ಅಸ್ಸಾಂ, ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತವನ್ನು ಬಿಗಿಗೊಳಿಸಿದ ನಂತರ ಅಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಆಗಮಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ದೇಶದ ಆಂತರಿಕ ಭದ್ರತೆಗೆ ಸಮಸ್ಯೆಯಾಗಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖರಾದ ಕುಕ್ಕೇರ ಅಜಿತ್ ಹೇಳಿದರು.

ಸೋಮವಾರಪೇಟೆ: ಅಸ್ಸಾಂ, ಪಶ್ಚಿಮ ಬಂಗಾಳದಂತಹ ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದು ಆಡಳಿತವನ್ನು ಬಿಗಿಗೊಳಿಸಿದ ನಂತರ ಅಲ್ಲಿ ನೆಲೆಸಿದ್ದ ಬಾಂಗ್ಲಾ ವಲಸಿಗರು ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಆಗಮಿಸುತ್ತಿದ್ದಾರೆ. ಇದು ಭವಿಷ್ಯದಲ್ಲಿ ದೇಶದ ಆಂತರಿಕ ಭದ್ರತೆಗೆ ಸಮಸ್ಯೆಯಾಗಲಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಪ್ರಾಂತ ಪ್ರಮುಖರಾದ ಕುಕ್ಕೇರ ಅಜಿತ್ ಹೇಳಿದರು.

ಸುರಕ್ಷಾ ಆಂದೋಲನ ಸಮಿತಿ ವತಿಯಿಂದ ಬಾಂಗ್ಲಾ ವಲಸಿಗರನ್ನು ಗಡಿಪಾರು ಮಾಡುವಂತೆ ಖಾಸಗಿ ಬಸ್‌ ನಿಲ್ದಾಣದಲ್ಲಿ ನಡೆದ ಪ್ರತಿಭಟನೆ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಅಸ್ಸಾಂ, ಬಿಹಾರ, ಒಡಿಶಾ, ಪಶ್ಚಿಮಬಂಗಾಳ ಸೇರಿದ ಇತರ ಜಿಲ್ಲೆಗಳ ನಾಗರಿಕರು ಕಾರ್ಮಿಕರಾಗಿ ಆಗಮಿಸಿದರೆ ನಮ್ಮದೇನೂ ಅಭ್ಯಂತರವಿಲ್ಲ. ಆದರೆ ನೆರೆಯ ರಾಜ್ಯದ ಹೆಸರು ಹೇಳಿಕೊಂಡು ಬಾಂಗ್ಲಾದವರು ಕೊಡಗಿನಲ್ಲಿ ಬೀಡು ಬಿಡುತ್ತಿದ್ದಾರೆ. ಇವರಿಂದ ಅಕ್ರಮ ಗೋ ಹತ್ಯೆ, ಸಾಗಾಟ, ಸ್ಥಳೀಯರ ಮೇಲೆ ಹಲ್ಲೆ, ಕೊಲೆಯತ್ನ, ಕೊಲೆ, ದೇವಾಲಯ ಲೂಟಿಯಂತಹ ಕೃತ್ಯಗಳು ನಡೆಯುತ್ತಿವೆ ಎಂದು ದೂರಿದರು.

ತೋಟ ಮಾಲೀಕರೆ ಎಚ್ಚರ: ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಬಾಂಗ್ಲಾ ವಲಸಿಗರ ವಿರುದ್ದ ತೋಟ ಮಾಲೀಕರು ಜಾಗ್ರತೆ ವಹಿಸಬೇಕು. ಅಕ್ರಮ ನುಸುಳುಕೋರರ ಬಗ್ಗೆ ಮಾಹಿತಿಯಿದ್ದಲ್ಲಿ ಪೊಲೀಸ್ ಇಲಾಖೆಗೆ ತಿಳಿಸಬೇಕು. ಕೊಡಗಿನ ಸುರಕ್ಷತೆ ನಮ್ಮೆಲ್ಲರ ಜವಾಬ್ದಾರಿ ಎಂಬುದನ್ನು ಮರೆಯಬಾರದು ಎಂದು ತಿಳಿಸಿದರು.

ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಹಿಂದೂಪರ ಸಂಘಟನೆಗಳ ಮುಖಂಡರಾದ ಸುಭಾಷ್ ತಿಮ್ಮಯ್ಯ, ಬೋಜೇಗೌಡ, ಎಂ.ಬಿ. ಉಮೇಶ್, ದರ್ಶನ್ ಜೋಯಪ್ಪ, ಮಾದಾಪುರ ಸುನಿಲ್, ವಿನು ಮತ್ತಿತರರಿದ್ದರು.