ಗೌಡಳ್ಳಿ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಸಡಗರದಿಂದ ಆಚರಿಸಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆಗೌಡಳ್ಳಿ ಬಿಜಿಎಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಕ್ರಾಂತಿ ಹಬ್ಬವನ್ನು ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಸಡಗರದಿಂದ ಬುಧವಾರ ಆಚರಿಸಿದರು. ಶಾಲಾ ಆವರಣವನ್ನು ಹಬ್ಬದ ಸೊಬಗಿನಿಂದ ಅಲಂಕರಿಸಲಾಗಿದ್ದು, ಎಳ್ಳು–ಬೆಲ್ಲ, ಕಾಫಿ, ಭತ್ತ ಕಬ್ಬು, ಸಿಹಿ ಗೆಣಸು, ಅವರೆಕಾಳು, ಕಾಳುಮೆಣಸು ಇತ್ಯಾದಿಗಳನ್ನು ಪ್ರದರ್ಶಿಸುವ ಮೂಲಕ ಸುಗ್ಗಿ ಹಬ್ಬದ ಮಹತ್ವವನ್ನು ಮಕ್ಕಳಿಗೆ ಪರಿಚಯಿಸಲಾಯಿತು.ಮುಖ್ಯ ಶಿಕ್ಷಕಿ ರತ್ನಮ್ಮ ದೇವೇಗೌಡ ಮಾತನಾಡಿ, ಸಂಕ್ರಾಂತಿ ಹಬ್ಬವು ಪ್ರಕೃತಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ ಎಂದರು.ವಿದ್ಯಾರ್ಥಿಗಳು ಸಂಕ್ರಾಂತಿ ಕುರಿತ ಹಾಡುಗಳು ಹಾಡಿದರು.