ಸಾರಾಂಶ
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹರಿಸಿ ಎಲ್ಲ ವರ್ಷದ ಅಂಕಪಟ್ಟಿ ನೀಡಬೇಕು ಎಂದು ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಶಿವಾರೆಡ್ಡಿ ಆಗ್ರಹಿಸಿದರು.
ಹೊಸಪೇಟೆ: ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆ ಪರಿಹರಿಸಿ ಎಲ್ಲ ವರ್ಷದ ಅಂಕಪಟ್ಟಿ ನೀಡಬೇಕು ಎಂದು ಎಸ್ಎಫ್ಐ ರಾಜ್ಯ ಸಮಿತಿ ಸದಸ್ಯ ಶಿವಾರೆಡ್ಡಿ ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ದೋಷಪೂರಿತ ಫಲಿತಾಂಶ ಸರಿಪಡಿಸಿ, ಸರಿಯಾದ ಫಲಿತಾಂಶ ಪ್ರಕಟಿಸಬೇಕು. ವಿದ್ಯಾರ್ಥಿಗಳ ಅಂಕಪಟ್ಟಿ ನೀಡಬೇಕು. ವಿವಿ ಮೊದಲಿನಿಂದಲು ಅನೇಕ ಸಮಸ್ಯೆಗಳ ತಂದಿದೆ. ಕಳೆದ ವರ್ಷದಂತೆ ಈ ವರ್ಷವು ಕೆಲವು ವಿದ್ಯಾರ್ಥಿಗಳ ಫಲಿತಾಂಶ ದೋಷಪೂರಿತವಾಗಿದೆ. ಕೆಲವು ವಿದ್ಯಾರ್ಥಿಗಳ ಫಲಿತಾಂಶ ಮೊದಲು ಉತ್ತೀರ್ಣ ಮತ್ತು ನಂತರ ಅನುತ್ತೀರ್ಣ ಎಂದು ಬಂದಿದೆ ಎಂದು ದೂರಿದರು.ಕಳೆದ ಶೈಕ್ಷಣಿಕ ವರ್ಷದಲ್ಲಿ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಿದ್ದ ಸಂದರ್ಭದಲ್ಲಿ ಈ ರೀತಿ ತಪ್ಪಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ಹೊರತಾಗಿಯೂ ಗೊಂದಲಗಳಿವೆ. ಕಳೆದ ವರ್ಷದಲ್ಲಿ ಕೆಲವು ವಿದ್ಯಾರ್ಥಿಗಳ ಅನುತ್ತೀರ್ಣರಾಗಿದ್ದು, ಅವರ ಪರೀಕ್ಷಾ ಶುಲ್ಕವನ್ನು ಡಿಡಿ ಮೂಲಕ ಕಟ್ಟುವಂತೆ ಸೂಚಿಸಲಾಗಿದೆ. ಆದರೆ, ಅವರಲ್ಲಿ ಇದರ ಬಗ್ಗೆ ಗೊಂದಲಗಳಿವೆ, ಸೂಕ್ತ ಮಾರ್ಗದರ್ಶನ ಸಿಗುತ್ತಿಲ್ಲ ಎಂದು ಹೇಳಿದರು.ಕೆಲವು ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಿದ್ದು, ಆ ದಿನವೇ ವಿಶ್ವವಿದ್ಯಾಲಯದ ಪರೀಕ್ಷಾ ದಿನಾಂಕ ನಿಗದಿಪಡಿಸಿರುವುದು ಸರಿಯಲ್ಲ, ಪರೀಕ್ಷೆ ದಿನಾಂಕ ಮುಂದೂಡಬೇಕು. ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷ ತೀರ ತಡವಾಗುವುದಕ್ಕೆ ಕಾರಣ ವಿಶ್ವವಿದ್ಯಾಲಯದ ನಿರ್ಲಕ್ಷ್ಯ. ಈ ನಡೆ ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ಅಮೂಲ್ಯ ಸಮಯ ಹಾಳು ಮಾಡುತ್ತಿದೆ. ಕೂಡಲೇ ವಿದ್ಯಾರ್ಥಿ ನಾಯಕರ ಸಭೆ ಕರೆದು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.ಎಸ್ಎಫ್ಐ ಜಿಲ್ಲಾಧ್ಯಕ್ಷ ಜಯಸೂರ್ಯ, ತಾಲೂಕು ಅಧ್ಯಕ್ಷೆ ಲಕ್ಷ್ಮಿ, ಉಪಾಧ್ಯಕ್ಷೆ ಶಾರದಾ, ಸಂಚಾಲನ ಸಮಿತಿ ಸದಸ್ಯ ಪವನ್ ಕುಮಾರ್, ರುದ್ರಮ್ಮ, ಸಹನ ಇದ್ದರು.