ನಿಖಿಲ್ ಪರ ಸೋಮಣ್ಣ, ಪ್ರತಾಪಸಿಂಹ ಚುನಾವಣಾ ಪ್ರಚಾರ

| Published : Nov 04 2024, 12:21 AM IST

ಸಾರಾಂಶ

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಅಕ್ಕೂರು, ನಾಗಾಪುರ, ಸಾದರಹಳ್ಳಿಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಪರ ಕೇಂದ್ರ ಸಚಿವ ಸೋಮಣ್ಣ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಮತಯಾಚಿಸಿದರು.

ಚನ್ನಪಟ್ಟಣ: ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಅಕ್ಕೂರು, ನಾಗಾಪುರ, ಸಾದರಹಳ್ಳಿಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಪರ ಕೇಂದ್ರ ಸಚಿವ ಸೋಮಣ್ಣ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಮತಯಾಚಿಸಿದರು.

ಗ್ರಾಮಗಳಲ್ಲಿ ರಸ್ತೆ, ನೀರಿನ‌ ವ್ಯವಸ್ಥೆ, ಉದ್ಯೋಗ ಸೇರಿದಂತೆ ಹಲವು ಸಮಸ್ಯೆಗಳ ಅಹವಾಲು ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಭರವಸೆ ನೀಡಿದರು. ಮತಯಾಚನೆ ಜೊತೆಗೆ ಸ್ಥಳೀಯ ಸಮಸ್ಯೆಗಳನ್ನು ಆಲಿಸಿ ಪಟ್ಟಿ ಮಾಡಿದರು.

ಸೋಮಣ್ಣ ಮಾತನಾಡಿ, ಕಾಂಗ್ರೆಸ್‌ಗೆ ಪಕ್ಷಾಂತರ ಆಗಿರುವ ಯೋಗೇಶ್ವರ್ ಅವರನ್ನ ತರಾಟೆಗೆ ತೆಗೆದುಕೊಂಡು,

ಕಾಂಗ್ರೆಸ್ ಅಭ್ಯರ್ಥಿ ‌ಯೋಗೇಶ್ವರ್ ನಮ್ಮ ಜೊತೆ ಇದ್ದವರು. ಅವರು ಆತುರಕ್ಕೆ, ಅಧಿಕಾರದಾಸೆಯ ಅರಿವಾಗುವಂತೆ ನಾವೆಲ್ಲ ಸೇರಿ ನಿಖಿಲ್‌ರನ್ನು ಗೆಲ್ಲಿಸಬೇಕು. ನಿಮ್ಮ ಸ್ಥಾನ ನಿಮಗೆ ಸಿಗುತ್ತೆ ಅಂತ ನಾನು ಯೋಗೇಶ್ವರ್‌ಗೆ ಹೇಳಿದ್ದೆ. ಆದರೆ‌ ಅವರು ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಮಾಡುತ್ತಿದ್ದಾರೆ. ಮೋದಿ ಅಭಿವೃದ್ಧಿ ಕೆಲಸ ಮಾಡುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ನನಗೆ ಬೆಂಬಲ ಕೊಡದೆ ಇದ್ದಿದ್ದರೆ ನಾನು ಮಂತ್ರಿ ಆಗುತ್ತಿರಲಿಲ್ಲ. ನನಗೆ ಈ ಸ್ಥಾನ ಸಿಗುತ್ತಿರಲಿಲ್ಲ. ಈ ಸರ್ಕಾರ ನಿರ್ಜೀವವಾಗಿದೆ, ಮೂರು ದಿನ ಹಿಂದೆ ಇದ್ದ ಟ್ರೆಂಟ್ ಈಗಿಲ್ಲ. ಯಾರದ್ದೋ ಆಸ್ತಿ, ಎಲ್ಲಮ್ಮನ ಜಾತ್ರೆ ಅಂದಂತಾಗಿದೆ ಎಂದರು.

ನಿಖಿಲ್ ಅವರಿಗೆ ತಂದೆಗಿಂತ ಮುಂದೆ ಹೋಗುವ ಸಾಮರ್ಥ್ಯ ಇದೆ. ಕಾಂಗ್ರೆಸ್‌ನವರು ತುಮಕೂರಿನಲ್ಲಿ ಸೋಮಣ್ಣ ಸೋಲುತ್ತಾರೆ ಅಂದರು. ಆಗ ದೇವೇಗೌಡ ಮತ್ತು ಕುಮಾರಸ್ವಾಮಿ ಭೇಟಿ ನೀಡಿದರು. ಹಾಗಾಗಿ ನಾನು ಗೆದ್ದೆ ಎಂದು ದೇವೇಗೌಡರು ಮತ್ತು ಕುಮಾರಣ್ಣ ಅವರನ್ನು ಸ್ಮರಿಸಿಕೊಂಡರು. ಚುನಾವಣೆ ಮುಗಿದ ಮೇಲೆ ನಾನು ಕುಮಾರಸ್ವಾಮಿ, ‌ನಿಖಿಲ್ ಒಟ್ಟಿಗೆ ಬರುತ್ತೇವೆ. ಇಲ್ಲಿನ ಸಮಸ್ಯೆಗಳ ನೀರಾವರಿ ಬಗ್ಗೆ ಯೋಜನೆ ರೂಪಿಸುತ್ತೇವೆ ಎಂದು ಭರವಸೆ ನೀಡಿದರು.

ಚನ್ನಪಟ್ಟಣ ಮತ್ತು ಮದ್ದೂರು ಮಾರ್ಗ ಮದ್ಯೆ ರೈಲ್ವೆ ನಿಲ್ದಾಣ ಮಾಡಿದರೆ 1500 ಸಾವಿರ ಯುವಕರಿಗೆ ಉಪಯೋಗ ಆಗುತ್ತೆ ಎಂದು ನಿಖಿಲ್ ಅವರು ಸೋಮಣ್ಣ ಹತ್ತಿರ ಪ್ರಸ್ತಾಪಿಸಿದಾಗ ತಕ್ಷಣವೇ ಅದನ್ನು ಕಾರ್ಯರೂಪಕ್ಕೆ ತರುತ್ತೇನೆ. ರಾಮನಗರ ಜಿಲ್ಲೆಯ ರೈಲ್ವೆ ಇಲಾಖೆಯಿಂದ ಏನೇ ಸಮಸ್ಯೆ ಇದ್ದರು ನಾನು ಕೂಡಲೇ ಬಗೆಹರಿಸುತ್ತೇನೆ. ನಿಖಿಲ್ ಅವರನ್ನ ಗೆಲ್ಲಿಸಿ ಕೊಡಿ ಅವರ ಸಮ್ಮುಖದಲ್ಲಿ ದೆಹಲಿಗೆ ಹೋಗಿ ರೈಲ್ವೆ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸಚಿವ ಸೋಮಣ್ಣ ತಿಳಿಸಿದರು.

3ಕೆಆರ್ ಎಂಎನ್ 6.ಜೆಪಿಜಿ

ಚನ್ನಪಟ್ಟಣ ಕ್ಷೇತ್ರ ವ್ಯಾಪ್ತಿಯ ಅಕ್ಕೂರು, ನಾಗಾಪುರ,‌ ಸಾದರಹಳ್ಳಿಯಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಪರ ಕೇಂದ್ರ ಸಚಿವ ಸೋಮಣ್ಣ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ಮತಯಾಚಿಸಿದರು.