ಸೋಮವಾರಪೇಟೆ: ಸಂಭ್ರಮದ ಓಣಂ ಆಚರಣೆ

| Published : Sep 11 2025, 12:04 AM IST

ಸಾರಾಂಶ

ಮನೆಮನೆಗಳಲ್ಲಿ ಹೂವಿನ ಪೂಕಳಂ ಅಲಂಕಾರ, ನೃತ್ಯ ಸಂಗೀತ ಕಾರ್ಯಕ್ರಮ ಹಬ್ಬದ ಸಂಭ್ರಮ ಹೆಚ್ಚಿಸಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಮಲೆಯಾಳಿ ಜನಾಂಗದ ಜನಪದ ಹಬ್ಬ ಓಣಂ ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ಜರುಗಿತು. ದೇಶ–ವಿದೇಶಗಳಲ್ಲಿ ನೆಲೆಸಿರುವ ಮಲಯಾಳಿ ಸಮುದಾಯದವರು ಸಹ ಓಣಂ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.ಮನೆಮನೆಗಳಲ್ಲಿ ಹೂವಿನ ಪೂಕಳಂ ಅಲಂಕಾರ, ಸಾಂಪ್ರದಾಯಿಕ ಓಣಂಸದ್ಧ್ಯ, ನೃತ್ಯ–ಸಂಗೀತ ಕಾರ್ಯಕ್ರಮಗಳಿಂದ ಹಬ್ಬದ ಸಂಭ್ರಮ ಹೆಚ್ಚಿತು.ಮಹಾಬಲಿ ಚಕ್ರವರ್ತಿಯ ಸುವರ್ಣಯುಗವನ್ನು ಸ್ಮರಿಸುವ ನಿಟ್ಟಿನಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಬಾಂಧವ್ಯದ ಸಂದೇಶ ಸಾರುವ ಹಬ್ಬವಾಗಿದೆ. ಜನರು ಹೊಸ ವಸ್ತ್ರ ತೊಟ್ಟು ಬಂಧು–ಬಳಗದವರೊಂದಿಗೆ ಸೇರಿ ಓಣಸದ್ಧ್ಯ ಸವಿದು ಹಬ್ಬವನ್ನು ಆಚರಿಸಿದರು.ಪಟ್ಟಣದ ರೇಂಜರ್ ಬ್ಲಾಕ್ ನಲ್ಲಿ ವಕೀಲರಾದ ಪದ್ಮನಾಭ ಅವರ ಕುಟುಂಬಸ್ಥರು ಓಣಂ ಹಬ್ಬದ ಪ್ರಯುಕ್ತ ಹೂವಿನ ಪೂಕಳಂ ಅಲಂಕಾರ ಮಾಡಿದರು. ಈ ಸಂದರ್ಭ ಪತ್ನಿ ಪುಷ್ಪಾವತಿ, ಪುತ್ರಿ ಶ್ರೀಲಕ್ಷ್ಮಿ ಹಾಗೂ ತಾಯಿ ಲಕ್ಷ್ಮಿ ಇದ್ದರು.