ದಾಬಸ್ಪೇಟೆ: ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ನಿರ್ಮಾಣಕ್ಕೆ ಮಣ್ಣು ಹೊಡೆಯುವ ವಿಷಯದಲ್ಲಿ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಉಂಟಾದ ಪರಿಣಾಮ ಎರಡು ಗುಂಪಿನ ಮಧ್ಯೆ ಕೈಕೈ ಮಿಲಾಯಿಸಿ ನೂಕಾಟ ತಳ್ಳಾಟ ನಡೆದದ್ದಲ್ಲದೆ, ಪೊಲೀಸರ ವಿರುದ್ಧವೂ ಅವಾಚ್ಯ ಪದಗಳಿಂದ ನಿಂದಿಸಿರುವ ನಡೆದ ಘಟನೆ ಸೋಂಪುರ ಹೋಬಳಿಯ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ
ದಾಬಸ್ಪೇಟೆ: ಕೈಗಾರಿಕಾ ಪ್ರದೇಶದಲ್ಲಿರುವ ಕೈಗಾರಿಕಾ ನಿರ್ಮಾಣಕ್ಕೆ ಮಣ್ಣು ಹೊಡೆಯುವ ವಿಷಯದಲ್ಲಿ ಗ್ರಾಮಸ್ಥರಲ್ಲಿ ಭಿನ್ನಾಭಿಪ್ರಾಯ ಉಂಟಾದ ಪರಿಣಾಮ ಎರಡು ಗುಂಪಿನ ಮಧ್ಯೆ ಕೈಕೈ ಮಿಲಾಯಿಸಿ ನೂಕಾಟ ತಳ್ಳಾಟ ನಡೆದದ್ದಲ್ಲದೆ, ಪೊಲೀಸರ ವಿರುದ್ಧವೂ ಅವಾಚ್ಯ ಪದಗಳಿಂದ ನಿಂದಿಸಿರುವ ನಡೆದ ಘಟನೆ ಸೋಂಪುರ ಹೋಬಳಿಯ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಲಕ್ಷ್ಮೀ ಸ್ಟೀಲ್ ಕಾರ್ಖಾನೆಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ರಾತ್ರಿ ಸಮಯದಲ್ಲಿ ಅವ್ವೇರಹಳ್ಳಿ ಗ್ರಾಮದ ಕೃಷ್ಣ ಹಾಗೂ ಚಂದ್ರಶೇಖರ್ ಲಾರಿಗಳಲ್ಲಿ ಮಣ್ಣು ಹೊಡೆಯುವಾಗ, ಅದೇ ಗ್ರಾಮದ ಕೆಲವರು ಸ್ಥಳಕ್ಕೆ ಬಂದು ನಮಗೂ ಇದೇ ಕಂಪನಿಗೆ ಮಣ್ಣ ಹೊಡೆಯುಲು ಪಿಒ ಆಗಿದೆ. ನೀವೂ ಸಹ ಪಿಒ ತೆಗೆದುಕೊಂಡು ಮಣ್ಣು ಹೊಡೆಯಿರಿ. ನಮ್ಮ ಗ್ರಾಮದವರನ್ನು ಬಿಟ್ಟು ಬೇರೆಯವರು ಮಣ್ಣು ಹೊಡೆಯಲು ಅವಕಾಶ ಮಾಡಿಕೊಟ್ಟಿರುವ ಬಗ್ಗೆ ಮಾಹಿತಿಯಿದೆ. ನಾವು ಜಮೀನು ಕಳೆದುಕೊಂಡಿದ್ದು, ನಮ್ಮ ಗ್ರಾಮದವರೇ ಒಗ್ಗೂಡಿ ಮಣ್ಣು ಹೊಡಿಯೋಣ ಎಂದು ಗ್ರಾಮಸ್ಥರು ಹೇಳಿದ್ದಾರೆ.ಗ್ರಾಮಸ್ಥರ ಮಾತಿನಿಂದ ಕೆರಳಿದ ಕೃಷ್ಣ ಎಂಬ ವ್ಯಕ್ತಿ ನಾನೇ ಮಣ್ಣು ಹೊಡಿಯುತ್ತೇನೆ. ಬೇರೆಯವರಿಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿದಾಗ ಗ್ರಾಮಸ್ಥರು ಹಾಗೂ ಕೃಷ್ಣ, ಚಂದ್ರಶೇಖರ್ ನಡುವೆ ಮಾತಿನ ಚಕಮಕಿ ನಡೆದು ಎರಡೂ ಗುಂಪುಗಳ ನಡುವೆ ಕೈಕೈ ಮಿಲಾಯಿಸಿಲ್ಲದೆ ನೂಕಾಟ, ತಳ್ಳಾಟ ನಡೆಯಿತು. ಸ್ಥಳದಲ್ಲೇ ಇದ್ದ 112 ಪೊಲೀಸರು ಘಟನೆ ತಿಳಿಗೊಳಿಸಲು ಯತ್ನಿಸಿದರೂ ಜಗಳ ಅತಿರೇಕಕ್ಕೆ ಹೋಗಿ ಅಂತಿಮವಾಗಿ ಪೊಲೀಸರು ತಿಳಿಗೊಳಿಸಿದರು.
