ಸಾರಾಂಶ
ರಾಮನಗರ: ಪೌರ ಕಾರ್ಮಿಕರಿಗೆ ಏನೇ ತೊಂದರೆ ಸಮಸ್ಯೆಗಳಿದ್ದರು ಪ್ರತಿದಿನ ಮುಂಜಾನೆ ಪಟ್ಟಣವನ್ನು ಶುಚಿಯಾಗಿಡುತ್ತಾರೆ. ಹಾಗಾಗಿ ಜನಪ್ರತಿನಿಧಿಗಳಾದ ನಾವು ಅವರ ಸಮಸ್ಯೆಗಳನ್ನು ಬಗೆಹರಿಸುವ ಜೊತೆಗೆ ಗೌರವಿಸಬೇಕು ಎಂದು ಮಾಗಡಿ ಶಾಸಕ ಬಾಲಕೃಷ್ಣ ಹೇಳಿದರು.
ಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ರಾಜ್ಯ ಪೌರಸೇವಾ ನೌಕರರ ಸಂಘ, ರಾಜ್ಯ ನಗರ ಪಾಲಿಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಪೌರ ಕಾರ್ಮಿಕರ ಮಹಾ ಸಂಘ ಹಾಗೂ ಪುರಸಭೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಿ ಅವರು ಮಾತನಾಡಿದರು.ಪಟ್ಟಣವನ್ನು ಸ್ವಚ್ಛ ಮಾಡದಿದ್ದರೆ ಜನರು ಆರೋಗ್ಯ ಹಾಳಾಗುತ್ತದೆ. ನಾವೆಲ್ಲರೂ ಒಂದೆ ಎಂಬ ಭಾವನೆಯಿಂದ ಕಾರ್ಮಿಕರನ್ನು ಕಾಣಬೇಕು. ಪುರಸಭಾ ಸದಸ್ಯರು ಅವರ ಜೊತೆಗೆ ಬೆರೆಯಬೇಕು. ಅಂತಹ ಕಾರ್ಯ ಮಾಡುವ ಪೌರ ಕಾರ್ಮಿಕರಿಗೆ ಒಂದು ದಿನ ಮೀಸಲಿಟ್ಟು ಅವರನ್ನು ಸಂತಸ ಪಡಿಸುವ ಕಾರ್ಯಕ್ರಮ ಆಯೋಜನೆ ಮಾಡಿರುವುದು ಶ್ಲಾಘನೀಯ ಎಂದರು.
ಪಟ್ಟಣದಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುತ್ತಿಲ್ಲ. ಇದಕ್ಕೆ ಜನರಲ್ಲಿ ಜಾಗೃತಿ ಮೂಡಿಸುವುದು ಅಗತ್ಯ. ಒಣ ಮತ್ತು ಹಸಿ ಕಸ ಎಲ್ಲಿ ಹಾಕಬೇಕೆಂಬ ಅರಿವನ್ನ ಜನರಲ್ಲಿ ಮೂಡಿಸುತ್ತಿಲ್ಲ, ಈ ಕೆಲಸವನ್ನು ಅಧಿಕಾರಿಗಳು ಮಾಡಬೇಕು ಎಂದು ಬಾಲಕೃಷ್ಣ ಹೇಳಿದರು.ಪುರಸಭಾ ಅಧ್ಯಕ್ಷ ಎಂ.ಎನ್.ಹರಿಪ್ರಸಾದ್ ಮಾತನಾಡಿ, ನಮ್ಮ ಆರೋಗ್ಯದ ದೃಷ್ಟಿಯಿಂದ ಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಹಾಗಾಗಿ ಅವರ ಆರೋಗ್ಯ ನಮಗೆ ಅತಿ ಮುಖ್ಯ. ಈ ನಿಟ್ಟಿನಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಮಿಕರಿಗೆಲ್ಲ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇದರಿಂದ ಅವರ ಆರೋಗ್ಯದ ಬಗ್ಗೆಯೂ ಕಳಾಜಿ ವಹಿಸಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತಿ ಹೊಂದಿದ್ದ ಪೌರ ಕಾರ್ಮಿಕರನ್ನ ಹಾಗೂ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರ ಕಾರ್ಮಿಕರು ಚಲನಚಿತ್ರ ಗೀತೆಗಳಿಗೆ ಹೆಜ್ಜೆ ಹಾಕಿದ್ದರು.ಪುರಸಭಾ ಮುಖ್ಯಾಧಿಕಾರಿ ಕೆ.ಜಿ.ರಮೇಶ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಾಣಕಲ್ ನಟರಾಜ್, ಪುರಸಭಾ ಉಪಾಧ್ಯಕ್ಷರಾದ ಮಂಜುಳಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಲೋಹಿತ್‌ಕುಮಾರ್, ಸದಸ್ಯರಾದ ಸಿ.ಉಮೇಶ್, ಶ್ರೀನಿವಾಸ್, ನವೀನ್‌ಕುಮಾರ್, ಎನ್.ಕುಮಾರ್, ಮನು ಲೋಕೇಶ್, ರಮೇಶ್, ಲಲಿತಾನರಸಿಂಹಯ್ಯ, ಹೊಂಬಯ್ಯ, ನಾಗರಾಜು, ಬಿಂದ್ಯಾ, ಮಹೀಮಾಕುಮಾರ್, ನಾಮಿನಿ ಸದಸ್ಯರಾದ ವೈ.ರಮೇಶ್, ರೇಣುಕಪ್ಪ, ಪೌರ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಚಲಪತಿ, ಆರೋಗ್ಯ ನಿರೀಕ್ಷಕರಾದ ರೂಪಾ, ಪುರಸಭಾ ಇಂಜಿನಿಯರ್ ಶ್ಯಾಮ್, ಶಿಲ್ಪಾ, ನಟರಾಜ್, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.
22ಕೆಆರ್ ಎಂಎನ್ 6.ಜೆಪಿಜಿಬಿಡದಿಯ ಈಗಲ್ ಟನ್ ರೆಸಾರ್ಟ್‌ನಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ ದಿನಾಚರಣೆ ಸಮಾರಂಭದಲ್ಲಿ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.