ಸಾರಾಂಶ
ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಮಂಗಳೂರಿನ ಕುಲಶೇಖರದ ಕೋರ್ಡೆಲ್ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ಅವರು ವೈಟ್ ಸೂಟ್ನಲ್ಲಿ ಕಂಗೊಳಿಸಿದ್ದರು. ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಖಾಸಗಿ ಹಾಲ್‌ನಲ್ಲಿ ಅದ್ದೂರಿ ರೆಸೆಪ್ಷನ್ ಸಹ ಮಾಡಿಕೊಂಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಹಿಂದೂ ಸಂಪ್ರದಾಯದಂತೆ ಹಸೆಮಣೆ ಏರಿದ್ದ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಲ್ ಮೊಂತೆರೋ ಇದೀಗ ಕರಾವಳಿಯ ಮಂಗಳೂರಿನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.ಸೊನಲ್ ಮೊಂತೆರೋ ಮಂಗಳೂರಿನವರಾಗಿದ್ದು, ಅವರ ಕುಟುಂಬಸ್ಥರು ಮಂಗಳೂರಿನಲ್ಲೇ ಇದ್ದಾರೆ. ಆಗಸ್ಟ್ 11ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೆಸ್‌ನಲ್ಲಿ ಈ ನವ ಜೋಡಿ ಅದ್ಧೂರಿಯಾಗಿ ಹಿಂದೂ ಸಂಪ್ರದಾಯದಂತೆ ಕುಟುಂಬಸ್ಥರು, ಗುರು, ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿತ್ತು. ಬಳಿಕ ಮಂಗಳೂರಿನಲ್ಲಿ ಭಾನುವಾರ ಸಂಪೂರ್ಣವಾಗಿ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ಮೂರು ದಿನಗಳ ಹಿಂದೆ ಮಂಗಳೂರಿನ ರೆಸಾರ್ಟ್‌ವೊಂದರಲ್ಲಿ ರೋಸ್ ಸಮಾರಂಭ ನಡೆಸಿದ್ದಾರೆ. ಈ ಕುರಿತ ಚಿತ್ರದ ತುಣುಕನ್ನು ಇನ್‌ಸ್ಟಾದಲ್ಲಿ ಹಂಚಿಕೊಂಡಿದ್ದಾರೆ.ಕ್ರಿಶ್ಚಿಯನ್ ಸಂಪ್ರದಾಯದಂತೆ ತರುಣ್ ಸುಧೀರ್ ಹಾಗೂ ಸೋನಲ್ ಮಂಗಳೂರಿನ ಕುಲಶೇಖರದ ಕೋರ್ಡೆಲ್ ಚರ್ಚ್‌ನಲ್ಲಿ ಉಂಗುರ ಬದಲಾಯಿಸಿಕೊಂಡಿದ್ದಾರೆ. ಸೋನಲ್ ಅವರು ಬಿಳಿ ಬಣ್ಣದ ಲಾಂಗ್ ಗೌನ್ನಲ್ಲಿ ಮಿಂಚಿದ್ದರೆ, ತರುಣ್ ಸುಧೀರ್ ಅವರು ವೈಟ್ ಸೂಟ್ನಲ್ಲಿ ಕಂಗೊಳಿಸಿದ್ದರು. ಚರ್ಚ್ ವೆಡ್ಡಿಂಗ್ ಬಳಿಕ ಸ್ಟಾರ್ ಜೋಡಿ ಮಂಗಳೂರಿನಲ್ಲಿ ಖಾಸಗಿ ಹಾಲ್‌ನಲ್ಲಿ ಅದ್ದೂರಿ ರೆಸೆಪ್ಷನ್ ಸಹ ಮಾಡಿಕೊಂಡಿದೆ. ರಿಸೆಪ್ಷನ್ನಲ್ಲಿಯೂ ತರುಣ್ ಸುಧೀರ್ ಅವರು ಬ್ರೌನ್ ಸೂಟ್ ಹಾಗೂ ನಟಿ ಸೋನಲ್ ಸೀರೆಯಲ್ಲಿ ಮಿಂಚಿದ್ದಾರೆ. ಚಿತ್ರರಂಗದ ನಟ, ನಟಿಯರು ಸೇರಿದಂತೆ ಆಹ್ವಾನಿತ ಗಣ್ಯರ ದಂಡೇ ಆಗಮಿಸಿತ್ತು.