ಸಾರಾಂಶ
ಶನಿವಾರಸಂತೆ ಮೂಲದ ಆಟೋ ಮಾಲೀಕ ರಾಜಶೇಖರ್ ಸಾಮಾಜಿಕ ಜಾಲತಾಣದ ಮೂಲಕ ಸೋಲಾರ್ ಚಾಲಿತ ಆಟೋ ಬಗ್ಗೆ ಮಾಹಿತಿ ತಿಳಿದು ಈ ಆಟೋ ತರಿಸಿದ್ದಾರೆ.ಪೂನಾದ ಆಟೋ ತಯಾರಿಕಾ ಘಟಕದಿಂದ ಬಿಡಿ ಬಾಗಗಳನ್ನು ಖರೀದಿಸಿ ಕರ್ನಾಟಕ ರಾಜ್ಯದ ರಾಯಚೂರಿನ ಉಪ ಘಟಕದಲ್ಲಿ ಬಿಡಿ ಭಾಗಗಳನ್ನು ಜೋಡಿಸಿ ಆಟೋ ತಯಾರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಶನಿವಾರಸಂತೆ
ಇಲ್ಲಿನ ಶ್ರೀ ವಿಘ್ನೇಶ್ವರ ಆಟೋ ನಿಲ್ದಾಣದಲ್ಲಿ ಮಂಗಳವಾರ ಮಧ್ಯಾಹ್ನ ಕೊಡಗಿನ ಪ್ರಪ್ರಥಮ ಸೋಲಾರ್ ಚಾಲತ ಆಟೋರಿಕ್ಷಾ ಆಗಮಿಸಿದ್ದು ಜನಾಕರ್ಷಣೆಗೆ ಕಾರಣವಾಯಿತು.ಶನಿವಾರಸಂತೆ ಮೂಲದ ಆಟೋ ಮಾಲೀಕ ರಾಜಶೇಖರ್ ಸಾಮಾಜಿಕ ಜಾಲತಾಣದ ಮೂಲಕ ಸೋಲಾರ್ ಚಾಲಿತ ಆಟೋ ಬಗ್ಗೆ ಮಾಹಿತಿ ತಿಳಿದು ಈ ಆಟೋ ತರಿಸಿದ್ದಾರೆ.ಪೂನಾದ ಆಟೋ ತಯಾರಿಕಾ ಘಟಕದಿಂದ ಬಿಡಿ ಬಾಗಗಳನ್ನು ಖರೀದಿಸಿ ಕರ್ನಾಟಕ ರಾಜ್ಯದ ರಾಯಚೂರಿನ ಉಪ ಘಟಕದಲ್ಲಿ ಬಿಡಿ ಭಾಗಗಳನ್ನು ಜೋಡಿಸಿ ಆಟೋ ತಯಾರಿಸಲಾಗಿದೆ. ನಂತರ ಶನಿವಾರಸಂತೆಗೆ ಮಂಗಳವಾರ ಆಟೋ ಮಾಲೀಕರಿಗೆ ಕಂಪನಿ ಕಡೆಯಿಂದ ಹಸ್ತಾಂತರಿಸಲಾಯಿತು. 4 ಲಕ್ಷ ರು. ಮೌಲ್ಯದ ಆಟೋ ಇದಾಗಿದ್ದು ಪೂರ್ಣ ಪ್ರಮಾಣದಲ್ಲಿ ಸೌರಶಕ್ತಿಯಿಂದ ಬ್ಯಾಟರಿ ಚಾರ್ಜ್ ಆಗಿದೆ. ಒಂದು ಚಾರ್ಜ್ ಬಳಿಕ 70 ಕಿಲೋಮೀಟರ್ ವರೆಗೆ ಆಟೋ ಕ್ರಮಿಸಲಿದೆ. ಪರ್ಯಾಯವಾಗಿ ವಿದ್ಯುತ್‌ನಿಂದ ಇನೊಂದು ಬ್ಯಾಟರಿ ಚಾರ್ಜ್ ವ್ಯವಸ್ಥೆಯೂ ಇದರಲ್ಲಿ ಇದೆ.
ಈ ವಿದ್ಯುತ್ ಚಾರ್ಜ್ ಬ್ಯಾಟರಿ ಸಹಾಯದಿಂದ 130 ಕಿಲೋಮೀಟರ್ ವರೆಗೆ ಆಟೋ ಚಲಾಯಿಸಬಹುದು. ಹೀಗೆ ಎರಡೂ ಬ್ಯಾಟರಿಗಳ ಸಹಾಯದಂದ ಒಟ್ಟು 200 ಕೀ.ಮೀ. ತನಕ ಒಂದು ಚಾರ್ಜ್‌ಗೆ ಮೈಲೇಜ್ ಸಿಗುತ್ತದೆ.ಈ ಆಟೋ ಒಟ್ಟು 350 ಕೆ.ಜಿ. ತೂಕ ಹೊಂದಿದೆ. 4 ಪ್ರಯಾಣಿಕರನ್ನು ಮತ್ತು ಚಾಲಕ ಸೇರಿ ಒಟ್ಟು 5 ಜನರ ಕೊಂಡೊಯ್ಯುವ ಸಾಮರ್ಥ್ಯ ಇದೆ.
ಶನಿವಾರಸಂತೆಯ ಸುತ್ತಮುತ್ತಲಿನ ಜನತೆ ಆಟೋ ನೋಡಲು ಮಂಗಳವಾರ ವಿಘ್ನೇಶ್ವರ ಆಟೋ ನಿಲ್ದಾಣದಲ್ಲಿ ಮಂಗಳವಾರ ಮುಗಿಬಿದ್ದಿದ್ದರು. ಸುಮಾರು ಮಂದಿ ಆಟೋದಲ್ಲಿ ಪ್ರಯಾಣ ಮಾಡಿ ಸಂತೋಷಪಟ್ಟರು.