ಸಾರ್ವಜನಿಕರ ಸಮಸ್ಯೆ ಪರಿಹರಿಸಿ

| Published : Aug 08 2024, 01:32 AM IST

ಸಾರಾಂಶ

ರೈತರು, ಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಜನಪ್ರತಿನಿಧಿನಗಳ ಮನೆ ಬಾಗಿಲು ಮತ್ತು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ ಎಂದು ಎಂಎಲ್ಸಿ ಆರ್‌.ರಾಜೇಂದ್ರ ಕರೆ ನೀಡಿದರು.

ಮಧುಗಿರಿ: ರೈತರು, ಸಾಮಾನ್ಯರು ತಮ್ಮ ಸಮಸ್ಯೆಗಳ ಬಗ್ಗೆ ಅರ್ಜಿ ಹಿಡಿದು ಜನಪ್ರತಿನಿಧಿನಗಳ ಮನೆ ಬಾಗಿಲು ಮತ್ತು ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು ಜನಸ್ಪಂದನ ಕಾರ್ಯಕ್ರಮ ಆಯೋಜಿಸಿದೆ ಎಂದು ಎಂಎಲ್ಸಿ ಆರ್‌.ರಾಜೇಂದ್ರ ಕರೆ ನೀಡಿದರು.

ತಾಲೂಕಿನ ನೇರಳೆಕೆರೆ ಶ್ರೀರಂಗನಾಥ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಜನಸ್ಪಂದನ, ಖಾಥಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪೌತಿ ಖಾತೆ ಬದಲಾಯಿಸುವ ಮೂಲಕ ಸಮಸ್ಯೆಗಳಿಂದ ಮುಕ್ತರಾಗಬೇಕು. 4 ಸಾವಿರಕ್ಕೂ ಅಧಿಕ ಮನೆಗಳನ್ನು ತಂದಿದ್ದು, ಸೂರಿಲ್ಲದವರಿಗೆ ಹಂತ ಹಂತವಾಗಿ ವಿತರಿಸಲಾಗುವುದು. ಬಡವರನ್ನು ಗುರುತಿಸಿ ಮನೆ ಹಂಚಬೇಕು ಎಂದರು.

ಎಸಿ ಗೋಟೂರು ಶಿವಪ್ಪ, ಸಿಬ್ಗತ್‌ವುಲ್ಲಾ, ಲಕ್ಷ್ಮಣ್‌, ಕೆ.ಎನ್‌.ಹನುಮಂತರಾಯಪ್ಪ, ರಂಗನಾಥ್‌, ದಯಾನಂದ್‌, ಜಿ.ಜೆ.ರಾಜಣ್ಣ, ಎಂ.ಎಸ್‌.ಮಲ್ಲಿಕಾರ್ಜುನಯ್ಯ, ಸಿದ್ದಾಪುರ ರಂಗಶ್ಯಾಮಣ್ಣ, ಡಿ.ಎಚ್‌.ನಾಗರಾಜು, ರಮೇಶ್‌ ಕನಕದಾಸ್‌, ಕೆಂಚಣ್ಣ, ನೇರಳೇಕೆರೆ ರಂಗನಾಥ್‌, ಗೋಪಾಲಯ್ಯ ಇದ್ದರು. ಅರ್ಹ ಫಲಾನುಭವಿಗಳಿಗೆ ಸವಲತ್ತುಗಳನ್ನು ಹಾಗೂ 56 ಮಂದಿಗೆ ಪಿಂಚಣಿ ಆದೇಶ ಪತ್ರ ವಿತರಿಸಾಲಯಿತು.