ಮೂರ್ನಾಡು ಸರ್ಕಾರಿ ಪ್ರಾಥಮಿಕ (ಪಿಎಂಶ್ರೀ ಶಾಲೆ ) ಶಾಲೆಗೆ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಬ್ಲೂಟೂತ್ ಸ್ಪೀಕರ್ ಕೊಡುಗೆಯಾಗಿ ನೀಡಿದರು.
ನಾಪೋಕ್ಲು: ಇಲ್ಲಿಗೆ ಸಮೀಪದ ಮೂರ್ನಾಡು ಸರ್ಕಾರಿ ಪ್ರಾಥಮಿಕ (ಪಿಎಂಶ್ರೀ ಶಾಲೆ ) ಶಾಲೆಗೆ ಗ್ರಾಮ ಪಂಚಾಯಿತಿ, ವಿವಿಧ ಸಂಘ ಸಂಸ್ಥೆಗಳು ಹಾಗೂ ದಾನಿಗಳು ಬ್ಲೂಟೂತ್ ಸ್ಪೀಕರ್ ಕೊಡುಗೆಯಾಗಿ ನೀಡಿದರು.
ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ, ಮಜೀದ್ ಕೆ ಎ , ಆಪ್ತಮಿತ್ರಾ ಬಳಗ, ಗಜಾನನ ಸಂಘ, ಮತ್ತು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ ಮೂರ್ನಾಡು ಇವರು ಜೊತೆಗೂಡಿ ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಪೂರಕವಾಗಿರುವ ಮನರಂಜನೆ ವಸ್ತುವಾದ ಬ್ಲೂಟೂತ್ ಸ್ಪೀಕರ್ ಅನ್ನು ಶಾಲೆಗೆ ಕೊಡುಗೆಯಾಗಿ ನೀಡಿ ಸಮಾಜಕ್ಕೆ ಮಾದರಿಯಾಗಿದ್ದಾರೆ.