ರಜೆಯಲ್ಲಿದ್ದ ಯೋಧ ವೇಣುಗೋಪಾಲ್ ಮರಳಿ ಗಡಿಯತ್ತ

| Published : May 14 2025, 12:03 AM IST

ಸಾರಾಂಶ

ರಜೆ ಪಡೆದು ಊರಿಗೆ ಬಂದಿದ್ದ ಬಿಎಸ್ಎಫ್ ಯೋಧ ವೇಣುಗೋಪಾಲ್ ಕರ್ತವ್ಯ ಕರೆಯನ್ನು ಆಲಿಸಿ ರಜೆಯನ್ನು ಮೊಟಕುಗೊಳಿಸಿ ಮರಳಿ ಗಡಿ ಭಾಗಕ್ಕೆ ಮರಳುವ ಸಮಯದಲ್ಲಿ ಗುಬ್ಬಿ ನಾಗರಿಕರು ಆತ್ಮೀಯ ಬೀಳ್ಕೊಡುಗೆ ನೀಡಿ ಯುದ್ಧ ಗೆದ್ದು ಬನ್ನಿ ಎಂದು ಆಶಿಸಿದರು.

ಕನ್ನಡಪ್ರಭ ವಾರ್ತೆ ಗುಬ್ಬಿ

ರಜೆ ಪಡೆದು ಊರಿಗೆ ಬಂದಿದ್ದ ಬಿಎಸ್ಎಫ್ ಯೋಧ ವೇಣುಗೋಪಾಲ್ ಕರ್ತವ್ಯ ಕರೆಯನ್ನು ಆಲಿಸಿ ರಜೆಯನ್ನು ಮೊಟಕುಗೊಳಿಸಿ ಮರಳಿ ಗಡಿ ಭಾಗಕ್ಕೆ ಮರಳುವ ಸಮಯದಲ್ಲಿ ಗುಬ್ಬಿ ನಾಗರಿಕರು ಆತ್ಮೀಯ ಬೀಳ್ಕೊಡುಗೆ ನೀಡಿ ಯುದ್ಧ ಗೆದ್ದು ಬನ್ನಿ ಎಂದು ಆಶಿಸಿದರು.ಗುಬ್ಬಿ ಪಟ್ಟಣದ 19 ನೇ ವಾರ್ಡ್ ಬಿಲ್ಲೇಪಾಳ್ಯ ಬಡಾವಣೆಯ ನಿವಾಸಿ ಯೋಧ ವೇಣುಗೋಪಾಲ್, ಪತ್ನಿ ಇಬ್ಬರು ಹೆಣ್ಣು ಮಕ್ಕಳ ಸುಂದರ ಸಂಸಾರ ಹೊಂದಿದ್ದಾರೆ. ದೇಶದ ಗಡಿ ಕಾಯುವ ಕಾಯಕ ನಿಷ್ಠೆಯಿಂದ ನಿರ್ವಹಿಸಿ ವರ್ಷಕೊಮ್ಮೆ ರಜೆ ಹಾಕಿ ತನ್ನ ಕುಟುಂಬದೊಂದಿಗೆ ಕಾಲ ಕಳೆಯುವ ಜೊತೆಗೆ ಮಕ್ಕಳ ಶಿಕ್ಷಣ ಪ್ರಗತಿಯ ಶಾಲಾ ಕಾಲೇಜು ದಾಖಲಾತಿ ನಡೆಸಲು ಬಂದಿದ್ದ ಸಮದಲ್ಲೇ ಕರ್ತವ್ಯದ ಕರೆ ಬಂದಿದೆ. ತಕ್ಷಣವೇ ಕಾರ್ಯ ಪ್ರವೃತ್ತರಾದ ವೇಣುಗೋಪಾಲ್ ಕರ್ತವ್ಯ ನಿಷ್ಠೆಯಿಂದ ಮಾಡಬೇಕಿದೆ ಎಂದು ಹೇಳಿ ಬೆಂಗಳೂರಿನ ವಿಮಾನ ನಿಲ್ದಾಣದತ್ತ ಸಾಗಿದರು.ವಿಷಯ ತಿಳಿದ ತಕ್ಷಣ ಯೋಧರ ಮನೆಗೆ ಧಾವಿಸಿದ ಗುಬ್ಬಿ ನಾಗರಿಕರ ತಂಡವೊಂದು ವೇಣು ಗೋಪಾಲ್ ಅವರಿಗೆ ಸನ್ಮಾನಿಸಿ ಆತ್ಮೀಯ ಬೀಳ್ಕೊಡುಗೆ ನೀಡಿದರು. ಶತ್ರು ಪಾಕಿಸ್ತಾನದ ವಿರುದ್ಧ ಸೆಣಸಾಡಿ ವೀರ ಗೆಲುವು ನಮ್ಮದಾಗಿಸಿ ಕ್ಷೇಮವಾಗಿ ಮರಳಿ ಬರುವಂತೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಸಿ.ಆರ್.ಶಂಕರ್ ಕುಮಾರ್, ಕುಮಾರ್, ರಮೇಶಗೌಡ, ಲೋಕೇಶ್, ಸುನಂದ್ ಕುಮಾರ್, ಚಿಕ್ಕೇಗೌಡ, ಬ್ಯಾಟರಾಯಪ್ಪ, ವಿನಯ್, ಮಧು, ಶ್ರೀರಾಮು, ಸತೀಶ್, ಧೀರಜ್ ಇತರರು ಇದ್ದರು.