ಸಾರಾಂಶ
ಪದಬಂಧ ಬಿಡಿಸುವುದರಿಂದ ಮೆದುಳಿನ ಆರೋಗ್ಯ ವೃದ್ಧಿಯ ಜೊತೆಗೆ ಜ್ಞಾಪಕ ಶಕ್ತಿಯನ್ನು ಉತ್ತಮವಾಗಲಿದೆ ಎಂದು ವಾರ್ತಾ ಇಲಾಖೆಯ ವಾರ್ತಾ ಸಹಾಯಕಿ ಎಂ.ಟಿ.ಭಾಗ್ಯ ಹೇಳಿದರು.
ಶಿವಮೊಗ್ಗ: ಪದಬಂಧ ಬಿಡಿಸುವುದರಿಂದ ಮೆದುಳಿನ ಆರೋಗ್ಯ ವೃದ್ಧಿಯ ಜೊತೆಗೆ ಜ್ಞಾಪಕ ಶಕ್ತಿಯನ್ನು ಉತ್ತಮವಾಗಲಿದೆ ಎಂದು ವಾರ್ತಾ ಇಲಾಖೆಯ ವಾರ್ತಾ ಸಹಾಯಕಿ ಎಂ.ಟಿ.ಭಾಗ್ಯ ಹೇಳಿದರು.
ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಶಾಖೆ ವತಿಯಿಂದ ಭಾನುವಾರ ನಗರದ ವಾಸವಿ ಶಾಲೆಯಲ್ಲಿ ಪತ್ರಿಕಾ ದಸರಾ ಅಂಗವಾಗಿ ಸಾರ್ವಜನಿಕರಿಗಾಗಿ ಆಯೋಜಿಸಿದ್ದ ಪದಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.ಪದಬಂಧ ಬಿಡಿಸುವ ಒಂದು ಕಲೆಯಾಗಿದ್ದು, ಇದರಿಂದ ಸಂಹವನ ಕೌಶಲ್ಯವೂ ಬೆಳೆಯಲಿದೆ. ನಮ್ಮಲ್ಲಿನ ಶಬ್ದ ಬಂಡಾರ ಹೆಚ್ಚಾಗಲಿದೆ. ಸಂಕೀರ್ಣವಾದದ್ದು ಸರಳವಾಗಿ ರೂಪಿಸುವ ಜಾಣ್ಮೆ ಬೆಳೆಯಲಿದೆ. ಮೆದುಳಿಗೆ ಕಸರತ್ತು ಕೊಡುವುದರಿಂದ ಡೊಪೊಮೈನ್ ಹ್ಯಾಪಿ ಹಾರ್ಮೋನ್ ಬಿಡುಗಡೆಯಾಗಿ ಸಂತೋಷವಾಗಿ ಒತ್ತಡದಿಂದಲೂ ನಿರಾಳರಾಗಬಹುದು ಎಂದು ತಿಳಿಸಿದರು.
ಇಂದಿನ ಮೊಬೈಲ್ ಯುಗದಲ್ಲಿ ಪದಬಂಧ ಎಲ್ಲರಿಗೂ ಬೇಕಿದೆ. ಕೆಲವು ಹೊತ್ತಾದರೂ ಪದಬಂಧದಲ್ಲಿ ಮಗ್ನರಾಗುವುದರಿಂದ ಮೊಬೈಲ್‌ನಿಂದ ದೂರ ಉಳಿಯಬಹುದಾಗಿದೆ. ಮುಖ್ಯವಾಗಿ ಮಕ್ಕಳಲ್ಲಿ ಇಂತಹ ಹವ್ಯಾಸ ಬೆಳೆಸುವುದರಿಂದ ಮೊಬೈಲ್‌ನಿಂದ ಸ್ವಲ ಸಮಯವಾದರೂ ದೂರ ಇಡಬಹುದಾಗಿದೆ ಎಂದು ಹೇಳಿದರು.ಎಲ್ಲಾ ದಿನ ಪತ್ರಿಕೆ, ವಾರ ಪತ್ರಿಕೆಗಳಲ್ಲಿಯೂ ಪದಬಂಧಗಳಿರುತ್ತವೆ. ವಾರ್ತಾ ಇಲಾಖೆಯಿಂದ ಪ್ರಕಟಗೊಳ್ಳುವ ಜನಪದಲ್ಲಿಯೂ ಸರಳವಾದ ಪದಬಂಧ ಅಂಕಣವಿರುತ್ತದೆ. ಇಂತಹ ಪದಬಂಧ ಬಿಡಿಸುವುದು ಉತ್ತಮ ಹವ್ಯಾಸವೆಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ವೈದ್ಯ ಅಧ್ಯಕ್ಷತೆ ವಹಿಸಿದ್ದರು.ಸಂಘದ ರಾಜ್ಯ ಸಮಿತಿ ಸದಸ್ಯ ಎನ್. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಟಿ.ಅರುಣ್, ಆರ್.ಎಸ್. ಹಾಲಸ್ವಾಮಿ ಇದ್ದರು.