ಸಾರಾಂಶ
ರಾಮನಗರ: ಆಪರೇಷನ್ ಸಿಂದೂರಕ್ಕೆ ಶಕ್ತಿ ತುಂಬುತ್ತಿರುವುದು ಯುವ ಯೋಧರೇ ಹೊರತು ಯುದ್ಧದ ತೀರ್ಮಾನ ಮಾಡುವವರಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.
ನಗರದಲ್ಲಿ ಆಂಜನೇಯಸ್ವಾಮಿ ಆರ್ಚ್ ಮುಂಭಾಗದ ಸ್ಥಳದಲ್ಲಿ ಆಯೋಜಿಸಿದ್ದ ರಾಮನಗರ ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ - ಯುವ ಪರ್ವ ಸಮಾರಂಭದಲ್ಲಿ ಮಾತನಾಡಿದ ಅವರು, ಇದು ಮಲಗುವ ಕಾಲವಲ್ಲ. ಬದಲಿಗೆ ಎಚ್ಚರಿಕೆಯಿಂದ ಇರಬೇಕಾದ ಸಮಯ. ಭಾರತೀಯ ಸೇನೆ ಶತ್ರು ರಾಷ್ಟ್ರದ ವಿರುದ್ಧ ಹೋರಾಡುತ್ತಿದ್ದು, ಅವರಿಗೆ ಶಕ್ತಿ ತುಂಬಬೇಕಿದೆ ಎಂದರು.ಯುವ ಯೋಧರು ಈ ದೇಶವನ್ನು ಕಾಯುತ್ತಿದ್ದಾರೆ. ನಮ್ಮ ದೇಶದ ಯುವಕರು ಇಡೀ ವಿಶ್ವಕ್ಕೆ ಕೊಡುಗೆ ನೀಡಿದ್ದಾರೆ. ಯುವ ಶಕ್ತಿಯನ್ನು ಕಡೆಗಣಿಸಿದವರು ಯಾರು ಉದ್ದಾರವಾಗಿಲ್ಲ. ಅದಕ್ಕಾಗಿಯೇ ಕಾಂಗ್ರೆಸ್ ಪಕ್ಷ ಯುವಕರಿಗೆ ಶಕ್ತಿ ತುಂಬುತ್ತಿದೆ. ಆ ಮೂಲಕ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಯುವ ಕಾಂಗ್ರೆಸ್‌ನಲ್ಲಿ ಅಧಿಕಾರ ವಹಿಸಿಕೊಳ್ಳುತ್ತಿರುವ ಸಾಮಾಜಿಕ ಕಳಕಳಿಯಿಂದ ಸೇವೆ ಮಾಡಬೇಕು. ಅಧಿಕಾರ ಸಿಕ್ಕಿದೆ ಎಂದು ಸುಮ್ಮನಾಗದೆ ನಾಯಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದು ಕಿವಿಮಾತು ಹೇಳಿದರು.
ಯುವ ಕಾಂಗ್ರೆಸ್ ಮೂಲಕ ಕಾಂಗ್ರೆಸ್ ಪಕ್ಷ ಯುವಕರಿಗೆ ಶಕ್ತಿ ತುಂಬುವ ಕೆಲಸ ಮಾಡಿಕೊಂಡು ಬರುತ್ತಿದೆ. ಸ್ವಾತಂತ್ರ್ಯ ಪೂರ್ವದಲ್ಲಿಯೇ ಯುವ ಕಾಂಗ್ರೆಸ್ ಸ್ಥಾಪನೆ ಮಾಡಲಾಗಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸ್ ಯುವ ಕಾಂಗ್ರೆಸ್ ಅನ್ನು 1926ರಲ್ಲಿ ಸ್ಥಾಪಿಸಿದ್ದರು. ಅಂದಿನಿಂದ ಯುವ ಕಾಂಗ್ರೆಸ್ ಹೋರಾಟ ಮಾಡಿಕೊಂಡು ಬಂದಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಕಾಲದಲ್ಲಿ ಯುವ ಕಾಂಗ್ರೆಸ್ ಶಕ್ತಿ ತುಂಬವ ಕೆಲಸ ಆಗಿತ್ತು. ಬಳಿಕ ರಾಜೀವ್ ಗಾಂಧಿ ಯುವಕರಿಗೆ ಶಕ್ತಿ ನೀಡುವ ಸಲುವಾಗಿಯೇ ಮತದಾನ ಮಾಡಲು ಇದ್ದ 21 ವರ್ಷವನ್ನು 18ವರ್ಷಕ್ಕೆ ಇಳಿಸಿದರು ಎಂದು ಡಿ.ಕೆ.ಸುರೇಶ್ ಸ್ಮರಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಯುವ ಕಾಂಗ್ರೆಸ್ ಮೂಲಕ ಬಂದವರು ರಾಜಕಾರಣದಲ್ಲಿ ದೀರ್ಘ ಕಾಲ ಉಳಿದುಕೊಳ್ಳುತ್ತಾರೆ. ಇಲ್ಲದವರು ಬಹಳ ದಿನ ಇರುವುದಿಲ್ಲ. ಯುವ ಕಾಂಗ್ರೆಸ್ ಪದಾಧಿಕಾರಿಗಳು ದೇಶದ ಹಾಗೂ ಪಕ್ಷದ ಅದರಲ್ಲೂ ಸ್ವಾತಂತ್ರ್ಯ ಪೂರ್ವದ ಇತಿಹಾಸ,ವಿಪಕ್ಷಗಳು ಅಧಿಕಾರದಲ್ಲಿದ್ದಾಗ ಏನು ಮಾಡಿದ್ದರು ಎಂಬುದನ್ನು ತಿಳಿದುಕೊಳ್ಳಬೇಕು. ಇದು ಯುವಕರಿಗೆ ವೇದಿಕೆಯಲ್ಲಿ ಭಾಷಣ ಮಾಡುವ ವೇಳೆ ಉಪಯೋಗಕ್ಕೆ ಬರಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಎಸ್.ರವಿ ಮಾತನಾಡಿ, ರಾಹುಲ್ ಗಾಂಧಿ ಆಶಯದಂತೆ ಪ್ರಜಾಪ್ರಭುತ್ವದಡಿ ಯುವ ಕಾಂಗ್ರೆಸ್ ಸಮಿತಿಗೆ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಪಕ್ಷವನ್ನು ಜಾತ್ಯತೀತದ ತತ್ವದಡಿ ಬಲಿಷ್ಠವಾಗಿ ಸಂಘಟಿಸುವ ಜವಾಬ್ದಾರಿ ಯುವ ಕಾಂಗ್ರೆಸ್ಸಿಗರ ಮೇಲಿದೆ. ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದಕರಿಗೆ ರಕ್ಷಣೆ ನೀಡಿ ಭಾರತಕ್ಕೆ ಕಿರುಕುಳ ನೀಡುತ್ತಾ ಬಂದಿತ್ತು. ಪಹಲ್ಗಾಮ್ ನಲ್ಲಿ ಅಮಾಯಕರ ಹತ್ಯೆ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ರಾಷ್ಟ್ರದ ವಿಚಾರ ಬಂದಾಗ ಕಾಂಗ್ರೆಸ್ ಎಲ್ಲ ಪಕ್ಷಗಳಿಗಿಂತ ಮುಂದಾಗಿ ರಾಷ್ಟ್ರದ ಪರವಾಗಿ ನಿಲ್ಲುತ್ತದೆ. ಅದೇ ರೀತಿ ಕಾಂಗ್ರೆಸ್ಸಿಗರು ರಾಷ್ಟ್ರಕ್ಕಾಗಿ ರಾಜಕಾರಣ ಮಾಡದೆ ಪ್ರಾಣ ತ್ಯಾಗ ಮಾಡಲು, ಸೇವೆ ಸಲ್ಲಿಸಲು ಸಿದ್ಧರಾಗಿದ್ದೇವೆ ಎಂದರು.11ಕೆಆರ್ ಎಂಎನ್ 2.ಜೆಪಿಜಿ
ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿದ ಭಾರತೀಯ ಸೈನಿಕರ ಬೆಂಬಲವಾಗಿ ಮಾಜಿ ಸಂಸದ ಡಿ.ಕೆ.ಸುರೇಶ್ ನೇತೃತ್ವದಲ್ಲಿ ಬೈಕ್ ರ್ಯಾಲಿ ನಡೆಯಿತು. ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.