ಎಲ್ಲಿ ಆನಂದ ಅನಿಸುತ್ತೋ ಅಲ್ಲಿಗೆ ಎಸ್ಟಿಎಸ್‌ ಹೋಗಲಿ: ಈಶ್ವರಪ್ಪ

| Published : Oct 06 2023, 12:07 PM IST

ಎಲ್ಲಿ ಆನಂದ ಅನಿಸುತ್ತೋ ಅಲ್ಲಿಗೆ ಎಸ್ಟಿಎಸ್‌ ಹೋಗಲಿ: ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದರೆ ಎಸ್‌.ಟಿ.ಸೋಮಶೇಖರ್‌ಗೆ ಎಲ್ಲಿ ಸಂತೋಷ ಸಿಗುತ್ತದೆಯೋ ಅವರು ಅಲ್ಲಿಗೆ ಹೋಗಲಿ ಎಂದು ಕೆ.ಎಸ್‌.ಈಶ್ವರಪ್ಪ ಹೇಳಿದರು.
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಮಾಜಿ ಸಚಿವ ಎಸ್.ಟಿ.ಸೋಮಶೇಖರ್ ಅವರಿಗೆ ಬಿಜೆಪಿಯಲ್ಲಿ ಉಸಿರುಗಟ್ಟಿಸುವ ವಾತಾವರಣ ಇದ್ದರೆ ಅವರಿಗೆ ಎಲ್ಲಿ ಆನಂದವಿದೆ ಅನಿಸುತ್ತದೆಯೋ ಅಲ್ಲಿಗೆ ಹೋಗಲಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ಎಸ್.ಟಿ. ಸೋಮಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿ ಗುರುವಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಖುಷಿ ಇದ್ದರೆ ಬಿಜೆಪಿಯಲ್ಲೇ ಇರಲಿ. ಉಸಿರುಗಟ್ಟಿಸಿರುವ ವಾತಾವರಣ ಇದ್ದರೆ ಎಲ್ಲಿಗೆ ಬೇಕೋ ಅಲ್ಲಿಗೆ ಹೋಗಲಿ ಎಂದರು.