ಇ-ಸ್ವತ್ತು ಪಡೆಯಲಿರುವ ಇರುವ ಸಮಸ್ಯೆಗಳನ್ನು ಪರಿಹರಿಸಿ

| Published : Oct 30 2024, 12:37 AM IST / Updated: Oct 30 2024, 12:38 AM IST

ಸಾರಾಂಶ

ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿಪಡೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಹಾನಗರ ಪಾಲಿಕೆಯಲ್ಲಿ ಇ-ಸ್ವತ್ತು ಮಾಡಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡು ಕೇಸರಿಪಡೆ ಕಾರ್ಯಕರ್ತರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಸರ್ಕಾರವು ಖಾಸಗಿ ಸ್ವತ್ತುಗಳ ಅಕಮ ಪರಭಾರೆ ಖಾತೆಯಾಗುವುದನ್ನು ತಡೆಗಟ್ಟಲು ಇ-ಸ್ವತ್ತನ್ನು 2015 ರಿಂದಲೇ ಜಾರಿಗೆ ತಂದಿದೆ. ಇದಕ್ಕಾಗಿ ಮಹಾನಗರ ಪಾಲಿಕೆ ಕೂಡ ಜಾಗೃತಿ ಕಾರ್ಯಕಮಕ್ಕಾಗಿ ಸುಮಾರು 15ಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿತ್ತು. ಆದರೂ, ಕೂಡ ಪಾಲಿಕೆಯಿಂದ ಇ-ಸ್ವತ್ತು ಪಡೆಯಲಾಗುತ್ತಿಲ್ಲ ಎಂದು ದೂರಿದರು. ಅಪ್ಲೋಡ್ ಆಗಲು ತಾಂತ್ರಿಕ ದೋಷವಿದೆ. ಸರ್ವರ್ ಕೆಲಸ ಮಾಡುತ್ತಿಲ್ಲ ಎಂಬ ಸಬೂಬನ್ನು ಅಧಿಕಾರಿಗಳು ಹೇಳುತ್ತಿದ್ದಾರೆ. ಇ-ಸ್ವತ್ತು ಇಲ್ಲದೇ ಯಾವುದೇ ಸ್ವತ್ತುಗಳು ನೋಂದಣಿಯಾಗುತ್ತಿಲ್ಲ. ಇದರಿಂದಾಗಿ ಮದುವೆ ಮಾಡುವವರು, ವಿದೇಶಕ್ಕೆ ಹೋಗುವವರು, ಆಸ್ಪತ್ರೆ ಖರ್ಚು ಭರಿಸಲು ಸಾರ್ವಜನಿಕರಿಗೆ ಕಷ್ಟವಾಗುತ್ತಿದೆ. ಆದ್ದರಿಂದ ಇ-ಸ್ವತ್ತು ನೀಡಲಿಕ್ಕಾಗಿಯೇ ಒಬ್ಬ ಅಧಿಕಾರಿಯನ್ನು ನೇಮಿಸಬೇಕು. ಇ-ಸ್ವತ್ತು ಮಾಡಿಸಲು ಕೆಲವು ನೌಕರರು ಹಣದ ಬೇಡಿಕೆ ಕೂಡ ಇಡುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆಯೂ ಕೂಡ ಅಗತ್ಯಕಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕೇಸರಿಪಡೆಯ ಅಧ್ಯಕ್ಷ ಎಸ್.ಜೆ. ರಾಜು, ಪಮುಖರಾದ ರಾಕೇಶ್ ಕುಮಾರ್, ಮಂಜುನಾಥ್, ಶೀನಿವಾಸ್, ಚಂದನ್, ಅಪ್ಪು, ಯಶವಂತ್ ಸೇರಿದಂತೆ ಹಲವರಿದ್ದರು.