112 ಪೊಲೀಸರ ವಿರುದ್ಧ ಗ್ರಾಮಸ್ಥರ ಆಕ್ರೋಶ:ಯಾವುದಾದರೂ ತುರ್ತು ಸಂದರ್ಭದಲ್ಲಿ 112 ಪೊಲೀಸರಿಗೆ ಕರೆಮಾಡಿ ಬನ್ನಿ ಎಂದರೆ ಬಹಳ ಸಮಯವಾದರೂ ಬರುವುದಿಲ್ಲ. ಆದರೆ ಇಲ್ಲಿ ಘಟನೆ ನಡೆಯುವ ಮುಂಚೆಯೇ ಆಗಮಿಸಿದ್ದೀರಾ, ಅಕ್ರಮವಾಗಿ ಮಣ್ಣು ಹೊಡೆಯುವವರು ಕರೆ ಮಾಡಿದ್ದಕ್ಕೆ ತಕ್ಷಣ ಆಗಮಿಸಿದ್ದೀರಾ, ಅವರ ಪರವಾಗಿ ಸಹಕಾರ ನೀಡಿದರೆ ನಾವು ಮೇಲಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದು ಘಟನಾ ಸ್ಥಳದಲ್ಲಿದ್ದ 112 ಪೊಲೀಸರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿಎಂ ಭಾವಮೈದಾ ಎಂದು ಪೊಲೀಸರಿಗೆ ಅವಾಜ್:ಇನ್ನೂ ಘಟನೆಯನ್ನು ತಿಳಿಗೊಳಿಸಲು ಎಎಸ್ಐ ವೆಂಕಟೇಶ್ ಅವರಿಗೆ ಕೃಷ್ಣ ಎಂಬ ವ್ಯಕ್ತಿ ನಾನು ಯಾರು ಗೊತ್ತಾ? ಡಿಸಿಎಂ ಭಾವಮೈದಾ ಎಂದು ಅವಾಜ್ ಹಾಕಿದ್ದಲ್ಲದೆ, ಎಸ್ಪಿಗೆ ಕರೆಮಾಡುತ್ತೇನೆ ಎಂದು ಹೇಳಿ ಕರೆ ಮಾಡಿದ್ದಾರೆ. ಅವರು ಆ ಕಡೆಯಿಂದ ನಮ್ಮ ಪೊಲೀಸರು ಕಾನೂನಿನ ಪ್ರಕಾರ ಕ್ರಮ ವಹಿಸುತ್ತಾರೆ ಅವರಿಗೆ ಸಹಕಾರ ನೀಡಿ ಎಂದು ಕರೆ ಸ್ಥಗಿತಗೊಳಿಸಿದರು.
ಲಾರಿವಶಕ್ಕೆ ಪಡೆದ ಪೊಲೀಸರು:ಕೆಐಎಡಿಬಿ ಹಾಗೂ ಗಣಿಮತ್ತುಭೂ ವಿಜ್ಞಾನ ಇಲಾಖೆಯಿಂದಾಗಲಿ, ಕಂಪನಿಯಿಂದಾಗಲಿ ಮಣ್ಣು ಹೊಡೆಯುವುದಕ್ಕೆ ಪರವಾನಗಿ ಪಡೆಯದೇ ಅಕ್ರಮವಾಗಿ ಮಣ್ಣು ತುಂಬಿಕೊಂಡು ಬರುತ್ತಿದ್ದ ಕೆಎ51ಎಸಿ2070 ಸಂಖ್ಯೆ ಲಾರಿಯನ್ನು ವಶಕ್ಕೆ ಪಡೆದು ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಪೋಟೋ 9 * 10 :ಸೋಂಪುರ ಹೋಬಳಿಯ ಅವ್ವೇರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗೆ ಮಣ್ಣು ಹೊಡೆಯುವ ವಿಚಾರದ ವಿವಾದದಲ್ಲಿ ಪೊಲೀಸರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು.