ಮಲೇಬೆನ್ನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯ ರಕ್ಷಾ ಸಮಿತಿ ಸಭೆಯು ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಷಣ್ಮುಖಪ್ಪ ಉಪಸ್ಥಿತಿಯಲ್ಲಿ ಜರುಗಿತು.
- ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ರೈತ ಮುಖಂಡ ಹಾಳೂರು ನಾಗರಾಜ್ ಒತ್ತಾಯ
- - -ಕನ್ನಡಪ್ರಭ ವಾರ್ತೆ ಮಲೇಬೆನ್ನೂರು
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಆರೋಗ್ಯ ರಕ್ಷಾ ಸಮಿತಿ ಸಭೆಯು ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ ಷಣ್ಮುಖಪ್ಪ ಉಪಸ್ಥಿತಿಯಲ್ಲಿ ಜರುಗಿತು.ಸಭೆ ಆರಂಭದಲ್ಲಿ ರೈತ ಮುಖಂಡ ಹಾಳೂರು ನಾಗರಾಜ್ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ಒಂಭತ್ತು ನರ್ಸ್‌ಗಳಿದ್ದು, ರೋಗಿಗಳಿಗೆ ಸೂಕ್ತ ಉಪಚಾರ ದೊರಕುತ್ತಿಲ್ಲ. ವೈದ್ಯರ ನಿರ್ಲಕ್ಷ್ಯ ಎದ್ದುಕಾಣುತ್ತಿದೆ. ಸಿಬ್ಬಂದಿ ಬೆರಳಚ್ಚು ಹಾಜರಾತಿ ಪರಿಶೀಲಿಸಿ, ಸಿಬ್ಬಂದಿಗೆ ಸುಮ್ಮನೆ ವೇತನ ಕೊಟ್ಟಂತಾಗಿದೆ. ಔಷಧಿ ದಾಸ್ತಾನು ತನಿಖೆ ಮಾಡಿ ಎಂದು ಸಮಸ್ಯೆಗಳನ್ನು ಸಭೆ ಗಮನಕ್ಕೆ ತಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಷಣ್ಮುಖಪ್ಪ ಮಾತನಾಡಿ, ಜಿಲ್ಲಾಧಿಕಾರಿ ಅಧೀನದ ಸಮಿತಿ ವೈದ್ಯರನ್ನು ನೇಮಕ ಮಾಡುವರು. ವಿವಿಧ ರೋಗಗಳಿಗೆ ಅಗತ್ಯ ಔಷಧಿ ನೀಡಲಾಗುತ್ತದೆ. ಪ್ರಾಥಮಿಕ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಮತ್ತು ತಾಲೂಕು ಆಸ್ಪತ್ರೆಗಳಿಗೆ ರೋಗಿಗಳ ಸಂಖ್ಯೆ ಆಧಾರದಲ್ಲಿ ಔಷಧಿ ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನ ರೋಗಿಗಳಿಗೆ ಬೇಸಿಕ್ ಲೈನ್ ಔಷಧಿ ನೀಡಲಾಗುತ್ತಿದೆ. ಜಿಲ್ಲಾ ಆಸ್ಪತ್ರೆಗೆ ಶಿಫಾರಸು ಮಾಡುವ ರೋಗಿಗಳಿಗೆ ತಾತ್ಸಾರ ಮಾಡದೇ ಚಿಕಿತ್ಸೆ ಮಾಡುವಲ್ಲಿ ಗಮನಹರಿಸಲಾಗುತ್ತದೆ ಎಂದರು.ಶಾಸಕ ಬಿ.ಪಿ.ಹರೀಶ್ ಮಾತನಾಡಿ, ರಾಜ್ಯದಲ್ಲಿ ಲಕ್ಷಾಂತರ ಹುದ್ದೆಗಳು ಖಾಲಿಯಿವೆ. ಕಾಂಗ್ರೆಸ್ ಸರ್ಕಾರದ ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಹಾಗೂ ಒಳಮೀಸಲಾತಿ ಅಂತಿಮಗೊಳ್ಳುವವರೆಗೂ ವೈದ್ಯರು ಮತ್ತು ಸಿಬ್ಬಂದಿ ನೇಮಕ ಆಗುತ್ತಿಲ್ಲ. ಅಗತ್ಯ ವೈದ್ಯ-ಸಿಬ್ಬಂದಿ ಹುದ್ದೆಗಳ ನೇಮಕವಾದಲ್ಲಿ ಸರ್ಕಾರದಲ್ಲಿ ವೇತನ ನೀಡಲು ಹಣದ ತೊಂದರೆಯಿದೆ. ಯಾವುದೇ ಸಮಸ್ಯೆ ಬಾರದ ರೀತಿಯಲ್ಲಿ ತಾಲೂಕುಮಟ್ಟದ ಅಧಿಕಾರಿಗಳು ಸಂಜೆವರೆಗೂ ಈ ಆಸ್ಪತ್ರೆಯ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿ ಪರಿಹಾರ ಕಂಡುಹಿಡಿಯಬೇಕು ಎಂದು ಸೂಚಿಸಿದರು.
ಆಡಳಿತ ವೈದ್ಯಾಧಿಕಾರಿ ಡಾ. ಪ್ರಶಾಂತ್ ಮಾತನಾಡಿ, ಆಸ್ಪತ್ರೆಯ ನರ್ಸ್‌ಗಳು, ಡಿ ಗ್ರೂಪ್, ಸಿಬ್ಬಂದಿಯ ಕರ್ತವ್ಯಗಳ ಮಾಹಿತಿ ಹಂಚಿಕೊಂಡರು. ತಹಸೀಲ್ದಾರ್ ಸಂತೋಷ್‌ಕುಮಾರ್, ತಾ.ಪಂ ಇಒ ಬಸವರಾಜ್, ತಾಲೂಕು ಆರೋಗ್ಯಾಧಿಕಾರಿ ಡಾ ಖಾದರ್, ಪುರಸಭಾ ಅಧ್ಯಕ್ಷೆ ಅಕ್ಕಮ್ಮ, ಉಪ ತಹಸೀಲ್ದಾರ್ ರವಿ, ಎಸಿಪಿಡಿಒ ಶೈಲಜಾ, ಸುರಕ್ಷಣಾಧಿಕಾರಿ ಕಿರಣ್, ಉಮ್ಮಣ್ಣ, ನಾಗರಾಜ್, ಸಹಾಯಕಿ ಷಬೀನಾ, ಯುವಕ ಶ್ರೀನಿವಾಸ್, ಸುನೀಲ್, ನಿರಂಜನ್, ರೈತ ಮುಖಂಡರಾದ ಕೊಂಡಜ್ಜಿ ಪರಮೇಶ್ವರಪ್ಪ, ಭಾನುವಳ್ಳಿ ಪರಮೆಶ್ವರಪ್ಪ, ರಂಗನಗೌಡ, ತಿಪ್ಪೇಸ್ವಾಮಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಇದ್ದರು.- - -
-ಚಿತ್ರ೧: ಸಭೆಯಲ್ಲಿ ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣಾಧಿಕಾರಿ ಡಾ.ಷಣ್ಮುಖಪ್ಪ ಮಾತನಾಡಿದರು.