ಸರ್ವಾಧ್ಯಕ್ಷರಾಗಿ ಅಯ್ಕೆಯಾದ ಇಂ. ಸುನೀಲ್ ಬಾಗೇವಾಡಿ ಅವರನ್ನು ಅಧಿಕೃತವಾಗಿ ಆಮಂತ್ರಣ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಚಿಂತನೆ, ಮನಸ್ಸುಗಳಿಗೆ ಬಡತನ ಅಥವಾ ಮುಪ್ಪು ಇಲ್ಲ. ಆದ್ದರಿಂದ ಯುವ ಜನತೆಯು ನಾಯಕರಾಗಿ ಬೆಳೆಯಬೇಕು. ದೇಶದ ಅಭಿವೃದ್ಧಿಗೆ ಪೂರಕವಾದ ವಾತಾವರಣ ನಿರ್ಮಿಸುತ್ತಾ ಹೆಜ್ಜೆ ಹಾಕಬೇಕು ಎಂದು ಹೇಳಿದರು.

ಕಸಾಪ ಜಿಲ್ಲಾಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿ, ಎಲ್ಲದಕ್ಕೂ ಜಾತಿ, ದುಡ್ಡಿನ ಬಲ ಬೇಕಿಲ್ಲ. ಪರರೊಂದಿಗೆ ನಮ್ಮನ್ನು ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು ಹೊರ ಬಂದಾಗ ಮಾತ್ರ ನಮ್ಮ ಅಭಿವೃದ್ಧಿ ಹಾಗೂ ನಮ್ಮ ನಾಯಕತ್ವ ಗುಣಗಳು ಬೆಳಕಿಗೆ ಬರುತ್ತವೆ. ಅಂತಹ ಕಾರ್ಯವನ್ನು ಸುನೀಲ ಬಾಗೇವಾಡಿ ಮಾಡಿದ್ದಾರೆ ಮತ್ತು ಪ್ರತಿಷ್ಠಾನ ಮಾಡುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಐಐಐಟಿಯ ಡೀನ ಡಾ. ಗೋಪಿನಾಥ, ವಿನಾಯ ಜೋಶಿ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್‌. ಫರಾಸ್, ಉಪಾಧ್ಯಕ್ಷ ಸುರೇಶ ಬೆಟಗೇರಿ, ಎಂ.ಎನ್‌. ಪಾಟೀಲ, ಪತ್ರಕರ್ತ ಬಸವರಾಜ ಆನೇಗುಂದಿ, ವಿಜಯಲಕ್ಷ್ಮಿ ಕಲ್ಯಾಣಶೆಟ್ಟರ, ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ಲ, ಇಂ. ಸಂಜಯ ಕಬ್ಬೂರ, ಸಿದ್ದು ಕಲ್ಯಾಣಶೆಟ್ಟರ, ಎನ್.ಎಂ. ದ್ಯಾಪೂರ, ಕೃಷ್ಣಮೂರ್ತಿ ಗೊಲ್ಲರ, ನಿವೃತ್ತ ಬ್ಯಾಂಕ್‌ ಅಧಿಕಾರಿ ಧಾರವಾಡಕರ, ಇಂ. ದಯಾನಂದ ಮಾಸೂರ ಮಾತನಾಡಿದರು.

ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಸುನೀಲ ಬಾಗೇವಾಡಿ ಮಾತನಾಡಿ, ಈ ಜವಾಬ್ದಾರಿಯನ್ನು ಪ್ರತಿಷ್ಠಾನದ ಗುರಿ, ಉದ್ದೇಶ ಹಾಗೂ ಸಮಾವೇಶದ ಧ್ಯೇಯದಂತೆ ಕಾರ್ಯ ಮಾಡಲು ಶ್ರಮಿಸುವೆ ಎಂದರು.

ಪ್ರತಿಷ್ಠಾನದ ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ಸುರೇಶ ಬೆಟಗೇರಿ ಸ್ವಾಗತಿಸಿದರು. ಸರಸ್ವತಿ ಮಹಿಳಾ ಮಂಡಳದ ಅಧ್ಯಕ್ಷೆ ನೇಹಾ ಬುದ್ನಿ ಪ್ರಾರ್ಥಿಸಿದರು. ರವಿ ಬಾಗೇವಾಡಿ ವಂದಿಸಿದರು.ಸರೋಜಾ ನರೇಂದ್ರ, ನೀಹಾಲ ಮಾಸೂರ, ಪ್ರತಿಷ್ಠಾನದ ಪದಾಧಿಕಾರಿಗಳು, ಬಾಗೇವಾಡಿ ಕುಟುಂಬದ ಸದಸ್ಯರು ಹಾಗೂ ಮಹಿಳಾ ಮಂಡಳದ ಪದಾಧಿಕಾರಿಗಳು ಇದ್ದರು.